50 ಲಕ್ಷ ರೂಪಾಯಿಗೆ ರಾಖಿ ಸಾವಂತ್​ ಬೆತ್ತಲೆ ವಿಡಿಯೋ ಮಾರಾಟ ಮಾಡಿದ ಗಂಡ? ವಿಚ್ಛೇದನಕ್ಕೆ ನಟಿ ನಿರ್ಧಾರ

‘ನಾವು ಹನಿಮೂನ್​ಗೆ ತೆರಳಿದ್ದಾಗ ನನ್ನ ಗಂಡ ಆದಿಲ್​ ಖಾನ್​ ದುರಾನಿ ಬೆತ್ತಲೆ ವಿಡಿಯೋ ಚಿತ್ರಿಸಿಕೊಂಡ. 47 ಲಕ್ಷದಿಂದ 50 ಲಕ್ಷ ರೂಪಾಯಿವರೆಗೆ ಹಣ ಪಡೆದು ಅರಬ್​ ದೇಶದ ಒಬ್ಬ ವ್ಯಕ್ತಿಗೆ ಆ ವಿಡಿಯೋಗಳನ್ನು ಆದಿಲ್​ ಖಾನ್​ ಮಾರಿದ್ದಾನೆ’ ಎಂದು ರಾಖಿ ಸಾವಂತ್​ ಆರೋಪ ಮಾಡಿದ್ದಾರೆ. ಈ ರೀತಿಯ ಅನೇಕ ಆರೋಪಗಳನ್ನು ಅವರು ಹೊರಿಸಿದ್ದಾರೆ.

50 ಲಕ್ಷ ರೂಪಾಯಿಗೆ ರಾಖಿ ಸಾವಂತ್​ ಬೆತ್ತಲೆ ವಿಡಿಯೋ ಮಾರಾಟ ಮಾಡಿದ ಗಂಡ? ವಿಚ್ಛೇದನಕ್ಕೆ ನಟಿ ನಿರ್ಧಾರ
ಆದಿಲ್​ ಖಾನ್​, ರಾಖಿ ಸಾವಂತ್​
Follow us
ಮದನ್​ ಕುಮಾರ್​
|

Updated on: Aug 23, 2023 | 5:42 PM

ನಟಿ ರಾಖಿ ಸಾವಂತ್​ (Rakhi Sawant) ಅವರು ಮತ್ತೆ ವಿವಾದದ ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ. ತಮ್ಮ ಜೊತೆ ಕಿರಿಕ್​ ಮಾಡಿಕೊಂಡು ದೂರಾಗಿರುವ ಗಂಡ ಆದಿಲ್​ ಖಾನ್​ ದುರಾನಿ (Adil Khan Durrani) ಬಗ್ಗೆ ಅವರು ಸರಣಿ ಆರೋಪಗಳನ್ನು ಮಾಡುತ್ತಿದ್ದಾರೆ. ಮದುವೆಯಾದ ಕೆಲವೇ ತಿಂಗಳಲ್ಲಿ ಈ ಜೋಡಿಯ ನಡುವೆ ವೈಮನಸ್ಸು ಉಂಟಾಯಿತು. ಆದಿಲ್​ ಖಾನ್​ ದುಬಾರಿಯಿಂದ ತಾವು ಹಲ್ಲೆಗೆ ಒಳಗಾಗಿರುವುದಾಗಿ ರಾಖಿ ಸಾವಂತ್​ ಹೇಳಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಬೆತ್ತಲೆ ವಿಡಿಯೋವನ್ನು ಆದಿಲ್​ ಖಾನ್​ ದುರಾನಿ ಮಾರಾಟ ಮಾಡಿದ್ದಾರೆ ಎಂದು ಕೂಡ ರಾಖಿ ಸಾವಂತ್​ ಆರೋಪಿಸಿದ್ದಾರೆ. ಈ ಘಟನೆಯಿಂದ ನೊಂದಿರುವ ಅವರು ವಿಚ್ಛೇದನ (Divorce) ನೀಡಲು ನಿರ್ಧರಿಸಿದ್ದಾರೆ. ಅವರ ಸಂಸಾರದ ರಂಪಾಟ ಬೀದಿಗೆ ಬಂದಿದೆ.

ರಾಖಿ ಸಾವಂತ್​ ನೀಡಿದ ದೂರಿನ ಮೇರೆಗೆ ಆದಿಲ್​ ಖಾನ್​ ದುರಾನಿಯನ್ನು ಪೊಲೀಸರು ಬಂದಿಸಿದ್ದರು. ಹಲವು ತಿಂಗಳ ಕಾಲ ಜೈಲಿನಲ್ಲಿ ಇದ್ದ ಅವರು ಈಗ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಅದರ ಬೆನ್ನಲ್ಲೇ ರಾಖಿ ಸಾವಂತ್​ ಅವರು ಸುದ್ದಿಗೋಷ್ಠಿ ಕರೆದು ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಲಕ್ಷಾಂತರ ರೂಪಾಯಿಗೆ ತಮ್ಮ ನಗ್ನ ವಿಡಿಯೋವನ್ನು ಮಾರಾಟ ಮಾಡಲಾಗಿದೆ ಎಂಬುದು ರಾಖಿ ಸಾವಂತ್​ ಅವರ ಪ್ರಮುಖ ಆರೋಪಗಳಲ್ಲಿ ಒಂದು. ಇದಕ್ಕೆ ಆದಿಲ್​ ಖಾನ್​ ದುರಾನಿ ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ: ‘ಗಂಡಸರ ಜೊತೆಗೂ ಆದಿಲ್​ ಖಾನ್​ ಲೈಂಗಿಕ ಕ್ರಿಯೆ ನಡೆಸುತ್ತಿದ್ದ’: ಗಂಡನ ಬಗ್ಗೆ ರಾಖಿ ಸಾವಂತ್ ಆರೋಪ

‘ನಾವು ಹನಿಮೂನ್​ಗೆ ತೆರಳಿದ್ದಾಗ ನನ್ನ ಗಂಡ ಆದಿಲ್​ ಖಾನ್​ ದುರಾನಿ ಬೆತ್ತಲೆ ವಿಡಿಯೋ ಚಿತ್ರಿಸಿಕೊಂಡ. ಬಾತ್​ರೂಮ್​ನಲ್ಲಿ, ಬೆಡ್​ ರೂಮ್​ನಲ್ಲಿ ನನ್ನ ವಿಡಿಯೋ ಸೆರೆ ಹಿಡಿದಿದ್ದ. 47 ಲಕ್ಷದಿಂದ 50 ಲಕ್ಷ ರೂಪಾಯಿವರೆಗೆ ಹಣ ಪಡೆದು ಅರಬ್​ ದೇಶದ ಒಬ್ಬ ವ್ಯಕ್ತಿಗೆ ಆ ವಿಡಿಯೋಗಳನ್ನು ಆದಿಲ್​ ಖಾನ್​ ಮಾರಿದ್ದಾನೆ. ತನ್ನದೇ ಪತ್ನಿಯ ಬೆತ್ತಲೆ ವಿಡಿಯೋವನ್ನು ಆತ ಮಾರಾಟ ಮಾಡಿದ್ದಾನೆ’ ಎಂದು ರಾಖಿ ಸಾವಂತ್​ ಆರೋಪ ಹೊರಿಸಿದ್ದಾರೆ.

ಇದನ್ನೂ ಓದಿ: ಕೊಲೆ ಬೆದರಿಕೆ ಬಂದಿದೆ ಎಂದು ಹೆಲ್ಮೆಟ್ ಧರಿಸಿ ಓಡಾಡಿದ ರಾಖಿ ಸಾವಂತ್​; ನಾಟಕ ನಿಲ್ಲಿಸಿ ಎಂದ ಫ್ಯಾನ್ಸ್

ಮೈಸೂರು ಮೂಲದ ವ್ಯಕ್ತಿ ಆದಿಲ್​ ಖಾನ್​. ತಮ್ಮನ್ನು ಮೈಸೂರಿಗೆ ಕರೆಸಿಕೊಂಡು, ರೂಮಿನಲ್ಲಿ ಕೂಡಿಹಾಕಿ, ಬಟ್ಟೆಗಳನ್ನು ಹರಿದು ಕಿರುಕುಳ ನೀಡಿರುವುದಾಗಿ ರಾಖಿ ಸಾವಂತ್​ ಹೇಳಿದ್ದಾರೆ. ಆ ಘಟನೆ ನಡೆದ ಕೆಲವು ದಿನಗಳ ನಂತರ ಆದಿಲ್​ ಖಾನ್​ ಗೋವಾಗೆ ಬಂದು ರಾಖಿ ಜೊತೆ ಮದುವೆ ಮಾಡಿಕೊಂಡರು. ಈಗ ಆದಿಲ್​ನನ್ನು ತಮ್ಮ ಗಂಡ ಎಂದು ಕರೆಯಲು ರಾಖಿ ಸಾವಂತ್​ ಸಿದ್ಧರಿಲ್ಲ. ಶೀಘ್ರದಲ್ಲೇ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ: Rakhi Sawant: ಗಂಡನ ಮೇಲೆ ತಾನೇ ಕೇಸ್​ ಹಾಕಿ ಜೈಲಿಗೆ ಕಳಿಸಿ, ಈಗ ಜಾಮೀನು ಸಿಗಲಿ ಅಂತ ಪ್ರಾರ್ಥಿಸಿದ ರಾಖಿ ಸಾವಂತ್​

‘ಇಷ್ಟು ತಿಂಗಳು ಅವನು ಜೈಲಿನಲ್ಲಿ ಇದ್ದಿದ್ದಕ್ಕೆ ನಾನು ಕಾರಣವಲ್ಲ. ಅವನ ಇರಾನಿ ಪ್ರೇಯಸಿಯು ರೇಪ್​ ಕೇಸ್​ ಹಾಕಿದ್ದಳು. ನನಗೆ ಆದಿಲ್​ ಖಾನ್​ ಹೊಡೆದು, ಟಾರ್ಚರ್​ ಮಾಡಿದ್ದ. ಆ ಕಾರಣಕ್ಕೆ ಆತ ಜೈಲಲ್ಲಿ ಇದ್ದಿದ್ದು ಕೇವಲ 22 ದಿನಗಳು ಅಷ್ಟೇ. ಮನೆಯಲ್ಲಿ ಬೇರೆ ಮಹಿಳೆಯರು ಹಾಗೂ ಗಂಡಸರ ಜತೆ ಅವನು ಲೈಂಗಿಕ ಕ್ರಿಯೆ ನಡೆಸಿದ್ದನ್ನು ನಾನು ಕಂಡಿದ್ದೇನೆ. ಇಲ್ಲಿ ಮತ್ತು ದುಬೈನಲ್ಲಿ ಅವನು ನನಗೆ ಹೊಡೆಯಲು ಪ್ರಯತ್ನಿಸಿದ. ಆದರೂ ನಾನು ಸೈಲೆಂಟ್​ ಆಗಿದ್ದೆ’ ಎಂದು ರಾಖಿ ಸಾವಂತ್​ ಅವರು ಆರೋಪಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.