ನಟ ಸನ್ನಿ ಡಿಯೋಲ್ ಮತ್ತು ಡಿಂಪಲ್ ಕಪಾಡಿಯಾ ಅವರ ಸಂಬಂಧವು ಒಂದು ಕಾಲದಲ್ಲಿ ಬಾಲಿವುಡ್ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾಗಿತ್ತು. ಇಬ್ಬರೂ ಕೆಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅವರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಅಭಿಮಾನಿಗಳಿಗೆ ಇಷ್ಟವಾಯಿತು. ಆದರೆ ಅದರೊಂದಿಗೆ, ಅವರ ಆಫ್‌ಸ್ಕ್ರೀನ್ ಕೆಮಿಸ್ಟ್ರಿ ಚಿತ್ರ ಸೆಟ್‌ಗಳಲ್ಲಿಯೂ ಚರ್ಚೆಯಾಗಿತ್ತು. ಸನ್ನಿ ಮತ್ತು ಡಿಂಪಲ್ ‘ಮಂಜಿಲ್ ಮಂಜಿಲ್’, ‘ನರಸಿಂಹ’, ‘ಆಗ್ ಕಾ ಗೋಲಾ’ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಸಿನಿಮಾದಲ್ಲಿ ಕೆಲಸ ಮಾಡುವಾಗ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆ ಸಮಯದಲ್ಲಿ ಸನ್ನಿ ಡಿಯೋಲ್ ಪೂಜಾ ಅವರನ್ನು ಮದುವೆಯಾಗಿದ್ದರು. ಇಬ್ಬರಿಗೆ ಕರಣ್ ಮತ್ತು ರಾಜವೀರ್ ಎಂಬ ಇಬ್ಬರು ಮಕ್ಕಳಿದ್ದರು. ಸನ್ನಿ ಮತ್ತು ಡಿಂಪಲ್ ಜೊತೆ ಕೆಲಸ ಮಾಡಿರುವ ನಟಿ ಈ ಅಫೇರ್ ಬಗ್ಗೆ ತೆರೆದಿಟ್ಟಿದ್ದಾರೆ.
ಆರ್‌ಜೆ ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ ನಟಿ ಸುಜಾತಾ ಮೆಹ್ತಾ ಮಾತನಾಡಿದ್ದಾರೆ. ‘ಸನ್ನಿ ಮತ್ತು ಡಿಂಪಲ್ ನಡುವಿನ ತೆರೆಯ ಮೇಲಿನ ಮತ್ತು ತೆರೆಯ ಹಿಂದಿನ ಕೆಮಿಸ್ಟ್ರಿ ಅದ್ಭುತವಾಗಿತ್ತು. ಅವರಿಬ್ಬರ ಜೊತೆ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. ಅವರು ಸೆಟ್‌ಗಳಲ್ಲಿ ತಮ್ಮ ಸಂಬಂಧವನ್ನು ಮರೆಮಾಡಲು ಎಂದಿಗೂ ಪ್ರಯತ್ನಿಸಲಿಲ್ಲ. ನಾವೆಲ್ಲ ನಮ್ಮ ಕೆಲಸ ಮಾಡಿಕೊಂಡು ಹೊರಡುತ್ತಿದ್ದೆವು. ಆದರೆ ಸೆಟ್‌ಗಳಲ್ಲಿ ಸನ್ನಿ ಮತ್ತು ಡಿಂಪಲ್ ಪರಸ್ಪರ ಚೆನ್ನಾಗಿ ಬೆರೆಯುತ್ತಿದ್ದರು. ಇದೆಲ್ಲವೂ ಅವನ ಹಣೆಬರಹದಲ್ಲಿ ಬರೆದಿತ್ತು’ ಎಂದಿದ್ದಾರೆ ಅವರು.
ಸನ್ನಿ ಡಿಯೋಲ್ ಮತ್ತು ಡಿಂಪಲ್ ಕಪಾಡಿಯಾ ಅವರ ಅಫೇರ್ ಒಂದು ಕಾಲದಲ್ಲಿ ಹಾಟ್ ಟಾಪಿಕ್ ಆಗಿತ್ತು. 80ರ ದಶಕದಲ್ಲಿ ಸನ್ನಿ ಮತ್ತು ಡಿಂಪಲ್ ಜೋಡಿ ಎಲ್ಲರ ಗಮನ ಸೆಳೆದಿತ್ತು. ಡಿಂಪಲ್ ಅವರ ಸಹೋದರಿ ಸಿಂಪಲ್ ಕಪಾಡಿಯಾ ನಿಧನರಾದಾಗಲೂ ಸನ್ನಿ ಡಿಯೋಲ್ ಅವರು ತೆರಳಿ ಡಿಂಪಲ್ಗೆ ಸಾಂತ್ವನ ಹೇಳುತ್ತಿದ್ದರು. ಇಬ್ಬರೂ ಸುಮಾರು 11 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಮೋಸ, ಸುಲಿಗೆ, ಫೋರ್ಜರಿ ಆರೋಪ: ನಟ ಸನ್ನಿ ಡಿಯೋಲ್ ವಿರುದ್ಧ ದೂರು ದಾಖಲು
ಸನ್ನಿ ಡಿಯೋಲ್ 1984ರಲ್ಲಿ ಪೂಜಾ ಅವರನ್ನು ವಿವಾಹವಾದರು. ಅವರು ಈ ಚಿತ್ರದಲ್ಲಿ ಅಮೃತಾ ಸಿಂಗ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಸನ್ನಿ ಮತ್ತು ಪೂಜಾ ಇಬ್ಬರು ಮಕ್ಕಳಿದ್ದಾರೆ. ಈ ಪೈಕಿ ಕರಣ್ ಡಿಯೋಲ್ ಕೆಲ ದಿನಗಳ ಹಿಂದೆ ತಮ್ಮ ಗೆಳತಿ ದೃಶಾ ಆಚಾರ್ಯ ಅವರನ್ನು ವಿವಾಹವಾಗಿದ್ದರು. ಈ ಮದುವೆಯಲ್ಲಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಉಪಸ್ಥಿತರಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.