- Kannada News Photo gallery Alia Bhatt Shares Post With Kareena Kapoor And Ask Producer To Cast Together
‘ನಮಗೆ ಒಂದೇ ಸಿನಿಮಾದಲ್ಲಿ ನಟಿಸೋಕೆ ಚಾನ್ಸ್ ಕೊಡಿ’; ಕರೀನಾ ಜೊತೆ ಕಾಣಿಸಿಕೊಂಡ ಆಲಿಯಾ ಹೊಸ ಮನವಿ
ಆಲಿಯಾ ಭಟ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಅವರು ಹಲವು ಫೋಟೋ ಹಂಚಿಕೊಳ್ಳುತ್ತಾರೆ. ಈಗ ಅವರು ಶೇರ್ ಮಾಡಿಕೊಂಡಿರುವ ಫೋಟೋ ಗಮನ ಸೆಳೆದಿದೆ. ಇದರ ಜೊತೆಗೆ ಅವರು ವಿಶೇಷ ಮನವಿ ಕೂಡ ಮಾಡಿಕೊಂಡಿದ್ದಾರೆ.
Updated on: Aug 19, 2023 | 9:10 AM

ನಟಿ ಆಲಿಯಾ ಭಟ್ ಹಾಗೂ ಕರೀನಾ ಕಪೂರ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ, ಇವರಿಗೆ ಒಟ್ಟಿಗೆ ನಟಿಸೋಕೆ ಅವಕಾಶ ಸಿಕ್ಕಿರಲಿಲ್ಲ. ಈಗ ಇಬ್ಬರೂ ಒಟ್ಟಿಗೆ ಇರೋ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ವಿಶೇಷ ಮನವಿ ಮಾಡಿದ್ದಾರೆ.

ಆಲಿಯಾ ಭಟ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಅವರು ಹಲವು ಫೋಟೋ ಹಂಚಿಕೊಳ್ಳುತ್ತಾರೆ. ಈಗ ಅವರು ಶೇರ್ ಮಾಡಿಕೊಂಡಿರುವ ಫೋಟೋ ಗಮನ ಸೆಳೆದಿದೆ. ಇದರ ಜೊತೆಗೆ ಅವರು ವಿಶೇಷ ಮನವಿ ಕೂಡ ಮಾಡಿಕೊಂಡಿದ್ದಾರೆ.

ಕರೀನಾ ಕಪೂರ್ ಜೊತೆ ನಿಂತು ಆಲಿಯಾ ಭಟ್ ಪೋಸ್ ನೀಡಿದ್ದಾರೆ. ಈ ಫೋಟೋಗೆ ಅವರು ‘ಒಂದೇ ಸಿನಿಮಾದಲ್ಲಿ ನಟಿಸೋಕೆ ಚಾನ್ಸ್ ಕೊಡಿ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಮನವಿಯನ್ನು ಯಾವುದಾದರೂ ನಿರ್ಮಾಪಕರು ಗಂಭೀರವಾಗಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಅಂದಹಾಗೆ ಕರೀನಾ ಕಪೂರ್ ಹಾಗೂ ಆಲಿಯಾ ಭಟ್ ಒಟ್ಟಾಗಿ ಕಾಣಿಸಿಕೊಂಡಿದ್ದು ಜಾಹೀರಾತಿಗಾಗಿ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅವರ ಕಡೆಯಿಂದ ಯಾವುದೇ ಮಾಹಿತಿ ರಿವೀಲ್ ಆಗಿಲ್ಲ.

ಆಲಿಯಾ ಭಟ್ ಅವರ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗಿ ಹಿಟ್ ಆಯಿತು. ಈ ಚಿತ್ರ 100+ ಕೋಟಿ ರೂಪಾಯಿ ಮಾಡಿದೆ. ಇದರ ಜೊತೆಗೆ ಅವರ ಮೊದಲ ಇಂಗ್ಲಿಷ್ ಸಿನಿಮಾ ‘ಹಾರ್ಟ್ ಆಫ್ ಸ್ಟೋನ್’ ಒಟಿಟಿಯಲ್ಲಿ ಬಿಡುಗಡೆ ಆಗಿದೆ.

ಕರೀನಾ ಕಪೂರ್ ಅವರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಮಕ್ಕಳಾದ ಬಳಿಕ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ ಕರೀನಾ.

ಕರೀನಾ ಕುಟುಂಬದ ಜೊತೆ ಆಗಾಗ ಪ್ರವಾಸ ತೆರಳುತ್ತಾರೆ. ಪತಿ ಸೈಫ್ ಅಲಿ ಖಾನ್ ಜೊತೆ ಸುತ್ತಾಡುವ ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಇವರಿಗೆ ಥೈಮೂರ್ ಹಾಗೂ ಜಹಾಂಗಿರ್ ಹೆಸರಿನ ಮಕ್ಕಳಿದ್ದಾರೆ.



















