‘ಮದುವೆ ಅಂತಿದ್ದಂಗೆ ನಿಮಗೆ ಏನಾಗಿಬಿಡುತ್ತೆ’? ನಕಲಿ ಅಮಿತಾಭ್​ ಕೇಳಿದ ಪ್ರಶ್ನೆಗೆ ನಾಚಿ ನೀರಾದ ಸಲ್ಲು

Sunil Grover mimicry: ಅಮಿತಾಭ್​ ಬಚ್ಚನ್​ ರೀತಿ ಮಿಮಿಕ್ರಿ ಮಾಡುವಲ್ಲಿ ಸುನಿಲ್​ ಗ್ರೋವರ್​ ತುಂಬ ಫೇಮಸ್​. ಅವರ ಕಾಮಿಡಿಗೆ ಸಲ್ಮಾನ್​ ಖಾನ್​ ಬಿದ್ದು ಬಿದ್ದು ನಗುತ್ತಾರೆ.

‘ಮದುವೆ ಅಂತಿದ್ದಂಗೆ ನಿಮಗೆ ಏನಾಗಿಬಿಡುತ್ತೆ’? ನಕಲಿ ಅಮಿತಾಭ್​ ಕೇಳಿದ ಪ್ರಶ್ನೆಗೆ ನಾಚಿ ನೀರಾದ ಸಲ್ಲು
ಸಲ್ಮಾನ್​ ಖಾನ್​, ಸುನಿಲ್​ ಗ್ರೋವರ್​
Edited By:

Updated on: Jan 14, 2022 | 2:01 PM

ನಟ ಸಲ್ಮಾನ್​ ಖಾನ್​ (Salman Khan) ಅವರಿಗೆ ಏನು ಕಡಿಮೆ ಆಗಿದೆ? ಅವರ ಬಳಿ ಕೋಟ್ಯಂತರ ರೂಪಾಯಿ ಹಣ ಇದೆ. ದೇಶಾದ್ಯಂತ ಆಸ್ತಿ ಹೊಂದಿದ್ದಾರೆ. ವಿಶ್ವಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ. ಅವರನ್ನು ಪ್ರೀತಿಸುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಇಷ್ಟೆಲ್ಲ ಇದ್ದರೂ ಕೂಡ ಅವರು ಮದುವೆ ಆಗಲು ಹಿಂದೇಟು ಹಾಕುತ್ತಿದ್ದಾರೆ. ಈಗ ಅವರ ವಯಸ್ಸು 56. ಮೊಮ್ಮಕ್ಕಳು ಕಾಣಬೇಕಾದ ವಯಸ್ಸಿನಲ್ಲಿ ಅವರು ಬ್ಯಾಚುಲರ್​ ಆಗಿ ಬದುಕುತ್ತಿದ್ದಾರೆ. ಎಲ್ಲೇ ಹೋದರು ಅವರಿಗೆ ಮದುವೆ ಬಗ್ಗೆ ಪ್ರಶ್ನೆ ಎದುರಾಗುತ್ತದೆ. ಇತ್ತೀಚೆಗೆ ಅಮಿತಾಭ್​ ಬಚ್ಚನ್​ (Amitabh Bachchan) ಕೂಡ ಇದೇ ಪ್ರಶ್ನೆ ಕೇಳಿದರು. ಆದರೆ ಇದು ಅಸಲಿ ಅಮಿತಾಭ್​ ಬಚ್ಚನ್​ ಅಲ್ಲ. ನಕಲಿ ಬಿಗ್​ ಬಿ ಎಂಬುದು ಗಮನಿಸಬೇಕಾದ ವಿಚಾರ.

ಸಲ್ಮಾನ್​ ಖಾನ್ ಅವರು ದಬಂಗ್​ ಟೂರ್​ ಮಾಡುತ್ತಾರೆ. ತಮ್ಮ ತಂಡದ ಜೊತೆ ವಿದೇಶಗಳಿಗೆ ತೆರಳಿ, ಅಲ್ಲಿ ಸ್ಟೇಜ್​ ಶೋ ನೀಡುವ ಮೂಲಕ ಜನರನ್ನು ರಂಜಿಸುತ್ತಾರೆ. ಇತ್ತೀಚೆಗೆ ಅವರ ಟೀಮ್​ ಸೌದಿ ಅರೇಬಿಯಾದ ರಿಯಾದ್​ ನಗರಕ್ಕೆ ತೆರಳಿತ್ತು. ಆ ತಂಡದಲ್ಲಿ ಕಲಾವಿದ ಸುನಿಲ್​ ಗ್ರೋವರ್​ ಕೂಡ ಇದ್ದರು. ಅಮಿತಾಭ್​ ಬಚ್ಚನ್​ ರೀತಿ ಮಿಮಿಕ್ರಿ ಮಾಡುವಲ್ಲಿ ಸುನಿಲ್​ ಗ್ರೋವರ್​ ತುಂಬ ಫೇಮಸ್​. ಅವರ ಕಾಮಿಡಿಗೆ ಸಲ್ಲು ಬಿದ್ದು ಬಿದ್ದು ನಗುತ್ತಾರೆ. ದಬಂಗ್​ ಟೂರ್​ ವೇದಿಕೆಯಲ್ಲಿ ಸುನಿಲ್​ ಗ್ರೋವರ್​ ಮಿಮಿಕ್ರಿ ಮಾಡಿದರು.

ಅಮಿತಾಭ್​ ಬಚ್ಚನ್​ ನಡೆಸಿಕೊಡುವ ‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮವನ್ನು ಸುನಿಲ್​ ಗ್ರೋವರ್​ ಅನುಕರಣೆ ಮಾಡಿ ತೋರಿಸಿದರು. ಹಾಟ್​ ಸೀಟ್​ನಲ್ಲಿ ಕುಳಿತಿದ್ದ ಸಲ್ಲುಗೆ ಅವರು ಕೇಳಿದ ಮೊದಲ ಪ್ರಶ್ನೆ ಹೀಗಿತ್ತು; ‘ಮದುವೆ ಅಂತಿದ್ದಂಗೆ ನಿಮಗೆ ಏನಾಗಿಬಿಡುತ್ತೆ’? ಈ ಪ್ರಶ್ನೆ ಕೇಳಿಸಿಕೊಂಡ ಸಲ್ಲು ನಾಚಿ ನೀರಾದರು. ‘ಮದುವೆ ಆಗ್ಬಿಡಿ’ ಎಂದು ಸುನಿಲ್​ ಗ್ರೋವರ್​ ಒತ್ತಾಯಿಸಿದರು.

ಈ ಫನ್ನಿ ವಿಡಿಯೋ ತುಣುಕನ್ನು ನಿರೂಪಕ ಮನೀಶ್​ ಪೌಲ್​ ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಾರೆ ದಬಂಗ್​ ಟೂರ್​ ಹೇಗೆ ನಡೆಯಿತು ಎಂಬುದರ ಝಲಕ್​ ಈ ವಿಡಿಯೋದಲ್ಲಿ ಇದೆ.

ಸಲ್ಮಾನ್​ ಖಾನ್​ ಅವರ ಬದುಕಿನಲ್ಲಿ ಅನೇಕ ಪ್ರೇಯಸಿಯರು ಬಂದು ಹೋಗಿದ್ದಾರೆ. ಇತ್ತೀಚೆಗೆ ಹಾಲಿವುಡ್​ ನಟಿ ಸಮಂತಾ ಲಾಕ್​ವುಡ್​ ಜೊತೆಯಲ್ಲಿ ಅವರ ಹೆಸರು ತಳುಕು ಹಾಕಿಕೊಂಡಿದೆ. ಆದರೆ ತಾವು ಸಲ್ಮಾನ್​ ಅವರ ಪ್ರಿಯತಮೆ ಅಲ್ಲ ಎಂದು ಸಮಂತಾ ಹೇಳಿಕೆ ನೀಡಿದ್ದಾರೆ. ಅವರ ಮಾತನ್ನು ನಂಬಲು ಅಭಿಮಾನಿಗಳು ಸಿದ್ಧರಿಲ್ಲ. ‘ಹೊಸ ಅತ್ತಿಗೆ ಸಿಕ್ಕರು’ ಎಂದು ಸಲ್ಲು ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಸಮಂತಾ ಲಾಕ್​ವುಡ್​ ಅವರ ಫೋಟೋ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

ಸೀಕ್ರೆಟ್​ ಕ್ಯಾಮೆರಾದಲ್ಲಿ ಮಹಿಳಾ ಫ್ಯಾನ್ಸ್​ ಫೋಟೋ ಸೆರೆ ಹಿಡಿಯುತ್ತಿದ್ದ ಸಲ್ಮಾನ್​ ಖಾನ್​; ಕಾರಣ ಏನು?

ಸಲ್ಮಾನ್​ ಖಾನ್​ಗೆ ಸಿಕ್ಸ್​ ಪ್ಯಾಕ್​ ಇರೋದು ನಿಜವೇ? ಒಂದು ವಿಡಿಯೋದಿಂದ ಬಯಲಾಯ್ತು ಸತ್ಯ