ಒಂದು ಕಾಲದಲ್ಲಿ ನಟಿ ಸನ್ನಿ ಲಿಯೋನ್ ಅವರು ನೀಲಿ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು. ಅಶ್ಲೀಲ ಸಿನಿಮಾಗಳಲ್ಲಿ ಸ್ಟಾರ್ ಪಟ್ಟ ಪಡೆದಿದ್ದ ಅವರು ನಂತರ ಬಾಲಿವುಡ್ ಕಡೆಗೆ ಆಸಕ್ತಿ ತೋರಿಸಿದರು. ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಸನ್ನಿ ಲಿಯೋನ್ ಅವರು ನೀಲಿ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಿದರು. ಮತ್ತೆ ಎಂದಿಗೂ ಅವರು ಆ ಕಡೆ ತಲೆ ಹಾಕಲಿಲ್ಲ. ಹಾಗಿದ್ದರೂ ಕೂಡ ಸನ್ನಿ ಲಿಯೋನ್ ಅವರನ್ನು ಕೆಲವರು ಬೇರೆ ದೃಷ್ಟಿಯಲ್ಲಿ ನೋಡುತ್ತಾರೆ. ಆ ಬಗ್ಗೆ ಅವರೀಗ ಮೌನ ಮುರಿದಿದ್ದಾರೆ. ಇಂದಿಗೂ ತಮ್ಮನ್ನು ಮಾಜಿ ನೀಲಿ ತಾರೆ ಎಂಬ ರೀತಿಯಲ್ಲಿ ಗುರುತಿಸುತ್ತಿರುವುದು ನಟಿಗೆ ಬೇಸರ ಮೂಡಿಸಿದೆ.
ಇತ್ತೀಚೆಗೆ ಸನ್ನಿ ಲಿಯೋನ್ ಅವರು ಒಂದು ಸಂದರ್ಶನದಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರ ಇಮೇಜ್ ಬಗ್ಗೆ ಪ್ರಶ್ನೆ ಎದುರಾಯಿತು. ಈ ಮೊದಲು ಮಾಡಿದ್ದ ಅಶ್ಲೀಲ ಸಿನಿಮಾಗಳ ಮೂಲಕ ಜನರು ಸನ್ನಿ ಲಿಯೋನ್ ಅವರನ್ನು ಗುರುತಿಸುತ್ತಾರೆ. ಅದರಿಂದ ಅವರಿಗೆ ಯಾವ ರೀತಿ ಫೀಲ್ ಆಗುತ್ತದೆ ಎಂದು ಕೇಳಲಾಯಿತು. ಈ ಪ್ರಶ್ನೆಯೇ ಸನ್ನಿ ಲಿಯೋನ್ ಅವರಿಗೆ ವಿಚಿತ್ರ ಎನಿಸಿತು.
‘ನಾವು ಇಂದಿಗೂ ಅದರ ಬಗ್ಗೆಯೇ ಮಾತನಾಡುತ್ತಿದ್ದೇವೆ ಎಂಬುದು ಹೆಚ್ಚು ಚಿಂತೆಗೆ ಕಾರಣವಾಗುತ್ತಿದೆ. ನಾನು ಬಾಲಿವುಡ್ಗೆ ಬಂದು 13 ವರ್ಷ ಆಯಿತು. ಹಳೆಯದು ಹೋಗಲಿ ಬಿಡಿ. ನೀವೇ ಅದನ್ನು ಮರೆಯದಿದ್ದರೆ ನಾವು ಮುಂದೆ ಸಾಗುವುದು ಹೇಗೆ? ಮುಂದೆ ಸಾಗಲು ಇದು ಸರಿಯಾದ ಸಮಯ’ ಎಂದು ಸನ್ನಿ ಲಿಯೋನ್ ಅವರು ಹೇಳಿದ್ದಾರೆ. ಆ ದಿನಗಳ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸನ್ನಿ ಲಿಯೋನ್ ಅವರಿಗೆ ಕಿರಿಕಿರಿ ಆಗಿದೆ.
ಇದನ್ನೂ ಓದಿ: ಸನ್ನಿ ಲಿಯೋನಿ ನಟಿಯಷ್ಟೆ ಅಲ್ಲ ಉದ್ಯಮಿಯೂ ಹೌದು
ಹಿಂದಿ ಬಿಗ್ ಬಾಸ್ ಸೀಸನ್ 5 ಮೂಲಕ ಸನ್ನಿ ಲಿಯೋನ್ ಅವರು ಭಾರತದ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದರು. ಬಳಿಕ ಅವರಿಗೆ ಬಾಲಿವುಡ್ನಿಂದ ಅವಕಾಶಗಳು ಬರಲು ಆರಂಭಿಸಿದವು. ‘ಜಿಸ್ಮ್ 2’ ಸನ್ನಿ ಲಿಯೋನ್ ನಟಿಸಿದ ಮೊದಲ ಬಾಲಿವುಡ್ ಸಿನಿಮಾ. ನಂತರ, ‘ಜಾಕ್ಪಾಟ್’, ‘ರಾಗಿಣಿ ಎಂಎಂಎಸ್ 2’ ಮುಂತಾದ ಸಿನಿಮಾಗಳು ಕೂಡ ಸನ್ನಿ ಲಿಯೋನ್ ಅವರಿಗೆ ಖ್ಯಾತಿ ತಂದುಕೊಟ್ಟವು. ಹಲವು ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್ ಮಾಡುವ ಮೂಲಕವೂ ಸನ್ನಿ ಲಿಯೋನ್ ಫೇಮಸ್ ಆದರು. ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟು ಸಹ ಜನರಿಗೆ ಹತ್ತಿರವಾದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.