‘ಅವರು ಮಾಡಿದ್ದು ನಿಸ್ವಾರ್ಥದ ಕೆಲಸ’; ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಸುಧಾ ಮೂರ್ತಿ

|

Updated on: Sep 19, 2023 | 3:27 PM

Sudha Murty on The Vaccine War: ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಭಾರತದ ಮೊದಲ ಬಯೋ ಸೈನ್ಸ್ ಸಿನಿಮಾ. ಕೊವಿಡ್ ಸಂದರ್ಭದಲ್ಲಿ ಭಾರತ ಯಾವ ರೀತಿಯಲ್ಲಿ ತೊಂದರೆ ಎದುರಿಸಿತು ಮತ್ತು ಔಷಧ ಕಂಡು ಹಿಡಿಯಲು ಯಾವ ರೀತಿಯಲ್ಲಿ ಶ್ರಮ ಹಾಕಿತು ಎನ್ನುವ ಕುರಿತು ಈ ಚಿತ್ರ ಇದೆ.

‘ಅವರು ಮಾಡಿದ್ದು ನಿಸ್ವಾರ್ಥದ ಕೆಲಸ’; ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಸುಧಾ ಮೂರ್ತಿ
ಪಲ್ಲವಿ-ಸುಧಾ ಮೂರ್ತಿ-ವಿವೇಕ್
Follow us on

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ (The Vaccine War Movie) ರಿಲೀಸ್​ಗೂ ಮೊದಲೇ ಸದ್ದು ಮಾಡುತ್ತಿದೆ. ಸೆಲೆಬ್ರಿಟಿಗಳಿಗಾಗಿ ಈ ಚಿತ್ರದ ವಿಶೇಷ ಶೋ ಏರ್ಪಡಿಸಲಾಗುತ್ತಿದೆ. ಸುಧಾ ಮೂರ್ತಿ ಅವರು ಕೂಡ ಇತ್ತೀಚೆಗೆದಿ ವ್ಯಾಕ್ಸಿನ್ ವಾರ್’ಸಿನಿಮಾ ನೋಡಿದ್ದಾರೆ. ಅವರು ಚಿತ್ರದ ಬಗ್ಗೆ ತಮ್ಮ ವಿಮರ್ಶೆ ತಿಳಿಸಿದ್ದಾರೆ. ಈ ಮೊದಲು ಮಾಧವನ್ ಅವರು ಸಿನಿಮಾ ನೋಡಿದ್ದರು. ಈಗ ಸುಧಾ ಮೂರ್ತಿ ಕೂಡ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ತಂಡದ ಬಲ ಹೆಚ್ಚಿದೆ.

‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಭಾರತದ ಮೊದಲ ಬಯೋ ಸೈನ್ಸ್ ಸಿನಿಮಾ. ಕೊವಿಡ್ ಸಂದರ್ಭದಲ್ಲಿ ಭಾರತ ಯಾವ ರೀತಿಯಲ್ಲಿ ತೊಂದರೆ ಎದುರಿಸಿತು ಮತ್ತು ಔಷಧ ಕಂಡು ಹಿಡಿಯಲು ಯಾವ ರೀತಿಯಲ್ಲಿ ಶ್ರಮ ಹಾಕಿತು ಎನ್ನುವ ಕುರಿತು ಈ ಚಿತ್ರ ಇದೆ. ‘ದಿ ಕಾಶ್ಮೀರ್ ಫೈಲ್ಸ್’ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ಅವರು ‘ದಿ ವ್ಯಾಕ್ಸಿನ್ ವಾರ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

‘ದಿ ವ್ಯಾಕ್ಸಿನ್ ವಾರ್’ನ ‘ಮನ ಮುಟ್ಟುವ’ಸಿನಿಮಾ ಎಂದು ಕರೆದಿದ್ದಾರೆ ಸುಧಾ ಮೂರ್ತಿ. ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿ ಮಾತು ಆರಂಭಿಸಿ ಆ ಬಳಿಕ ಇಂಗ್ಲಿಷ್​ನಲ್ಲಿ ತಮ್ಮ ವಿಮರ್ಶೆ ತಿಳಿಸಿದರು ಸುಧಾ ಮೂರ್ತಿ. ‘ನಾನು ಮಹಿಳೆಯರ ಪಾತ್ರವನ್ನು ಅರ್ಥ ಮಾಡಿಕೊಂಡಿದ್ದೇನೆ. ಅವಳು ತಾಯಿ, ಪತ್ನಿ ಜೊತೆ ವೃತ್ತಿ ಬದುಕನ್ನು ನಡೆಸುವವಳೂ ಹೌದು. ಕುಟುಂಬ ಹಾಗೂ ಕೆಲಸವನ್ನು ಸಮದೂಗಿಸಿಕೊಂಡು ಹೋಗುವುದು ಕಷ್ಟ. ಕೆಲವರು ಈ ವಿಚಾರದಲ್ಲಿ ಅದೃಷ್ಟಶಾಲಿಗಳು. ನಾವು ಉಳಿದುಕೊಂಡ ಕಟ್ಟಡದ ಮೇಲೆ ನಮ್ಮ ತಂದೆ ತಾಯಿ ವಾಸಿಸುತ್ತಿದ್ದರು. ನಾನು ಕೆಳಗೆ ವಾಸಿಸುತ್ತಿದ್ದೆ. ಹೀಗಾಗಿ ಹೆಚ್ಚಿನ ಕೆಲಸ ಮಾಡಲು ನನಗೆ ಸಹಕಾರಿ ಆಯಿತು. ಮಕ್ಕಳನ್ನು ಬೆಳೆಸುತ್ತಾ ವೃತ್ತಿ ಜೀವನ ನಡೆಸಿಕೊಂಡು ಹೋಗೋದು ಕಷ್ಟ. ಹಾಗೆ ಮಾಡಬೇಕು ಎಂದರೆ ಕುಟುಂಬದ ಬೆಂಬಲ ಬೇಕು’ ಎಂದಿದ್ದಾರೆ ಅವರು.

ಮಹಿಳಾ ವಿಜ್ಞಾನಿಗಳು ಕೊವಿಡ್ ಸಂದರ್ಭದಲ್ಲಿ ಲ್ಯಾಬ್​ಗೆ ಬಂದು ಸಂಶೋಧನೆ ಮಾಡಿದ್ದರು. ಇದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಸುಧಾ ಮೂರ್ತಿ, ‘ಮಕ್ಕಳು ಚಿಕ್ಕವರಿರಬಹುದು. ಆದರೆ ಅವರು ತಮ್ಮ ತಾಯಿಯ ಬಗ್ಗೆ ಮತ್ತು ಅವರು ಏನು ಮಾಡಿದ್ದಾರೆಂದು ಹೆಮ್ಮೆಪಡುತ್ತಾರೆ’ ಎಂದಿದ್ದಾರೆ.

ಇದನ್ನೂ ಓದಿ: ಕೊರೊನಾ ವಿರುದ್ಧ ಭಾರತದ ವಿಜ್ಞಾನಿಗಳು ಹೋರಾಡಿದ ಕಥೆ; ಗಮನ ಸೆಳೆದ ‘ದಿ ವ್ಯಾಕ್ಸಿನ್ ವಾರ್’ ಟ್ರೇಲರ್

‘ಕೊವಾಕ್ಸಿನ್ ಏನು ಎಂಬುದು ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ. ಆದರೆ, ಹಿಂದಿರುವ ಶ್ರಮವನ್ನು ಈ ಸಿನಿಮಾ ತೋರಿಸುತ್ತದೆ. ಎಲ್ಲಾ ವಿಜ್ಞಾನಿಗಳು ಮಾಡಿದ್ದು ನಿಸ್ವಾರ್ಥದ ಕೆಲಸ. ಕೊವಿಡ್ ಅವಧಿಯಲ್ಲಿ ಅವರು ಗರಿಷ್ಟ ಸಮಯವನ್ನು ಔಷಧ ಕಂಡು ಹಿಡಿಯಲು ಕಳೆದರು. ಇದರಿಂದ ನಾವು ಸುಖವಾಗಿ ಬದುಕುವಂತಾಯಿತು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:21 pm, Tue, 19 September 23