ಖ್ಯಾತ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಝಹೀರ್ ಇಖ್ಬಾಲ್ ಜೊತೆ ಅವರ ಮದುವೆ ನೆರವೇರಿದೆ. ಇಂದು (ಜೂನ್ 23) ಮುಂಬೈನಲ್ಲಿ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್ ಇಖ್ಬಾಲ್ (Zaheer Iqbal) ಅವರು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಇವರದ್ದು ಅಂತರ್ಧರ್ಮೀಯ ವಿವಾಹ. ಸಂಭ್ರಮದಿಂದ ನಡೆದ ಮದುವೆಯ ಬಳಿಕ ಝಹೀರ್ ಇಖ್ಬಾಲ್ ಮತ್ತು ಸೋನಾಕ್ಷಿ ಸಿನ್ಹಾ ಅವರು ಮೊದಲ ಫೋಟೋವನ್ನು (Sonakshi Sinha Marriage Photo) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು, ಆಪ್ತರು ಮತ್ತು ಸೆಲೆಬ್ರಿಟಿಗಳು ಈ ಜೋಡಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
ವಿಶೇಷ ಏನೆಂದರೆ, ಸೋನಾಕ್ಷಿ ಸಿನ್ಹಾ ಮತ್ತು ಝಹೀರ್ ಇಖ್ಬಾಲ್ ಅವರದ್ದು 7 ವರ್ಷಗಳ ಹಿಂದಿನ ಪ್ರೀತಿ. ತಮ್ಮಿಬ್ಬರ ಪ್ರೇಮ್ ಕಹಾನಿ ಬಗ್ಗೆ ಅವರು ಸಾಧ್ಯವಾದಷ್ಟು ಗೌಪ್ಯತೆ ಕಾಪಾಡಿಕೊಂಡಿದ್ದರು. ಈಗ ಅವರು ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಅಂದಹಾಗೆ, 7 ವರ್ಷಗಳ ಹಿಂದೆ ಪ್ರೀತಿ ಚಿಗುರಿದ ಈ ದಿನಾಂಕದಲ್ಲೇ (ಜೂನ್ 23) ಅವರು ಮದುವೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ದ್ವಿಪಾತ್ರ ಮಾಡಿ ಸೈ ಎನಿಸಿಕೊಂಡ ನಟಿ ಸೋನಾಕ್ಷಿ ಸಿನ್ಹಾ
ಇನ್ಸ್ಟಾಗ್ರಾಮ್ನಲ್ಲಿ ಝಹೀರ್ ಇಖ್ಬಾಲ್ ಮತ್ತು ಸೋನಾಕ್ಷಿ ಸಿನ್ಹಾ ಅವರು ತಮ್ಮ ಲವ್ ಸ್ಟೋರಿಯ ಫ್ಲ್ಯಾಶ್ಬ್ಯಾಕ್ ಬಗ್ಗೆ ತಿಳಿಸಿದಾರೆ.‘7 ವರ್ಷಗಳ ಹಿಂದೆ ಇದೇ ದಿನಾಂಕದಂದು (23.06.2017) ಪರಸ್ಪರ ನಾವು ನಮ್ಮ ಕಣ್ಣಿನಲ್ಲಿ ನಿರ್ಮಲವಾದ ಪ್ರೀತಿಯನ್ನು ಕಂಡೆವು ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದೆವು. ಅದೇ ಪ್ರೀತಿ ನಮಗೆ ಎಲ್ಲ ಸವಾಲುಗಳನ್ನು ಎದುರಿಸಲು ದಾರಿ ತೋರಿಸಿದೆ. ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ’ ಎಂದು ನವ ದಂಪತಿ ಪೋಸ್ಟ್ ಮಾಡಿದ್ದಾರೆ.
‘ಎರಡು ಕುಟುಂಬದವರ ಮತ್ತು ದೇವರ ಆಶೀರ್ವಾದದಿಂದ ನಾವು ಇಂದು ಸತಿ-ಪತಿ ಆಗಿದ್ದೇವೆ’ ಎಂದು ಬರೆದುಕೊಳ್ಳುವ ಮೂಲಕ ಸೋನಾಕ್ಷಿ ಸಿನ್ಹಾ ಮತ್ತು ಝಹೀರ್ ಇಖ್ಬಾಲ್ ಅವರು ತಮ್ಮ ಮದುವೆಯ ಸಿಹಿ ಸುದ್ದಿಯನ್ನು ಫೋಟೋ ಸಮೇತ ನೀಡಿದ್ದಾರೆ. ಇದು ಅಂತರ್ಧರ್ಮೀಯ ವಿವಾಹ ಆದ್ದರಿಂದ ಆರಂಭದಲ್ಲಿ ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾಗೆ ಇಷ್ಟ ಇರಲಿಲ್ಲ ಎಂದು ಗಾಸಿಪ್ ಹಬ್ಬಿತ್ತು. ನಂತರದ ದಿನಗಳಲ್ಲಿ ಅವರು ಆ ಮಾತನ್ನು ತಳ್ಳಿ ಹಾಕಿದ್ದರು. ಇಂದು ಶತ್ರುಘ್ನ ಸಿನ್ಹಾ ಅವರು ಖುಷಿಯಿಂದಲೇ ಪಾಲ್ಗೊಂಡಿದ್ದಾರೆ. ರಾತ್ರಿ ಬಾಲಿವುಡ್ನ ಆಪ್ತರಿಗಾಗಿ ರಿಸೆಪ್ಷನ್ ಆಯೋಜಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.