ಸೋಮಿ ಅಲಿ ಬಾಲಿವುಡ್ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಇವರು ಸಲ್ಲು ಜತೆ ರಿಲೇಶನ್ಶಿಪ್ನಲ್ಲೂ ಇದ್ದರು. ಈಗ ಎಲ್ಲವನ್ನೂ ಬಿಟ್ಟು ತಮ್ಮದೇ ಎನ್‌ಜಿಒ ಕಟ್ಟಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ. ಅಚ್ಚರಿ ಎಂದರೆ, ಇವರು 15ನೇ ವಯಸ್ಸಿಗೆ ಗಾಂಜಾ ಸೇವನೆ ಮಾಡಿದ್ದರು. ಇದನ್ನು ಅವರು ಒಪ್ಪಿಕೊಂಡಿದ್ದಾರೆ.
‘ಮಾನವ ಹಕ್ಕುಗಳ ಕಾರ್ಯಕರ್ತೆಯಾಗು ಮತ್ತು ಎನ್‌ಜಿಒ ಸ್ಥಾಪಕಿಯಾಗಿ ಕಷ್ಟದ ಪರಿಸ್ಥಿತಿ ಎದುರಿಸುತ್ತಿರುವವರಿಗೆ ಸಹಾಯ ಮಾಡೋದು ನನಗೆ ಅಭ್ಯಾಸವಾಗಿದೆ. ಇದೀಗ ಆರ್ಯನ್ ಮತ್ತು ಅವನ ಪೋಷಕರು ಕಷ್ಟದ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ. ಇದಕ್ಕಾಗಿ ನನ್ನ ಧ್ವನಿ ಎತ್ತುತ್ತಿದ್ದೇನೆ’ ಎಂದಿದ್ದಾರೆ ಅವರು.
‘ನಾನು 15ನೇ ವಯಸ್ಸಿಗೆ ಗಾಂಜಾ ಸೇದಿದ್ದೆ. ನಂತರ ಶೂಟಿಂಗ್ ಸೆಟ್ನಲ್ಲೂ ಒಮ್ಮೆ ಅದನ್ನು ತೆಗೆದುಕೊಂಡಿದ್ದ. ಯುವಕರಾಗಿದ್ದಾಗ ಅನೇಕರು ಇದನ್ನು ಪ್ರಯತ್ನಿಸುತ್ತಾರೆ ಮತ್ತು ಕೆಲವರು ಮಾತ್ರ ಅದೇ ಗುಂಗಿನಲ್ಲಿರುತ್ತಾರೆ, ಬಹುತೇಕರು ಅದರಿಂದ ಹೊರ ಬರುತ್ತಾರೆ. ಇದೆಲ್ಲವೂ ನನಗಲ್ಲ ಎಂಬುದು ಜ್ಞಾನೋದವಾಯಿತು’ ಎಂದರು ಸೋಮಿ.
‘ನಾವು ಹಣವಂತರಾಗಲಿ ಅಥವಾ ಬಡವರಾಗಲಿ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುತ್ತೇವೆ ಎಂಬುದನ್ನು ನ್ಯಾಯಾಂಗಕ್ಕೆ ಸಾಬೀತು ಮಾಡಬೇಕಿದೆ. ಅದಕ್ಕೆ ಆರ್ಯನ್ಗೆ ಜಾಮೀನು ನೀಡುತ್ತಿಲ್ಲ. ಆತ ಯುವಕ. ನಾವೇಕೆ ಅವರನ್ನು ಮಾನ್ಸ್ಟರ್ ಎಂಬ ರೀತಿಯಲ್ಲಿ ಬಿಂಬಿಸಬೇಕು? ಮುಂಬೈನಲ್ಲಿ ಮನೆ ಇಲ್ಲದ ಅನೇಕರು ಡ್ರಗ್ನ ದಾಸರಾಗಿದ್ದಾರೆ. ಪೊಲೀಸರು ಅವರನ್ನು ಬಂಧಿಸುತ್ತಿಲ್ಲ. ಏಕೆಂದರೆ, ಅವರು ಶಾರುಖ್ ಹಾಗೂ ಗೌರಿ ಖಾನ್ ಮಕ್ಕಳಲ್ಲ’ ಎಂದು ನ್ಯಾಯಾಂಗ ಹಾಗೂ ಪೊಲೀಸ್ ವ್ಯವಸ್ಥೆಯನ್ನು ಅವರು ಟೀಕಿಸಿದ್ದಾರೆ.
ಅಕ್ಟೋಬರ್ 2ರಂದು ಮುಂಬೈನ ಐಷಾರಾಮಿ ಕ್ರೂಸ್ ಹಡಗಿನಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಆರ್ಯನ್ ಖಾನ್ ಬಂಧನಕ್ಕೆ ಒಳಗಾದರು. ಅವರನ್ನು ಎನ್ಸಿಬಿ ವಶಕ್ಕೆ ಪಡೆಯಿತು. ಕೆಲ ದಿನಗಳ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಇದಾದ ನಂತರ ಆರ್ಯನ್ಗೆ ಕಿಲ್ಲಾ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆರ್ಯನ್ ಪರ ವಕೀಲರಾದ ಸತೀಶ್ ಮಾನೇಶಿಂಧೆ ಅವರು ಎಷ್ಟೇ ಪ್ರಯತ್ನ ಮಾಡಿದರೂ ಜಾಮೀನು ಸಿಗುತ್ತಿಲ್ಲ.
ಇದನ್ನೂ ಓದಿ: ‘ಕುಟುಂಬಕ್ಕೆ ಸಮಸ್ಯೆ ಆದಾಗ ಮೊದಲು ಬರೋದು ಸಲ್ಮಾನ್’; ಶಾರುಖ್ ಮಾತನಾಡಿದ್ದ ಹಳೆಯ ವಿಡಿಯೋ ವೈರಲ್
ಮಗನಿಗಾಗಿ ನಿದ್ದೆ, ಊಟ ತ್ಯಜಿಸಿದ ಶಾರುಖ್ ಖಾನ್; ಹೀಗಾದರೆ ಫಿಟ್ನೆಸ್ ಗತಿಯೇನು?