AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಳಿ ಮಕ್ಕಳಿಗೆ ಅಮ್ಮನಾದ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ

ನಮ್ಮ ಮಕ್ಕಳಾದ ಇಶಾ ಮತ್ತು ಆನಂದ್ ಅವರಿಗೆ 2022 ರ ನವೆಂಬರ್ 19 ರಂದು ಸರ್ವಶಕ್ತನು ಅವಳಿ ಮಕ್ಕಳನ್ನು ಕರುಣಿಸಿದ್ದಾನೆ ಎಂದು ತಿಳಿಸಲು ನಾವು ಸಂತೋಷಪಡುತ್ತೇವೆ ಎಂದು ಅಂಬಾನಿ ಕುಟುಂಬ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಅವಳಿ ಮಕ್ಕಳಿಗೆ ಅಮ್ಮನಾದ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ
ಇಶಾ ಅಂಬಾನಿ- ಆನಂದ್ ಪಿರಾಮಲ್
TV9 Web
| Edited By: |

Updated on:Nov 20, 2022 | 3:36 PM

Share

ಬಿಲಿಯನೇರ್ ಮುಕೇಶ್ ಅಂಬಾನಿ(Mukesh Ambani) ಅವರ ಮಗಳು ಇಶಾ ಅಂಬಾನಿ(Isha Ambani) – ಆನಂದ್ ಪಿರಾಮಲ್ (Anand Piramal) ದಂಪತಿಗೆ ಅವಳಿ ಮಕ್ಕಳು ಜನಿಸಿದ್ದಾರೆ. ನಮ್ಮ ಮಕ್ಕಳಾದ ಇಶಾ ಮತ್ತು ಆನಂದ್ ಅವರಿಗೆ 2022 ರ ನವೆಂಬರ್ 19 ರಂದು ಸರ್ವಶಕ್ತನು ಅವಳಿ ಮಕ್ಕಳನ್ನು ಕರುಣಿಸಿದ್ದಾನೆ ಎಂದು ತಿಳಿಸಲು ನಾವು ಸಂತೋಷಪಡುತ್ತೇವೆ” ಎಂದು ಅಂಬಾನಿ ಕುಟುಂಬ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಇಶಾ ಅಂಬಾನಿ-ಆನಂದ್ ಪಿರಾಮಲ್ ಈಗ ಅವಳಿ ಮಕ್ಕಳಿಗೆ ಪೋಷಕರು. ಅವರು ಗಂಡು ಮತ್ತು ಹೆಣ್ಣು ಮಗುವನ್ನು ಇಂದು ಸ್ವಾಗತಿಸಿದ್ದಾರೆ. ಮಕ್ಕಳಿಗೆ ಆದಿಯಾ ಮತ್ತು ಕೃಷ್ಣ ಎಂದು ಹೆಸರಿಡಲಾಗಿದೆ. ಮಕ್ಕಳು ಮತ್ತು ಅಮ್ಮ ಆರೋಗ್ಯವಾಗಿದ್ದಾರೆ. “ಆದಿಯಾ, ಕೃಷ್ಣ, ಇಶಾ ಮತ್ತು ಆನಂದ್ ಅವರ ಜೀವನದ ಈ ಪ್ರಮುಖ ಹಂತದಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಬಯಸುತ್ತೇವೆ ಎಂದು ಅಂಬಾನಿ ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ.

ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ 2018 ರಲ್ಲಿ ವಿವಾಹವಾಗಿದ್ದರು.ಇಬ್ಬರೂ ಬಹುಕಾಲದ ಬಾಲ್ಯದ ಗೆಳೆಯರು ಮತ್ತು ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬಗಳು ಸಹ ಬಲವಾದ ಬಾಂಧವ್ಯವನ್ನು ಹೊಂದಿವೆ.

Published On - 3:12 pm, Sun, 20 November 22