Sonam Kapoor: ನಿರ್ಮಾಪಕರ ನಿರ್ಧಾರದಿಂದ ಶಾಕ್​ಗೆ ಒಳಗಾದ ನಟಿ ಸೋನಂ ಕಪೂರ್; ಈ ರೀತಿ ಆಗಬಾರದಿತ್ತು ಎಂದ ಫ್ಯಾನ್ಸ್

|

Updated on: Jun 29, 2023 | 7:46 AM

ಸೋನಂ ಕಪೂರ್ ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಈಗ ನಿರ್ಮಾಪಕರು ತೆಗೆದುಕೊಂಡ ನಿರ್ಧಾರ ಅವರಿಗೆ ಬೇಸರ ಮೂಡಿಸಿದೆ.

Sonam Kapoor: ನಿರ್ಮಾಪಕರ ನಿರ್ಧಾರದಿಂದ ಶಾಕ್​ಗೆ ಒಳಗಾದ ನಟಿ ಸೋನಂ ಕಪೂರ್; ಈ ರೀತಿ ಆಗಬಾರದಿತ್ತು ಎಂದ ಫ್ಯಾನ್ಸ್
ಸೋನಂ ಕಪೂರ್
Follow us on

ಯಾವುದೇ ಸಿನಿಮಾ ಮೊದಲು ಥಿಯೇಟರ್​ನಲ್ಲಿ ರಿಲೀಸ್ ಆಗಿ ಬಳಿಕ ಒಟಿಟಿಗೆ ಕಾಲಿಟ್ಟರೆ ನಟಿಸಿದ ಕಲಾವಿದರಿಗೂ, ಅಭಿಮಾನಿಗಳಿಗೂ ಖುಷಿ ಆಗುತ್ತದೆ. ಆದರೆ, ನಿರ್ಮಾಪಕರು ನಷ್ಟ ತಪ್ಪಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಕೆಲವೊಮ್ಮೆ ನೇರವಾಗಿ ಒಟಿಟಿಗೆ ಸಿನಿಮಾ ತರುತ್ತಾರೆ. ಇದರಿಂದ ಚಿತ್ರ ರಿಲೀಸ್ ಮಾಡುವ ಖರ್ಚು ಉಳಿಯುತ್ತದೆ ಹಾಗೂ ಒಟಿಟಿ ಸಂಸ್ಥೆಯಿಂದ ಹೆಚ್ಚು ಹಣ ಸಿಗುತ್ತದೆ. ನಿರ್ಮಾಪಕರ ಈ ನಿರ್ಧಾರದಿಂದ ಕೆಲವೊಮ್ಮೆ ಕಲಾವಿದರಿಗೆ ಬೇಸರ ಆಗಿದ್ದೂ ಇದೆ. ಈಗ ನಟಿ ಸೋನಂ ಕಪೂರ್​ (Sonam Kapoor) ಅವರಿಗೆ ಹಾಗೆಯೇ ಆಗಿದೆ. ‘ಬ್ಲೈಂಡ್’ ಸಿನಿಮಾ (Blind Movie) ನೇರವಾಗಿ ಜಿಯೋ ಸಿನಿಮಾ ಮೂಲಕ ಪ್ರಸಾರ ಕಾಣಲಿದೆ.

ಸೋನಂ ಕಪೂರ್ ಅವರು ಮದುವೆ ಆಗಿದ್ದಾರೆ. ಮಗು ಕೂಡ ಜನಿಸಿದೆ. ಹೀಗಾಗಿ, ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. 2019ರಲ್ಲಿ ರಿಲೀಸ್ ಆದ ‘ದಿ ಜೋಯಾ ಫ್ಯಾಕ್ಟರ್’ ಚಿತ್ರವೇ ಕೊನೆ. ಅದಾದ ಬಳಿಕ ಅವರು ಯಾವುದೇ ಚಿತ್ರಗಳಲ್ಲೂ ನಟಿಸಿಲ್ಲ. ಈಗ ನಾಲ್ಕು ವರ್ಷಗಳ ಬಳಿಕ ಅವರು ದೊಡ್ಡ ಪರದೆಗೆ ಕಾಲಿಡಬೇಕಿತ್ತು. ‘ಬ್ಲೈಂಡ್’ ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ ಅನ್ನೋದು ಅವರ ಆಲೋಚನೆ ಆಗಿತ್ತು. ಆದರೆ, ಅದು ಸುಳ್ಳಾಗಿದೆ.

ಸೋನಂ ಕಪೂರ್ ಅವರಿಗೆ ಯಾವುದೇ ಮಾಹಿತಿ ನೀಡದೆ, ‘ಬ್ಲೈಂಡ್’ ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲು ನಿರ್ಮಾಪಕ ಸುಜಯ್ ಘೋಷ್ ನಿರ್ಧರಿಸಿದ್ದಾರೆ. ಈ ವಿಚಾರದಲ್ಲಿ ನಿರ್ದೇಶಕರಾಗಲಿ, ನಿರ್ಮಾಪಕರಾಗಲಿ ಸೋನಂ ಅವರನ್ನು ಸಂಪರ್ಕಿಸಿಲ್ಲ. ಇದು ಅವರ ಬೇಸರಕ್ಕೆ ಕಾರಣ ಆಗಿದೆ. ನೇರವಾಗಿ ಥಿಯೇಟರ್​ನಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾ ಒಟಿಟಿಗೆ ಬರುತ್ತಿರುವ ಬಗ್ಗೆ ಬೇಸರ ಇದೆ. ಸೋನಂ ಫ್ಯಾನ್ಸ್​ಗೂ ಈ ವಿಚಾರ ಬೇಸರ ತಂದಿದೆ.

ಇದನ್ನೂ ಓದಿ: 32 ಕೋಟಿ ರೂಪಾಯಿಗೆ ಮನೆ ಮಾರಿಕೊಂಡ ನಟಿ ಸೋನಂ ಕಪೂರ್​

ಇತ್ತೀಚಿನ ವರ್ಷಗಳಲ್ಲಿ ರಿಮೇಕ್ ಸಿನಿಮಾಗಳು ಕೈ ಹಿಡಿಯುತ್ತಿಲ್ಲ. ‘ಬ್ಲೈಂಡ್’ ಕೂಡ ರಿಮೇಕ್ ಚಿತ್ರವೇ. 2011ರಲ್ಲಿ ರಿಲೀಸ್ ಆದ ಕೊರಿಯನ್ ಭಾಷೆಯ ‘ಬ್ಲೈಂಡ್’ ಚಿತ್ರದ ರಿಮೇಕ್ ಇದು. ರಿಮೇಕ್ ಸಿನಿಮಾಗಳನ್ನು ಜನರು ರಿಜೆಕ್ಟ್ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸೋನಂ ಅಭಿಮಾನಿ ಬಳಗ ಕಿರಿದಾಗುತ್ತಿದೆ. ಈ ಎಲ್ಲಾ ಕಾರಣಕ್ಕೆ ನಿರ್ಮಾಪಕರು ಸಿನಿಮಾನ ನೇರವಾಗಿ ಒಟಿಟಿಗೆ ತರಲು ನಿರ್ಧರಿಸಿದರು. ಜುಲೈ 7ಕ್ಕೆ ಸಿನಿಮಾ ಪ್ರಸಾರ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ