ಶ್ರೀದೇವಿ 60ನೇ ಜನ್ಮದಿನಕ್ಕೆ ಗೂಗಲ್​ ಡೂಡಲ್​ ಗೌರವ; ಲೆಜೆಂಡರಿ ನಟಿಯ ನೆನಪು ಸದಾ ಹಸಿರು

|

Updated on: Aug 13, 2023 | 1:00 PM

ಶ್ರೀದೇವಿ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಬಾಲನಟಿಯಾಗಿ. ಬಳಿಕ ಅವರು ಹೀರೋಯಿನ್​ ಆಗಿ ಮಿಂಚಲು ಆರಂಭಿಸಿದರು. ಬರೋಬ್ಬರಿ 4 ದಶಕಗಳ ಕಾಲ ಅವರು ಬಣ್ಣದ ಲೋಕದಲ್ಲಿ ತಮ್ಮ ಚಾರ್ಮ್​ ಉಳಿಸಿಕೊಂಡಿದ್ದರು. ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದ ಸಿನಿಮಾಗಳಲ್ಲಿ ನಟಿಸಿ ಅವರು ಮನೆ ಮಾತಾಗಿದ್ದರು.

ಶ್ರೀದೇವಿ 60ನೇ ಜನ್ಮದಿನಕ್ಕೆ ಗೂಗಲ್​ ಡೂಡಲ್​ ಗೌರವ; ಲೆಜೆಂಡರಿ ನಟಿಯ ನೆನಪು ಸದಾ ಹಸಿರು
ಶ್ರೀದೇವಿ ಗೂಗಲ್​ ಡೂಡಲ್​
Follow us on

ಭಾರತೀಯ ಚಿತ್ರರಂಗ ಕಂಡ ಲೆಜೆಂಡರಿ ನಟಿ ಶ್ರೀದೇವಿ (Sridevi) ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರ ನೆನಪುಗಳು ಸದಾ ಹಸಿರಾಗಿ ಇರುತ್ತದೆ. ನೂರಾರು ಸೂಪರ್​ ಹಿಟ್​ ಸಿನಿಮಾಗಳ ಮೂಲಕ ಜನರನ್ನು ರಂಜಿಸಿದ್ದ ಶ್ರೀದೇವಿ ಅವರಿಗೆ ಆಗಸ್ಟ್​ 13ರಂದು ಜನ್ಮದಿನದ (Sridevi Birthday) ಸಂಭ್ರಮ. ಈ ದಿನವನ್ನು ಅಭಿಮಾನಿಗಳು, ಆಪ್ತರು ಮತ್ತು ಕುಟುಂಬದವರು ಸೆಲೆಬ್ರೇಟ್​ ಮಾಡುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯಗಳು ಹರಿದುಬರುತ್ತಿವೆ. ಅಷ್ಟೇ ಅಲ್ಲದೇ ಗೂಗಲ್​ ಕೂಡ ಶ್ರೀದೇವಿ ಅವರಿಗೆ ವಿಶೇಷವಾಗಿ ಬರ್ತ್​ಡೇ ವಿಶ್​ ಮಾಡಿದೆ. ಗೂಗಲ್​ ಡೂಡಲ್​ (Google Doodle) ಮೂಲಕ ಲೆಜೆಂಡರಿ ನಟಿಗೆ ಗೌರವ ಸಲ್ಲಿಸಲಾಗಿದೆ. ಶ್ರೀದೇವಿ ಮಕ್ಕಳಾದ ಜಾನ್ವಿ ಕಪೂರ್​, ಖುಷಿ ಕಪೂರ್​ ಕೂಡ ಅಮ್ಮನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಶ್ರೀದೇವಿ ಜನಿಸಿದ್ದು 1963ರ ಆಗಸ್ಟ್​ 13ರಂದು. ಅವರು ನಮ್ಮೊಂದಿಗೆ ಇದ್ದಿದ್ದರೆ ಇಂದು 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ ಅವರು ಇಹಲೋಕ ತ್ಯಜಿಸಿ 5 ವರ್ಷ ಕಳೆದಿದೆ. ಅವರು ಭೌತಿಕವಾಗಿ ಇಲ್ಲದಿದ್ದರೂ ಸಿನಿಮಾಗಳ ಮೂಲಕ ಶಾಶ್ವತವಾಗಿ ಉಳಿದುಕೊಂಡಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ. ಚಿತ್ರರಂಗಕ್ಕೆ ಕಾಲಿಡುವ ಅನೇಕ ಹೊಸ ನಟಿಯರಿಗೆ ಇಂದಿಗೂ ಶ್ರೀದೇವಿ ಅವರೇ ಮಾದರಿ. ಗ್ಲಾಮರ್​ ಮತ್ತು ನಟನೆ ಮೂಲಕ ಅಭಿಮಾನಿಗಳ ಹೃದಯ ಗೆದ್ದ ಶ್ರೀದೇವಿ ಅವರು ಅನೇಕ ಸ್ಟಾರ್​ ಹೀರೋಗಳ ಜೊತೆ ಅಭಿನಯಿಸಿದ್ದರು.

ಇದನ್ನೂ ಓದಿ: Khushi Kapoor: ಶ್ರೀದೇವಿ 2ನೇ ಪುತ್ರಿ ಖುಷಿ ಕಪೂರ್​ ಫೋಟೋ ವೈರಲ್​; ಮೊದಲ ಸಿನಿಮಾ ರಿಲೀಸ್​ಗೂ ಮುನ್ನವೇ ಹವಾ

ಶ್ರೀದೇವಿ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಬಾಲನಟಿಯಾಗಿ. ಬಳಿಕ ಹೀರೋಯಿನ್​ ಆಗಿ ಮಿಂಚಲು ಆರಂಭಿಸಿದರು. ಬರೋಬ್ಬರಿ 4 ದಶಕಗಳ ಕಾಲ ಅವರು ಬಣ್ಣದ ಲೋಕದಲ್ಲಿ ತಮ್ಮ ಚಾರ್ಮ್​ ಉಳಿಸಿಕೊಂಡಿದ್ದರು. ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಎಲ್ಲ ಬಗೆಯ ಪಾತ್ರಗಳನ್ನು ಮಾಡುವ ಮೂಲಕ ಸೈ ಎನಿಸಿಕೊಂಡಿದ್ದರು. 2013ರಲ್ಲಿ ಶ್ರೀದೇವಿ ನಟಿಸಿದ್ದ ‘ಇಂಗ್ಲಿಷ್​ ವಿಂಗ್ಲಿಷ್​’ ಸಿನಿಮಾ ಗಮನ ಸೆಳೆಯಿತು. ಅವರು ಅಭಿನಯಿಸಿದ ಕೊನೇ ಸಿನಿಮಾ ‘ಮಾಮ್​’. ಅದು 2018ರಲ್ಲಿ ತೆರೆಕಂಡಿತು.

ಇದನ್ನೂ ಓದಿ: ಹಾಟ್​​ ಲುಕ್​ನಲ್ಲಿ ಗಮನ ಸೆಳೆದ ನಟಿ ಶ್ರೀದೇವಿ ಪುತ್ರಿ

ಬಾಲಿವುಡ್​ನಲ್ಲಿ ಈಗ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್​ ಕೂಡ ಹೀರೋಯಿನ್​ ಆಗಿ ಆ್ಯಕ್ಟೀವ್​ ಆಗಿದ್ದಾರೆ. ಎರಡನೇ ಮಗಳು ಖುಷಿ ಕಪೂರ್​ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಡಲು ತಂದೆ ಬೋನಿ ಕಪೂರ್​ ಪ್ರಯತ್ನಿಸುತ್ತಿದ್ದಾರೆ. ಶ್ರೀದೇವಿ ಬರ್ತ್​ಡೇ ಪ್ರಯುಕ್ತ ಇವರೆಲ್ಲರೂ ಹಳೇ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶ್ರೀದೇವಿ ನಟನೆಯ ಸಿನಿಮಾಗಳನ್ನು ಮತ್ತೆ ನೋಡುವ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗೆ ಗೌರವ ಸಲ್ಲಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.