ಯಶ್ ಬಳಿಕ ‘ರಾಮಾಯಣ’ ಆಫರ್ ರಿಜೆಕ್ಟ್ ಮಾಡಿದ ನಟಿ ಆಲಿಯಾ ಭಟ್

ನಿರ್ದೇಶಕ ನಿತೇಶ್ ತಿವಾರಿ ಅವರು ಮೂರು ಪಾರ್ಟ್​ನಲ್ಲಿ ‘ರಾಮಾಯಣ’ ಮಾಡಲು ಮುಂದಾಗಿದ್ದಾರೆ. ರಾಮನ ಪಾತ್ರಕ್ಕೆ ರಣಬೀರ್ ಕಪೂರ್, ಸೀತೆಯ ಪಾತ್ರಕ್ಕೆ ಆಲಿಯಾ ಭಟ್ ಹಾಗೂ ರಾವಣನ ಪಾತ್ರಕ್ಕೆ ಯಶ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಆಲೋಚನೆ ನಿತೇಶ್​ಗೆ ಇತ್ತು. ಆದರೆ, ಈಗ ಅವರ ಲೆಕ್ಕಾಚಾರ ಉಲ್ಟಾ ಆಗುತ್ತಿದೆ.

ಯಶ್ ಬಳಿಕ ‘ರಾಮಾಯಣ’ ಆಫರ್ ರಿಜೆಕ್ಟ್ ಮಾಡಿದ ನಟಿ ಆಲಿಯಾ ಭಟ್
ಆಲಿಯಾ-ಯಶ್
Follow us
ರಾಜೇಶ್ ದುಗ್ಗುಮನೆ
|

Updated on:Aug 24, 2023 | 11:40 AM

‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿ 17 ತಿಂಗಳು ಕಳೆದಿವೆ. ಆದರೆ, ಯಶ್ (Yash) ಅವರ ಹೊಸ ಸಿನಿಮಾ ಬಗ್ಗೆ ಯಾವುದೇ ಅಪ್​ಡೇಟ್ ಸಿಕ್ಕಿಲ್ಲ. ಅವರು ಯಾವ ಸಿನಿಮಾ ಒಪ್ಪಿಕೊಳ್ಳುತ್ತಾರೆ ಎನ್ನುವ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದೆ. ಈ ಮಧ್ಯೆ ಅವರು ಅನೇಕ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ್ದರು ಎನ್ನುವ ಸುದ್ದಿ ಕೂಡ ಹರಿದಾಡಿತ್ತು. ಆ ಪೈಕಿ ರಾಮಾಯಣ (Ramayana) ಸಿನಿಮಾ ಕೂಡ ಒಂದು. ಈಗ ಈ ಚಿತ್ರದ ಆಫರ್​ನ ಆಲಿಯಾ ಭಟ್ ಕೂಡ ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಅವರು ಈ ಆಫರ್ ರಿಜೆಕ್ಟ್ ಮಾಡಿದ್ದಕ್ಕೆ ಸ್ಪಷ್ಟನೆ ಕೂಡ ಸಿಕ್ಕಿದೆ.

ಇತ್ತೀಚೆಗೆ ಪುರಣಾಗಳ ಕಥೆ ಇಟ್ಟುಕೊಂಡು ಸಿನಿಮಾ ಮಾಡುವ ಪ್ರಯತ್ನ ನಡೆದಿದೆ. ಆ ಪೈಕಿ ‘ರಾಮಾಯಣ’, ‘ಶಾಕುಂತಲಂ’ ಸಿನಿಮಾಗಳು ಸೋತವು. ಹೀಗಿರುವಾಗ ನಿರ್ದೇಶಕ ನಿತೇಶ್ ತಿವಾರಿ ಅವರು ಮೂರು ಪಾರ್ಟ್​ನಲ್ಲಿ ‘ರಾಮಾಯಣ’ ಮಾಡಲು ಮುಂದಾಗಿದ್ದಾರೆ. ರಾಮನ ಪಾತ್ರಕ್ಕೆ ರಣಬೀರ್ ಕಪೂರ್, ಸೀತೆಯ ಪಾತ್ರಕ್ಕೆ ಆಲಿಯಾ ಭಟ್ ಹಾಗೂ ರಾವಣನ ಪಾತ್ರಕ್ಕೆ ಯಶ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಆಲೋಚನೆ ನಿತೇಶ್​ಗೆ ಇತ್ತು. ಆದರೆ, ಈಗ ಅವರ ಲೆಕ್ಕಾಚಾರ ಉಲ್ಟಾ ಆಗುತ್ತಿದೆ.

ನಿತೇಶ್ ಅವರು ಈ ಮೂವರನ್ನೂ ಭೇಟಿ ಮಾಡಿ ಆಫರ್ ನೀಡಿದ್ದರು. ಈ ಮೊದಲೇ ಯಶ್ ಅವರು ಆಫರ್ ರಿಜೆಕ್ಟ್ ಮಾಡಿದ್ದರು. ಆಲಿಯಾ ಭಟ್ ಅವರು ಸ್ವಲ್ಪ ಸಮಯ ತೆಗೆದುಕೊಂಡು ಆಫರ್​ನ ತಿರಸ್ಕರಿಸಿದ್ದಾರೆ. ಇದಕ್ಕೆ ಕಾರಣ ಡೇಟ್ಸ್ ಹೊಂದಾಣಿಕೆ ಆಗದೇ ಇರುವುದು.

ಇದನ್ನೂ ಓದಿ: ‘ನಮಗೆ ಒಂದೇ ಸಿನಿಮಾದಲ್ಲಿ ನಟಿಸೋಕೆ ಚಾನ್ಸ್ ಕೊಡಿ’; ಕರೀನಾ ಜೊತೆ ಕಾಣಿಸಿಕೊಂಡ ಆಲಿಯಾ ಹೊಸ ಮನವಿ

‘ಹಾರ್ಟ್ ಆಫ್ ಸ್ಟೋನ್’ ಬಳಿಕ ಆಲಿಯಾ ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ಅವರು ಇನ್ನು ಕೆಲ ವರ್ಷ ಬೆರಳೆಣಿಕೆ ಸಿನಿಮಾ ಒಪ್ಪಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅವರಿಗೆ ಮಗಳ ಆರೈಕೆ ಮಾಡಬಬೇಕಿದೆ. ‘ರಾಮಾಯಣ’ ಮೂರು ಭಾಗದಲ್ಲಿ ಬರುವುದರಿಂದ ಹೆಚ್ಚಿನ ಸಮಯ ಮೀಸಲಿಡಬೇಕಾಗುತ್ತದೆ. ಈ ಕಾರಣಕ್ಕೆ ಅವರು ಸಿನಿಮಾದಲ್ಲಿ ನಟಿಸಲು ಒಪ್ಪಿಲ್ಲ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:48 am, Thu, 24 August 23