ಕಳೆದ 2 ವಾರದಿಂದಲೂ ‘ಗದರ್ 2’ ಸಿನಿಮಾ (Gadar 2 Movie) ಬಗ್ಗೆಯೇ ಹೆಚ್ಚು ಚರ್ಚೆ ಆಗುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಮಾಡಿದ ಮೋಡಿಯೇ ಇದಕ್ಕೆಲ್ಲ ಕಾರಣ. ಸನ್ನಿ ಡಿಯೋಲ್ (Sunny Deol), ಅಮೀಷಾ ಪಟೇಲ್ ನಟನೆಯ ಈ ಸಿನಿಮಾಗೆ ಅನಿಲ್ ಶರ್ಮಾ ನಿರ್ದೇಶನ ಮಾಡಿದ್ದಾರೆ. ಅವರಿಗೆ ಈ ಚಿತ್ರದಿಂದ ದೊಡ್ಡ ಗೆಲುವು ಸಿಕ್ಕಿದೆ. ಒಂದಷ್ಟು ದಿನಗಳ ಕಾಲ ಸೈಲೆಂಟ್ ಆಗಿದ್ದ ಬಾಲಿವುಡ್ ಬಾಕ್ಸ್ ಆಫೀಸ್ಗೆ ಈ ಸಿನಿಮಾದಿಂದ ಹೊಸ ಚೈತನ್ಯ ಸಿಕ್ಕಂತೆ ಆಗಿದೆ. ಬಿಡುಗಡೆಯಾಗಿ 13 ದಿನಗಳು ಕಳೆದಿದ್ದರೂ ಕೂಡ ‘ಗದರ್ 2’ ಸಿನಿಮಾದ ಕ್ರೇಜ್ ಹಾಗೆಯೇ ಮುಂದುವರಿದಿದೆ. ಈ ಸಿನಿಮಾದ ಒಟ್ಟು ಕಲೆಕ್ಷನ್ (Gadar 2 Collection) ಈಗ 410 ಕೋಟಿ ರೂಪಾಯಿ ದಾಟಿದೆ. ಇನ್ನೂ ಒಂದಷ್ಟು ದಿನಗಳ ಕಾಲ ಈ ಸಿನಿಮಾ ಅತ್ತುತ್ತಮವಾಗಿ ಪ್ರದರ್ಶನ ಕಾಣುವುದು ಗ್ಯಾರಂಟಿ ಆಗಿದೆ. ಇದರಿಂದ ಸನ್ನಿ ಡಿಯೋಲ್ ಅವರಿಗೆ ತುಂಬ ಖುಷಿ ಆಗಿದೆ.
ಮೊದಲ ವೀಕೆಂಡ್ನಲ್ಲಿ ಮಾತ್ರವಲ್ಲದೇ ಎರಡನೇ ವೀಕೆಂಡ್ನಲ್ಲೂ ‘ಗದರ್ 2’ ಸಿನಿಮಾ ಅಬ್ಬರಿಸಿತು. ಈಗ ಮೂರನೇ ವೀಕೆಂಡ್ನಲ್ಲಿ ಯಾವ ರೀತಿ ಕಮಾಲ್ ಮಾಡಲಿದೆ ಎಂಬುದನ್ನು ಕಾದುನೋಡಬೇಕು. ವಾರದ ದಿನಗಳಲ್ಲಿ ಕೂಡ ಈ ಸಿನಿಮಾ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ. ಬಹು ವರ್ಷಗಳ ಬಳಿಕ ನಟ ಸನ್ನಿ ಡಿಯೋಲ್ ಅವರು ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಿದ್ದಾರೆ. ಅವರ ಮುಂಬರುವ ಸಿನಿಮಾಗಳ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವಂತೆ ಆಗಿದೆ.
While *most films* run out of fuel in Week 1 itself, #Gadar2 continues its supremacy, scores in DOUBLE DIGITS even on Day 13 [second Wed]… [Week 2] Fri 20.50 cr, Sat 31.07 cr, Sun 38.90 cr, Mon 13.50 cr, Tue 12.10 cr, Wed 10 cr. Total: ₹ 410.70 cr. #India biz. #Boxoffice pic.twitter.com/RYEIgqX6yK
— taran adarsh (@taran_adarsh) August 24, 2023
ಆಗಸ್ಟ್ 11ರಂದು ‘ಗದರ್ 2’ ಸಿನಿಮಾ ಬಿಡುಗಡೆ ಆಯಿತು. ಅದೇ ದಿನ ಅಕ್ಷಯ್ ಕುಮರ್ ನಟನೆಯ ‘ಒಎಂಜಿ 2’ ಸಿನಿಮಾ ಕೂಡ ಬಿಡುಗಡೆ ಆಗಿತ್ತು. ಒಂದು ದಿನ ಮೊದಲು ‘ಜೈಲರ್’ ಚಿತ್ರದ ತೆರೆಕಂಡು ಉತ್ತಮವಾದ ರೆಸ್ಪಾನ್ಸ್ ಪಡೆದುಕೊಂಡಿತ್ತು. ಅಂಥ ದೊಡ್ಡ ಸಿನಿಮಾಗಳಿಗೂ ಪೈಪೋಟಿ ನೀಡುವ ಮೂಲಕ ‘ಗದರ್ 2’ ಸಿನಿಮಾ ನೂರಾರು ಕೋಟಿ ರೂಪಾಯಿ ಕಮಾಯಿ ಮಾಡಿ ಮುನ್ನುಗ್ಗಿದೆ. ಈ ಸಿನಿಮಾ 500 ಕೋಟಿ ರೂಪಾಯಿ ತನಕವೂ ಕಲೆಕ್ಷನ್ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಟ್ರೇಡ್ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ‘ಸಿನಿಮಾ ಹಿಟ್ ಆದ ಬಳಿಕ ಸನ್ನಿ ಡಿಯೋಲ್ಗೆ ಸೊಕ್ಕು ಬಂತು’; ನಟನ ವರ್ತನೆಗೆ ಆಕ್ರೋಶ
ಮಲ್ಟಿಪ್ಲೆಕ್ಸ್ಗಳಲ್ಲಿ ‘ಗದರ್ 2’ ಚಿತ್ರ ಚೆನ್ನಾಗಿ ಪ್ರದರ್ಶನ ಕಂಡಿದೆ. ಅದಕ್ಕಿಂತಲೂ ಉತ್ತಮವಾಗಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಅಬ್ಬರಿಸಿದೆ. ತುಂಬ ಮಾಸ್ ಆಗಿ ಮೂಡಿಬಂದಿರುವ ಈ ಚಿತ್ರವನ್ನು ಆ್ಯಕ್ಷನ್ ಪ್ರಿಯರು ಇಷ್ಟಪಟ್ಟಿದ್ದಾರೆ. ಮತ್ತೆ ಮತ್ತೆ ಚಿತ್ರಮಂದಿರಕ್ಕೆ ಬಂದು ಜನರು ಈ ಸಿನಿಮಾವನ್ನು ನೋಡುತ್ತಿದ್ದಾರೆ. 2001ರಲ್ಲಿ ‘ಗದರ್’ ಸಿನಿಮಾ ಹಿಟ್ ಆಗಿತ್ತು. ಈಗ ಅದರ ಸೀಕ್ವೆಲ್ ಆಗಿ ‘ಗದರ್ 2’ ಬಂದಿರುವುದರಿಂದ ಜನರು ಮುಗಿಬಿದ್ದು ಸಿನಿಮಾ ನೋಡಿದ್ದಾರೆ. 13ನೇ ದಿನ ಕೂಡ ಈ ಸಿನಿಮಾಗೆ 10 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂಬುದು ಗಮನಾರ್ಹ ವಿಷಯ.
ಇದನ್ನೂ ಓದಿ: ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡಿದ ‘ಗದರ್ 2’; ದುಬೈನಲ್ಲಿ ಸನ್ನಿ ಡಿಯೋಲ್ ಪಾರ್ಟಿ
ಈ ಶುಕ್ರವಾರ (ಆಗಸ್ಟ್ 25) ಬಾಲಿವುಡ್ನಲ್ಲಿ ಹೊಸ ಸಿನಿಮಾಗಳು ತೆರೆಕಾಣುತ್ತಿವೆ. ಆಯುಷ್ಮಾನ್ ಖುರಾನಾ ನಟನೆಯ ‘ಡ್ರೀಮ್ ಗರ್ಲ್ 2’ ಮತ್ತು ನುಸ್ರತ್ ಬರೂಚಾ ಅಭಿನಯದ ‘ಅಕೇಲಿ’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾಗಳಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕರೆ ‘ಗದರ್ 2’ ಹವಾ ಕಡಿಮೆ ಆಗುವ ಸಾಧ್ಯತೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.