Sunny Leone: ಸನ್ನಿ ಲಿಯೋನ್ ಹೊಸ ಹಾಡಿನಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಅಪಮಾನ?; ನೆಟ್ಟಿಗರ ತೀವ್ರ ವಿರೋಧ

Madhuban song: ಬಾಲಿವುಡ್ ನಟಿ ಸನ್ನಿ ಲಿಯೋನ್ ಕಾಣಿಸಿಕೊಂಡಿರುವ ಹಾಡೊಂದಕ್ಕೆ ಇದೀಗ ವಿರೋಧ ವ್ಯಕ್ತವಾಗಿದೆ. ಯಾವ ಹಾಡು? ಅದಕ್ಕೆ ವಿರೋಧವೇಕೆ? ಇಲ್ಲಿದೆ ಮಾಹಿತಿ.

Sunny Leone: ಸನ್ನಿ ಲಿಯೋನ್ ಹೊಸ ಹಾಡಿನಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಅಪಮಾನ?; ನೆಟ್ಟಿಗರ ತೀವ್ರ ವಿರೋಧ
‘ಮಧುಬನ್’ ಹಾಡಿನಲ್ಲಿ ಸನ್ನಿ ಲಿಯೋನ್
Edited By:

Updated on: Dec 24, 2021 | 11:59 AM

ಬಾಲಿವುಡ್ ನಟಿ ಸನ್ನಿ ಲಿಯೋನ್ (Sunny Leone) ಮತ್ತು ಗಾಯಕಿ ಕನಿಕಾ ಕಪೂರ್ (Kanika Kapoor) ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಹೊಸ ಹಾಡು ‘ಮಧುಬನ್’ (Madhuban) ಬಿಡುಗಡೆಯಾಗಿದೆ. ಕೇವಲ ಎರಡು ದಿನದ ಹಿಂದೆ ಬಿಡುಗಡೆಯಾಗಿರುವ ಈ ಹಾಡು ಸಖತ್ ವೀಕ್ಷಣೆ ಕಾಣುತ್ತಿದ್ದು, ಈಗಾಗಲೇ 70 ಲಕ್ಷ ವೀಕ್ಷಕರು ಅದನ್ನು ವೀಕ್ಷಿಸಿದ್ದಾರೆ. ಶರೀಬ್ ಮತ್ತು ತೋಶಿ ಸಂಗೀತ ನೀಡಿರುವ ಈ ಹಾಡನ್ನು ಬಾಲಿವುಡ್​ನ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ನಿರ್ದೇಶಿಸಿದ್ದಾರೆ. ಹಾಡಿಗೆ ವಿಮರ್ಶಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಕೆಲವರು ಕ್ರಿಸ್​ಮಸ್​​ ಸಂದರ್ಭಕ್ಕೆ ಹೇಳಿಮಾಡಿಸಿದಂತಿದೆ ಎಂದಿದ್ದರೆ, ಮತ್ತೆ ಕೆಲವು ವಿಮರ್ಶೆಯಲ್ಲಿ ಸನ್ನಿ- ಕನಿಕಾ ಕಾಂಬಿನೇಷನ್ ಪ್ರತಿ ಬಾರಿ ಮೋಡಿ ಮಾಡುತ್ತದೆ ಎನ್ನುವುದು ತಪ್ಪು ಕಲ್ಪನೆ ಎನ್ನಲಾಗಿತ್ತು. ಇದೀಗ ಹಾಡಿಗೆ ವಿರೋಧ ವ್ಯಕ್ತವಾಗುತ್ತಿದ್ದು, ಜನರು ಸಾಮಾಜಿಕ ಜಾಲತಾಣದಲ್ಲಿ ಸನ್ನಿ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತಿದ್ದಾರೆ.

ಹಾಡಿಗೆ ವಿರೋಧ ಏಕೆ?
ಟ್ವಿಟರ್​ನಲ್ಲಿ ಸನ್ನಿ ಲಿಯೋನ್ ಹಾಡಿನ ಕುರಿತಾದ ಟ್ವೀಟ್ ಹಂಚಿಕೊಂಡಿದ್ದರು. ಹಲವರು ಇದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಆದರೆ ಎಲ್ಲರಿಗೂ ಈ ಹಾಡು ಇಷ್ಟವಾಗಿಲ್ಲ. ಅಲ್ಲದೇ ಹಿಂದೂ ಧಾರ್ಮಿಕ ಭಾವನೆಗಳಿಗೆ ಹಾಡಿನಲ್ಲಿ ಅಪಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿರುವ ಕಾರಣ ಸನ್ನಿ ಲಿಯೋನ್ ಕ್ಷಮೆಯಾಚಿಸಬೇಕು ಎಂದು ಹಲವರು ಪ್ರತಿಕ್ರಿಯಿಸಿದ್ದರೆ, ಮತ್ತಷ್ಟು ಜನ ಹಾಡನ್ನುನ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಳಕೆದಾರರೊಬ್ಬರು ತಮ್ಮ ಕಾಮೆಂಟಿನಲ್ಲಿ ಹಾಡಿಗೆ ವಿರೋಧವೇಕೆ ಎಂಬುದನ್ನು ಬರೆಯುತ್ತಾ, ‘‘ರಾಧಾ ನರ್ತಕಿಯಲ್ಲ, ಆಕೆ ಭಕ್ತೆ. ಮಧುಬನ ಉದಾತ್ತ ಸ್ಥಳವಾಗಿದ್ದು, ಇಂತಹ ನೃತ್ಯವನ್ನು ಅಲ್ಲಿ ಮಾಡುವುದಿಲ್ಲ. ಇದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಯತ್ನ’’ ಎಂದಿದ್ದಾರೆ. ಹಲವರು ಸಾಹಿತ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನಾಚಿಕೆಗೇಡಿನ ಸಾಹಿತ್ಯ ಇದಾಗಿದೆ ಎಂದಿದ್ದಾರೆ.

‘ಮಧುಬನ್’ ಹಾಡಿಗೆ ಬಂದ ಪ್ರತಿಕ್ರಿಯೆಗಳು

ಹಲವರು ಹಾಡನ್ನು ರಿಪೋರ್ಟ್ ಮಾಡಬೇಕೆಂದು ಒತ್ತಾಯಿಸುತ್ತಿದ್ದು, ‘‘ದೇವರನ್ನು ದೂಷಿಸುವ ಹಾಡನ್ನು ರಿಪೋರ್ಟ್ ಮಾಡಬೇಕು. ಜನರ ಹಣದಿಂದ ನೀವೆಲ್ಲರೂ ಐಷಾರಾಮಿ ಜೀವನ ಅನುಭವಿಸುತ್ತಿದ್ದೀರಿ. ಈ ಕುರಿತು ಬಹಳ ಜಾಗರೂಕರಾಗಿರಿ. ಹಾಡನ್ನು ತೆಗೆದುಹಾಕಿ, ಸಾಹಿತ್ಯ ಬದಲಾಯಿಸಿ’’ ಎಂದು ಬರೆದಿದ್ದಾರೆ.

‘ಮಧುಬನ್’ ಹಾಡು ಇಲ್ಲಿದೆ:

ಇದನ್ನೂ ಓದಿ:

Radhe Shyam Trailer: ‘ಪ್ರಾಣ ಕೊಟ್ಟ ಪ್ರೀತಿ ಪ್ರಾಣ ತೆಗೆಯುತ್ತಾ?’ ‘ರಾಧೆ ಶ್ಯಾಮ್​’ ಟ್ರೇಲರ್​ನಲ್ಲಿ ಮಿಂಚಿದ ಪ್ರಭಾಸ್​-ಪೂಜಾ ಹೆಗ್ಡೆ

 ಕಟ್​ ಎಂದ ನಂತರವೂ ಇಮ್ರಾನ್​ ಹಷ್ಮಿಗೆ ಕಿಸ್​ ಮಾಡೋದು ಮುಂದುವರಿಸಿದ ನರ್ಗೀಸ್​; ವಿಡಿಯೋ ವೈರಲ್​  

Published On - 8:24 am, Fri, 24 December 21