ನಟಿ ಕಿಯಾರಾ ಅಡ್ವಾಣಿ (Kiara Advani) ಹಾಗೂ ನಟ ಸಿದ್ದಾರ್ಥ್ ಮಲ್ಹೋತ್ರ ಇಬ್ಬರೂ ಮದುವೆ ಆಗುತ್ತಿದ್ದಾರೆ. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಈಗ ಹೊಸ ಬಾಳಿಗೆ ಕಾಲಿಡುವ ಸಂಭ್ರಮದಲ್ಲಿದೆ. ರಾಜಸ್ಥಾನದಲ್ಲಿ ಇವರು ಮದುವೆ ಆಗಲಿದ್ದಾರೆ. ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಮಗಳು ಇಶಾ ಅಂಬಾನಿ ಈ ಮದುವೆಗೆ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಫೆಬ್ರವರಿ 6ರಂದು ವಿವಾಹ ಕಾರ್ಯಗಳು ನಡೆಯಲಿವೆ. ಸದ್ಯ, ಮದುವೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ.
ಬಾಲಿವುಡ್ನಲ್ಲಿ ಸಾಲು ಸಾಲು ವಿವಾಹಗಳು ನಡೆಯುತ್ತಿವೆ. 2021ರಲ್ಲಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ಆದರು. 2022ರಲ್ಲಿ ಆಲಿಯಾ ಭಟ್-ರಣಬೀರ್ ಕಪೂರ್ ಹಸೆಮಣೆ ಏರಿದರು. ಇತ್ತೀಚೆಗೆ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಕೆಎಲ್ ರಾಹುಲ್ ವಿವಾಹ ನಡೆಯಿತು. ಈಗ ಕಿಯಾರಾ ಹಾಗೂ ಸಿದ್ದಾರ್ಥ್ ಸರದಿ. ಈ ಜೋಡಿ ರಾಜಸ್ಥಾನದ ಜೈಸಲ್ಮೇರ್ನಲ್ಲಿರುವ ಸೂರ್ಯಗಢ ಪ್ಯಾಲೇಸ್ನಲ್ಲಿ ಮದುವೆ ಆಗಲಿದೆ.
ಸದ್ಯ ಮದುವೆ ತಯಾರಿಗಳು ನಡೆಯುತ್ತಿವೆ. ಸಿದ್ದಾರ್ಥ್ ಹಾಗೂ ಕಿಯಾರಾ ಶಾಪಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಬಾಲಿವುಡ್ ಫೋಟೋಗ್ರಾಫರ್ಗಳು ಮದುವೆ ನಡೆಯುವ ಸ್ಥಳಕ್ಕೆ ತೆರಳಿದ್ದಾರೆ. ಇಶಾ ಅಂಬಾನಿ ಕೂಡ ಮದುವೆಗೆ ಹಾಜರಾಗಲಿದ್ದಾರೆ. ಕಿಯಾರಾ ಹಾಗೂ ಇಶಾ ಚಿಕ್ಕವಯಸ್ಸಿನಿಂದ ಫ್ರೆಂಡ್ಸ್. ಹೀಗಾಗಿ, ಗೆಳತಿ ಮದುವೆಗೆ ಅವರು ಹಾಜರಿ ಹಾಕಲಿದ್ದಾರೆ.
ಈ ಮದುವೆಗೆ ಬಾಲಿವುಡ್ನ ಅನೇಕರು ಹಾಜರಿ ಹಾಕಲಿದ್ದಾರೆ. ಕರಣ್ ಜೋಹರ್ ಅವರು ಸಿದ್ದಾರ್ಥ್ ಹಾಗೂ ಕಿಯಾರಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದವರು. ಇಬ್ಬರಿಗೂ ಕರಣ್ ಅವರೇ ಗಾಡ್ ಫಾದರ್. ಹೀಗಾಗಿ ಕರಣ್ ಈ ವಿಶೇಷ ಕ್ಷಣವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಕರಣ್ ಮಾತ್ರವಲ್ಲದೆ ರೋಹಿತ್ ಶೆಟ್ಟಿ ಮೊದಲಾದವರು ಈ ಮದುವೆಗೆ ಹಾಜರಿ ಹಾಕಲಿದ್ದಾರೆ.
ಇದನ್ನೂ ಓದಿ: ‘ಪಠಾಣ್’ ನಿರ್ದೇಶಕನಿಂದ ಮತ್ತೊಂದು ಮಲ್ಟಿ ಸ್ಟಾರರ್ ಪ್ಲ್ಯಾನ್; ಪ್ರಭಾಸ್ ಜತೆ ಹಿಂದಿ ಹೀರೋ
‘ಶೇರ್ಷಾ’ ಸಿನಿಮಾದಲ್ಲಿ ಕಿಯಾರಾ ಹಾಗೂ ಸಿದ್ದಾರ್ಥ್ ಮೊದಲ ಬಾರಿಗೆ ಒಟ್ಟಾಗಿ ನಟಿಸಿದರು. ಈ ಸಿನಿಮಾದ ಸೆಟ್ನಲ್ಲಿ ಇಬ್ಬರ ಮಧ್ಯೆ ಪ್ರೀತಿ ಮೂಡಿತ್ತು. ಈಗ ಇವರ ಪ್ರೀತಿಗೆ ಹೊಸ ಅರ್ಥ ನೀಡಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:53 am, Fri, 3 February 23