
ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರ ಅಂತರ್ಧರ್ಮೀಯ ವಿವಾಹದ ಬಗ್ಗೆ ಅವರ ಸಹೋದರರಿಬ್ಬರೂ ಸಂತೋಷವಾಗಿಲ್ಲ ಎಂಬ ಅಂಶದ ಬಗ್ಗೆ ಅನೇಕ ಚರ್ಚೆಗಳು ನಡೆದವು. ಇದಕ್ಕೆ ಕಾರಣವೆಂದರೆ ಸಹೋದರಿ ಸೋನಾಕ್ಷಿ ಮತ್ತು ಅವರ ಮುಸ್ಲಿಂ ಗೆಳೆಯ ಜಹೀರ್ ಇಕ್ಬಾಲ್ ಅವರ ವಿವಾಹದಲ್ಲಿ ಇಬ್ಬರೂ ಸಹೋದರರು ಹಾಜರಿರಲಿಲ್ಲ. ಇದರಿಂದಾಗಿ ಅವರ ನಡುವಿನ ಕೌಟುಂಬಿಕ ವಿವಾದ ಸುದ್ದಿಯಲ್ಲಿತ್ತು. ಅವರ ಇಬ್ಬರೂ ಸಹೋದರರು ಸೋನಾಕ್ಷಿಯೊಂದಿಗೆ ಅಸಮಾಧಾನಗೊಂಡಿದ್ದರು ಎಂದು ಹೇಳಲಾಗಿತ್ತು. ಇದಲ್ಲದೆ, ಸಹೋದರರಲ್ಲಿ ಒಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವ್ಯಂಗ್ಯಾತ್ಮಕ ಪೋಸ್ಟ್‌ಗಳನ್ನು ಸಹ ಬರೆದಿದ್ದರು. ಈಗ ಕುಶ್ ಸಿನ್ಹಾ ತಮ್ಮ ಸಹೋದರಿಯೊಂದಿಗಿನ ವಿವಾದದ ಚರ್ಚೆಗಳ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಅವರು ಈಗಲೂ ಸಹೋದರಿ ಜೊತೆ ಸರಿಯಾಗಿ ಇಲ್ಲ ಎನ್ನಲಾಗಿದೆ.
ಕುಶ್ ಶೀಘ್ರದಲ್ಲೇ ‘ನಿಕಿತಾ ರಾಯ್’ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಅವರ ಸಹೋದರಿ ಸೋನಾಕ್ಷಿ ಅವರು ‘ನಿಕಿತಾ ರಾಯ್’ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪ್ರಚಾರದ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ, ಕುಶ್ ಅವರನ್ನು ತಮ್ಮ ಸಹೋದರಿಯೊಂದಿಗಿನ ಸಂಬಂಧದ ಬಗ್ಗೆ ಕೇಳಲಾಯಿತು.
ಇದನ್ನೂ ಓದಿ:ಮುಂಬೈನಲ್ಲಿ ಹೊಸ ಮನೆ ಖರೀದಿಸಿದ ಸೊನಾಕ್ಷಿ ಸಿನ್ಹಾ: ಬೆಲೆ ಎಷ್ಟು ಕೋಟಿ?
‘ಸೆಟ್‌ನಲ್ಲಿ ಅವರು ನಟಿ ಮತ್ತು ಸಾಕಷ್ಟು ಕೆಲಸದ ಅನುಭವ ಹೊಂದಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ನಾನು ಇದನ್ನು ಮನಸ್ಸಿನಲ್ಲಿಟ್ಟುಕೊಂಡೆ ಮತ್ತು ಸೆಟ್‌ನಲ್ಲಿ ನಾನು ಅವರನ್ನು ನಟಿಯಂತೆಯೇ ಗೌರವದಿಂದ ನಡೆಸಿಕೊಂಡೆ. ನಾನು ಎಲ್ಲರನ್ನೂ ಹಾಗೆಯೇ ನಡೆಸಿಕೊಳ್ಳುತ್ತೇನೆ. ಅವರು ನನ್ನ ಸಂಬಂಧಿಕರಾಗಿರಲಿ ಅಥವಾ ಇಲ್ಲದಿರಲಿ. ನಟರಿಗೆ ಕೆಲಸದ ಕೊರತೆ ಇರುವುದಿಲ್ಲ ಎಂದು ನಮಗೆ ತಿಳಿದಿದೆ. ಅವರಿಗೆ ಪ್ರತಿ ವಾರ ಸ್ಕ್ರಿಪ್ಟ್‌ಗಳು ಬರುತ್ತಿರುತ್ತವೆ. ಅದೇ ರೀತಿ, ಯಾರಾದರೂ ನಿಮ್ಮ ಯೋಜನೆಗೆ ತಮ್ಮ ಸಮಯವನ್ನು ಮೀಸಲಿಡುತ್ತಿದ್ದರೆ, ನೀವು ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು’ ಎಂದು ಕುಶ್ ಹೇಳಿದರು. ಅವರ ಉತ್ತರದಲ್ಲಿ ಸಾಕಷ್ಟು ಫಾರ್ಮಾಲಿಟಿ ಕಾಣಿಸಿದೆ.
ಮತ್ತೊಂದೆಡೆ, ಸೋನಾಕ್ಷಿಯ ಮತ್ತೊಬ್ಬ ಸಹೋದರ ಲವ ಸಿನ್ಹಾ ಅವರ ಮದುವೆಯ ನಂತರ ತಮ್ಮ ಟ್ವಿಟರ್ ಖಾತೆಯಲ್ಲಿ ಒಂದು ಪೋಸ್ಟ್ ಬರೆದಿದ್ದರು. ಅದರಲ್ಲಿ, ‘ಏನೇ ಇರಲಿ, ನಾನು ಎಂದಿಗೂ ಕೆಲವು ಜನರೊಂದಿಗೆ ಸಂಬಂಧದಲ್ಲಿರಲು ಬಯಸಲಿಲ್ಲ, ಅದಕ್ಕಾಗಿಯೇ ನಾನು ಮದುವೆಗೆ ಹೋಗಲಿಲ್ಲ’ ಎಂದು ಬರೆದಿದ್ದರು. ಈ ಪೋಸ್ಟ್ ಸೋನಾಕ್ಷಿಯ ಒಡಹುಟ್ಟಿದವರ ನಡುವಿನ ಅಸಮಾಧಾನವನ್ನು ಸ್ಪಷ್ಟವಾಗಿ ತೋರಿಸಿದೆ.
ಏಳು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಸೋನಾಕ್ಷಿ ಮತ್ತು ಜಹೀರ್ ಅಂತಿಮವಾಗಿ ಕಳೆದ ಜೂನ್ 23 ರಂದು ವಿವಾಹವಾದರು. ಅದರ ನಂತರ, ಅವರು ಅದ್ಧೂರಿ ಆರತಕ್ಷತೆ ಪಾರ್ಟಿಯನ್ನು ಆಯೋಜಿಸಿದರು. ಆದಾಗ್ಯೂ, ಸೋನಾಕ್ಷಿಯ ಸಹೋದರರಾದ ಲವ ಮತ್ತು ಕುಶ್ ಎಲ್ಲಿಯೂ ಕಾಣಿಸಲಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ