83 Movie review: ‘83’ ಚಿತ್ರದಲ್ಲಿ ರಣವೀರ್ ಕಾಣಲೇ ಇಲ್ಲ!; ಶಾಕಿಂಗ್ ಅಭಿಪ್ರಾಯ ತಿಳಿಸಿದ ಸುನೀಲ್ ಶೆಟ್ಟಿ

| Updated By: shivaprasad.hs

Updated on: Dec 21, 2021 | 1:51 PM

Ranveer Singh | Kapil Dev: ‘83’ ಚಿತ್ರದ ಸೆಲೆಬ್ರಿಟಿ ಪ್ರೀಮಿಯರ್ ಶೋಗಳು ನಡೆಯುತ್ತಿವೆ. ಚಿತ್ರ ನೋಡಿದ ತಾರೆಯರು ಕಬೀರ್ ಖಾನ್ ನಿರ್ದೇಶನದ ಚಿತ್ರಕ್ಕೆ ಶಹಬ್ಬಾಸ್ ಎಂದಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ತಮ್ಮ ಅಭಿಪ್ರಾಯವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದು, ರಣವೀರ್ ಸಿಂಗ್ ಚಿತ್ರದಲ್ಲಿ ಕಾಣಲೇ ಇಲ್ಲ ಎಂದಿದ್ದಾರೆ! ಅವರು ಹಾಗೆ ಹೇಳಿದ್ದೇಕೆ? ಮುಂದೆ ಓದಿ.

83 Movie review: ‘83’ ಚಿತ್ರದಲ್ಲಿ ರಣವೀರ್ ಕಾಣಲೇ ಇಲ್ಲ!; ಶಾಕಿಂಗ್ ಅಭಿಪ್ರಾಯ ತಿಳಿಸಿದ ಸುನೀಲ್ ಶೆಟ್ಟಿ
ರಣವೀರ್ ಸಿಂಗ್
Follow us on

ರಣವೀರ್ ಸಿಂಗ್ (Ranveer Singh), ದೀಪಿಕಾ ಪಡುಕೋಣೆ (Deepika Padukone) ಸೇರಿದಂತೆ ಖ್ಯಾತ ತಾರೆಯರು ಬಣ್ಣಹಚ್ಚಿರುವ ‘83’ ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಹವಾ ಸೃಷ್ಟಿಸಿದೆ. ಸದ್ಯ ಸೆಲೆಬ್ರಿಟಿ ಪ್ರೀಮಿಯರ್​ಗಳು ನಡೆಯುತ್ತಿದ್ದು, ಎಲ್ಲೆಡೆಯಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 1983ರಲ್ಲಿ ಕಪಿಲ್ ದೇವ್ (Kapil Dev) ಸಾರಥ್ಯದಲ್ಲಿ ಭಾರತ ವಿಶ್ವಕಪ್ ಮುಡಿಗೇರಿಸಿಕೊಂಡ ಕಥಾನಕ ನೋಡುಗರಲ್ಲಿ ರೋಮಾಂಚನ ಸೃಷ್ಟಿಸಲಿದೆ ಎಂದು ಚಿತ್ರ ವೀಕ್ಷಿಸಿದ ತಾರೆಯರು ಅಭಿಪ್ರಾಯ ಹೊರಹಾಕಿದ್ದಾರೆ. ಬಾಲಿವುಡ್ ತಾರೆ ಸುನೀಲ್ ಶೆಟ್ಟಿ (Suniel Shetty) ಇದೀಗ ಚಿತ್ರದ ಕುರಿತು ಪ್ರತಿಕ್ರಿಯೆ ನೀಡಿದ್ದು, ಚಿತ್ರದಲ್ಲಿ ರಣವೀರ್ ಸಿಂಗ್ ಕಾಣಲೇ ಇಲ್ಲ ಎಂದು ಶಾಕಿಂಗ್ ರಿವ್ಯೂ (Film Review) ನೀಡಿದ್ದಾರೆ. ಅರೇ, ಇದೇನು, ರಣವೀರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ಅವರೇ ಇಲ್ಲ ಎಂದರೆ ಹೇಗೆ? ಎಂದು ಯೋಚಿಸುತ್ತಿದ್ದೀರಾ? ಸುನೀಲ್ ಶೆಟ್ಟಿ ರಣವೀರ್ ಸಿಂಗ್ ಪಾತ್ರವನ್ನು ಗುಣಗಾನ ಮಾಡಲು ಆ ವಿಶೇಷಣ ಬಳಸಿದ್ದಾರೆ. ಹೌದು. ತೆರೆಯ ಮೇಲೆಲ್ಲಾ ಕಪಿಲ್ ದೇವ್ ಕಾಣಿಸುತ್ತಾರೆ. ಎಲ್ಲೂ ರಣವೀರ್ ಕಾಣುವುದೇ ಇಲ್ಲ. ಅಷ್ಟರಮಟ್ಟಿಗೆ ಅವರು ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದು ಸುನೀಲ್ ಶೆಟ್ಟಿ ಶಹಬ್ಬಾಸ್ ಗಿರಿ ನೀಡಿದ್ದಾರೆ.

ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಿರುವ ನಟ ಸುನೀಲ್ ಶೆಟ್ಟಿ, ಚಿತ್ರ ನೋಡಿದ ನಂತರ ಭಾವುಕರಾಗಿ ಕಣ್ಣೀರು ಹಾಕಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ, ಎಲ್ಲಾ ಪಾತ್ರಗಳೂ ಅದ್ಭುತ. ಕಬೀರ್ ಖಾನ್ ನಿರ್ದೇಶನ ಹಾಗೂ ದೃಶ್ಯಗಳನ್ನು ಕಟ್ಟಿಕೊಟ್ಟಿರುವ ಬಗೆ ಅಮೋಘ ಎಂದು ಅವರು ಬಣ್ಣಿಸಿದ್ದಾರೆ.

ಸುನೀಲ್ ಶೆಟ್ಟಿ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ರಣವೀರ್ ಸಿಂಗ್ ಕಪಿಲ್ ದೇವ್ ಪಾತ್ರ ನಿರ್ವಹಿಸಲು ಸಾಕಷ್ಟು ಶ್ರಮವಹಿಸಿದ್ದಾರೆ. ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ‘‘ಆರು ತಿಂಗಳ ಕಾಲ ಪ್ರತಿ ದಿನ ನಾಲ್ಕು ಗಂಟೆ ಕ್ರಿಕೆಟ್​​ ಆಡುತ್ತಾ ತರಬೇತಿಯಲ್ಲಿ ಕಳೆಯುತ್ತಿದ್ದೆ’’ ಎಂದಿದ್ದರು. ಅಲ್ಲದೇ ವಿಭಿನ್ನ ಬೌಲಿಂಗ್ ಆಕ್ಷನ್ ಹೊಂದಿದ್ದ ಕಪಿಲ್ ದೇವ್ ಅವರನ್ನು ಅನುಕರಿಸಲು ರಣವೀರ್ ಬಹಳ ಪ್ರಯಾಸ ಪಟ್ಟಿದ್ದರು. ಸತತ ಪ್ರಯತ್ನದಿಂದ ಕಪಿಲ್ ದೇವ್ ಮ್ಯಾನರಿಸಂಗಳನ್ನು ಅಳವಡಿಸಿಕೊಂಡರು.

‘83’ ಚಿತ್ರದಲ್ಲಿ, ಪಂಕಜ್ ತ್ರಿಪಾಠಿ, ತಾಹಿರ್ ರಾಜ್ ಭಾಸಿನ್, ಜೀವಾ, ಸಾಕಿಬ್ ಸಲೀಮ್, ಜತಿನ್ ಸರ್ನಾ, ಚಿರಾಗ್ ಪಾಟೀಲ್, ದಿನಕರ್ ಶರ್ಮಾ, ನಿಶಾಂತ್ ದಹಿಯಾ, ಸಾಹಿಲ್ ಖಟ್ಟರ್, ಆಮಿ ವಿರ್ಕ್, ಹಾರ್ಡಿ ಸಂಧು, ಅದ್ದಿನಾಥ್ ಕೊಠಾರೆ, ಧೈರ್ಯ ಕರ್ವಾ ಮತ್ತು ಆರ್ ಬದ್ರಿ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ‘83’ ಡಿಸೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಹಿಂದಿ, ಕನ್ನಡ,  ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ.

ಇದನ್ನೂ ಓದಿ:

ಅಮೇಜಾನ್​ ಪ್ರೈಮ್​ನಲ್ಲಿ ಪಿಆರ್​ಕೆ ವಾರ; ಒಂದು ತಿಂಗಳಲ್ಲಿ ಅಪ್ಪು ನಿರ್ಮಾಣದ ಮೂರು ಹೊಸ ಸಿನಿಮಾ ರಿಲೀಸ್​?

Samantha: ಐಟಂ ಸಾಂಗ್​ನಲ್ಲಿ ಸೆಕ್ಸಿಯಾಗಿ ಕಾಣಿಸಿಕೊಳ್ಳೋಕೆ ಎಷ್ಟು ಶ್ರಮ ಪಡಬೇಕು ಗೊತ್ತಾ?; ಸಮಂತಾ ವಿವರಿಸಿದ್ದು ಹೀಗೆ