ಭರವಸೆ ಈಡೇರಿಸದ ಸೋನು ಸೂದ್​ಗೆ ಹೆಚ್ಚಿತು ಸಂಕಷ್ಟ; ನಟನಿಗೆ ಎರಡನೇ ಬಾರಿಗೆ ನೋಟಿಸ್​

| Updated By: ರಾಜೇಶ್ ದುಗ್ಗುಮನೆ

Updated on: Dec 06, 2021 | 8:04 PM

ಸೋನು ಸೂದ್​ ತಮ್ಮ ಹೆಸರಿನಲ್ಲಿ ಇರುವ ಆರು ಅಂತಸ್ತಿನ ಕಟ್ಟಡವನ್ನು ಹೋಟೆಲ್​ ಆಗಿ ಮಾರ್ಪಾಡು ಮಾಡಿದ್ದರು. ಇದಕ್ಕೆ ಅವರು ಯಾವುದೇ ಒಪ್ಪಿಗೆ ಪಡೆದುಕೊಂಡಿರಲಿಲ್ಲ. ಹೆಚ್ಚಿನ ಟ್ಯಾಕ್ಸ್​ ಕೂಡ ತುಂಬಿಲ್ಲ.

ಭರವಸೆ ಈಡೇರಿಸದ ಸೋನು ಸೂದ್​ಗೆ ಹೆಚ್ಚಿತು ಸಂಕಷ್ಟ; ನಟನಿಗೆ ಎರಡನೇ ಬಾರಿಗೆ ನೋಟಿಸ್​
ಸೋನು ಸೂದ್
Follow us on

ದೇಶದಲ್ಲಿ ಕೊವಿಡ್​ ಕಾಣಿಸಿಕೊಂಡ ನಂತರದಲ್ಲಿ ಸೋನು ಸೂದ್​ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಸಿನಿಮಾ ವಿಚಾರಕ್ಕಿಂತ ಹೆಚ್ಚಾಗಿ ತಾವು ಮಾಡುತ್ತಿರುವ ಸಾಮಾಜಿಕ ಕೆಲಸಗಳ ಮೂಲಕ ಮನೆ ಮಾತಾಗಿದ್ದಾರೆ. ಅವರನ್ನು ಎಲ್ಲರೂ ದೇವರ ರೀತಿಯಲ್ಲಿ ಪೂಜೆ ಮಾಡುತ್ತಿದ್ದಾರೆ. ಈ ಮಧ್ಯೆ ಹೋಟೆಲ್​ ವಿಚಾರಕ್ಕೆ ಸಂಬಂಧಿಸಿ ಬೃಹತ್​ ಮುಂಬೈ ಪಾಲಿಕೆ ಸೋನು ಸೂದ್​ಗೆ ನೋಟಿಸ್ ನೀಡಿತ್ತು. ಈಗ ಅವರಿಗೆ ಎರಡನೇ ನೋಟಿಸ್​ ಜಾರಿ ಆಗಿದೆ. ಇದರಿಂದ ಅವರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವು ಸಾಧ್ಯತೆ ಇದೆ.

ಸೋನು ಸೂದ್​ ತಮ್ಮ ಹೆಸರಿನಲ್ಲಿ ಇರುವ ಆರು ಅಂತಸ್ತಿನ ಕಟ್ಟಡವನ್ನು ಹೋಟೆಲ್​ ಆಗಿ ಮಾರ್ಪಾಡು ಮಾಡಿದ್ದರು. ಇದಕ್ಕೆ ಅವರು ಯಾವುದೇ ಒಪ್ಪಿಗೆ ಪಡೆದುಕೊಂಡಿರಲಿಲ್ಲ. ಹೆಚ್ಚಿನ ಟ್ಯಾಕ್ಸ್​ ಕೂಡ ತುಂಬಿಲ್ಲ. ನಿಯಮಗಳ ಪ್ರಕಾರ ಈ ರೀತಿ ಮಾಡುವುದು ತಪ್ಪು. ಈ ಕಾರಣಕ್ಕೆ ಪಾಲಿಕೆ ಅಧಿಕಾರಿಗಳು ಸೋನು ಸೂದ್​ಗೆ ಈ ಮೊದಲು ನೋಟಿಸ್​ ನೀಡಿದ್ದರು. ಈಗ ಅವರ ಹೆಸರಿಗೆ ಮತ್ತೊಂದು ನೋಟಿಸ್​ ಜಾರಿ ಆಗಿದೆ.

ನವೆಂಬರ್​ 15ರಂದು ಈ ನೋಟಿಸ್​ ಜಾರಿ ಆಗಿದ್ದು, ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಇದಕ್ಕೆ  ಸೋನು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದಲ್ಲಿ ಸೋನು ಸೂದ್​ಗೆ ಕೋರ್ಟ್​ನಲ್ಲಿ ​ಹಿನ್ನಡೆ ಆಗಿತ್ತು. ಈ ಕಾರಣಕ್ಕೆ ಈ ಕಟ್ಟಡವನ್ನು ವಸತಿ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಿಕೊಳ್ಳುವುದಾಗಿ ಸೋನು ಸೂದ್​ ಆಶ್ವಾಸನೆ ನೀಡಿದ್ದರು. ಆದರೆ, ಅವರು ಆರೀತಿ ಮಾಡಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ನೋಟಿಸ್​ ನೀಡಲಾಗಿದೆ. ಇದರಲ್ಲಿ ಸೋನ್​ ಸೂದ್​ಗೆ ತಾವು ನೀಡಿದ ಆಶ್ವಾಸನೆಯನ್ನು ನೆನಪಿಸಲಾಗಿದೆ.

ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಜೋರಾಗಿ ಮಳೆ ಸುರಿದಿತ್ತು. ತಿರುಮಲ ತಿರುಪತಿಯಲ್ಲಿ‌ ಭಾರಿ ಮಳೆಯ ಕಾರಣದಿಂದ ಎರಡು ದಿನ‌ ಭಕ್ತರಿಗೆ ದೇವರ ದರ್ಶನವನ್ನು ಬಂದ್ ಮಾಡಲಾಗಿತ್ತು. ತಿರುಪತಿ ಘಾಟ್ ರಸ್ತೆಗೆ ಹಾನಿಯಾಗಿದ್ದು, ಬೆಟ್ಟಕ್ಕೆ ಹೋಗುವ ರಸ್ತೆಯನ್ನು ಟಿಟಿಡಿ ದುರಸ್ತಿಗೊಳಿಸಿದೆ. ಈ ಮಳೆಗೆ ಸಿಕ್ಕು ಸಾಕಷ್ಟು ಜನರು ಮೃತಪಟ್ಟಿದ್ದಾರೆ.  ಈ ಬಗ್ಗೆ ಸೋನುಗೆ ಮನವಿ ಮಾಡಲಾಗಿತ್ತು. ‘ಸೋನು ಅವರೇ ನೆಲ್ಲೂರು ಮತ್ತು ತಿರುಪತಿಯು ಅತಿವೃಷ್ಟಿಯಿಂದ ತೀವ್ರವಾಗಿ ಹಾನಿಗೊಳಗಾಗಿದೆ. ಮಳೆಯ ನೀರು ಅನೇಕ ಮನೆಗಳಿಗೆ ನುಗ್ಗಿದೆ ಮತ್ತು ಸಾಕಷ್ಟು ಜನರು ಮನೆ ಕಳೆದುಕೊಂಡಿದ್ದಾರೆ. ತಿನ್ನೋಕೆ ಆಹಾರ ಇಲ್ಲ. ದಯವಿಟ್ಟು ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡಿ’ ಎಂದು ಕೋರಲಾಗಿತ್ತು. ಇದಕ್ಕೆ ಪಾಸಿಟಿವ್​ ಆಗಿ ಉತ್ತರಿಸಿದ್ದ ಅವರು​, ‘ಮರಳಿ ನಮ್ಮ ಮನೆಗಳನ್ನು ನಿರ್ಮಿಸುವ ಸಮಯ’ ಎಂದಿದ್ದರು. ಈ ಮೂಲಕ ಸಹಾಯ ಮಾಡುತ್ತೇನೆ ಎನ್ನುವ ಭರವಸೆ ನೀಡಿದ್ದರು.

ಇದನ್ನೂ ಓದಿ: ಐಟಿ ದಾಳಿ ಬಗ್ಗೆ ಮಾತಾಡಿ ಸೋನು ಸೂದ್​ಗೆ ಕುಟುಕಿದ ಕಪಿಲ್​ ಶರ್ಮಾ; ರಿಯಲ್​ ಹೀರೋ ಪ್ರತಿಕ್ರಿಯೆ ಹೇಗಿತ್ತು?

‘ಇದು ಮರಳಿ ನಮ್ಮ ಮನೆಗಳನ್ನು ನಿರ್ಮಿಸುವ ಸಮಯ’; ಆಂಧ್ರಕ್ಕೆ ಸೋನು ಸೂದ್​ ಸಹಾಯ ಹಸ್ತ

Published On - 3:56 pm, Mon, 6 December 21