ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ 4 ವರ್ಷಗಳು ಕಳೆದಿವೆ. ಆದರೆ, ಅಭಿಮಾನಿಗಳು ನಟನನ್ನು ಮರೆಯಲು ಸಾಧ್ಯವಾಗಿಲ್ಲ. ಸುಶಾಂತ್ ಅವರ ಹಳೆಯ ಫೋಟೋಗಳು ಮತ್ತು ವೀಡಿಯೊಗಳು ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಸುಶಾಂತ್ ಈಗ ಅವರ ಅಭಿಮಾನಿಗಳ ನಡುವೆ ಇಲ್ಲ… ಅನೇಕರಿಗೆ ಇನ್ನೂ ಇದನ್ನು ನಂಬಲು ಸಾಧ್ಯವಿಲ್ಲ. ಅಭಿಮಾನಿಗಳು ಯಾವಾಗಲೂ ಸುಶಾಂತ್ ಅವರ ಹಳೆಯ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ. ಆದರೆ ಇದೀಗ ಯುವಕನೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿರುವ ಯುವಕ ಸುಶಾಂತ್‌ನಂತೆಯೇ ಕಾಣುತ್ತಾನೆ. ವಿಡಿಯೋ ನೋಡಿದ ಸುಶಾಂತ್ ಮತ್ತೆ ಬಂದರು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
ಒಂದು ವ್ಯಕ್ತಿ ರೀತಿ ಏಳು ಜನ ಇರುತ್ತಾರೆ ಎಂಬುದು ಅನೇಕರ ನಂಬಿಕೆ. ಇದು ಕೆಲವೊಮ್ಮೆ ನಿಜ ಎನಿಸಿದ್ದೂ ಇದೆ. ಈಗ ಅದು ಮತ್ತೊಮ್ಮೆ ಸಾಬೀತಾಗಿದೆ. ಸುಶಾಂತ್ ರೀತಿಯೇ ಇರುವ ವ್ಯಕ್ತಿಯ ವಿಡಿಯೋ ವೈರಲ್ ಆಗಿದೆ. ಸುಶಾಂತ್ ಅವರಂತೆಯೇ ಕಾಣುವ ಹುಡುಗ ಡೆಮಿನ್ ಅಯಾನ್. ಡೆಮಿನ್ ಯಾವಾಗಲೂ ತಮ್ಮ ಚಿತ್ರಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ. ಅವನ ಮುಖದಿಂದ ಅವನ ವ್ಯಕ್ತಿತ್ವದವರೆಗೆ, ಡೆಮಿನ್ ಅವರು ಸುಶಾಂತ್‌ರಂತೆ ಕಾಣುತ್ತಾರೆ. ಈ ವಿಡಿಯೋ ನೋಡಿದ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳು ಮೂಕವಿಸ್ಮಿತರಾಗಿದ್ದಾರೆ. ಒಬ್ಬರಂತೆ ಇನ್ನೊಬ್ಬರು ಹೇಗೆ ಕಾಣುತ್ತಾರೆ ಎಂದು ಅವರು ಆಶ್ಚರ್ಯ ಪಟ್ಟಿದ್ದಾರೆ. ಡೆಮಿನ್ ಅಯಾನ್ ಅವರ ಈ ವೀಡಿಯೊಗೆ ಸುಶಾಂತ್ ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ:ಸುಶಾಂತ್ ಸಿಂಗ್ ಕೇಸ್; ಪ್ರಮುಖ ಆರೋಪಿಯನ್ನು ಕೈಬಿಟ್ಟ ಕೋರ್ಟ್
ಡೆಮಿನ್ ಅವರ ವೀಡಿಯೋಗೆ ಕಾಮೆಂಟ್ ಮಾಡಿದ ಅನೇಕರು, ‘ನಾವು ಸುಶಾಂತ್ ಎಂದು ಭಾವಿಸಿದೆವು…’ ಎಂದು ಹೇಳಿದರೆ, ಇನ್ನೊಬ್ಬರು, ‘ಸುಶಾಂತ್ ಮುಖ ತುಂಬಾ ಮುದ್ದಾಗಿತ್ತು ಮತ್ತು ಮುಗ್ಧವಾಗಿತ್ತು ನೀವು ಹಾಗೆಯೇ ಇದ್ದಿರಿ…’ಎಂದಿದ್ದಾರೆ. ‘ಸುಶಾಂತ್ ಹಿಂತಿರುಗುತ್ತಾರೆ ಎಂದು ನನಗೆ ತಿಳಿದಿತ್ತು’ ಎಂದು ಕೆಲವರು ಬರೆದಿದ್ದಾರೆ. 2020ರ ಜೂನ್ 14ರಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡರು. ನಟನ ಸಾವಿನ ನಂತರ ಬಾಲಿವುಡ್‌ನಲ್ಲಿ ಶೋಕದ ವಾತಾವರಣ ನಿರ್ಮಾಣ ಆಯಿತು.. ಸುಶಾಂತ್ ಹತ್ಯೆ ಪ್ರಕರಣದಲ್ಲಿ ಹಲವು ಬಾಲಿವುಡ್ ಸೆಲೆಬ್ರಿಟಿಗಳ ವಿಚಾರಣೆ ನಡೆಸಲಾಗಿತ್ತು. ಅನೇಕ ಸೆಲೆಬ್ರಿಟಿಗಳನ್ನು ಪ್ರಶ್ನಿಸಲಾಯಿತು.
ಸುಶಾಂತ್ ನಿಧನರಾಗಿ 4 ವರ್ಷಗಳಾಗಿವೆ. ಆದರೆ ನಟ ಏಕೆ ಸತ್ತರು ಎನ್ನುವ ರಹಸ್ಯ ಇನ್ನೂ ಬಹಿರಂಗವಾಗಿಲ್ಲ. ಸುಶಾಂತ್ ಕುಟುಂಬವು ನ್ಯಾಯಕ್ಕಾಗಿ ನಿರಂತರವಾಗಿ ಒತ್ತಾಯಿಸುತ್ತಿದೆ. ಸುಶಾಂತ್ ಅವರ ಸಹೋದರಿ ಶ್ವೇತಾ ಸಿಂಗ್ ಯಾವಾಗಲೂ ಸುಶಾಂತ್ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ