2024ರ ಜನಪ್ರಿಯತೆಯಲ್ಲಿ ಶಾರುಖ್, ದೀಪಿಕಾ, ಪ್ರಭಾಸ್​ ಮೀರಿಸಿದ ನಟಿ ತೃಪ್ತಿ ದಿಮ್ರಿ; ಸಿಕ್ತು ನಂ.1 ಪಟ್ಟ

‘ಅನಿಮಲ್’ ಸಿನಿಮಾ ತೆರೆಕಂಡ ಬಳಿಕ ಫೇಮಸ್​ ಆದ ತೃಪ್ತಿ ದಿಮ್ರಿ ಅವರು ಈಗ ನಂಬರ್​ ಒನ್ ಸ್ಥಾನಕ್ಕೆ ಏರಿದ್ದಾರೆ. 2024ರಲ್ಲಿ ಅವರಿಗೆ ಈ ಪರಿ ಜನಪ್ರಿಯತೆ ಸಿಕ್ಕಿದೆ. ಶಾರುಖ್​ ಖಾನ್​, ಆಲಿಯಾ ಭಟ್, ದೀಪಿಕಾ ಪಡುಕೋಣೆ, ಪ್ರಭಾಸ್​ ಮುಂತಾದ ಸ್ಟಾರ್​ ಕಲಾವಿದರನ್ನೂ ಮೀರಿಸಿ ತೃಪ್ತಿ ದಿಮ್ರಿ ಅವರು ಜನಪ್ರಿಯರಾಗಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

2024ರ ಜನಪ್ರಿಯತೆಯಲ್ಲಿ ಶಾರುಖ್, ದೀಪಿಕಾ, ಪ್ರಭಾಸ್​ ಮೀರಿಸಿದ ನಟಿ ತೃಪ್ತಿ ದಿಮ್ರಿ; ಸಿಕ್ತು ನಂ.1 ಪಟ್ಟ
ತೃಪ್ತಿ ದಿಮ್ರಿ
Follow us
ಮದನ್​ ಕುಮಾರ್​
|

Updated on:Dec 05, 2024 | 7:18 PM

ಬಾಲಿವುಡ್ ನಟಿ ತೃಪ್ತಿ ದಿಮ್ರಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದಕ್ಕಾಗಿ ಅವರು ‘ಅನಿಮಲ್’ ಸಿನಿಮಾಗೆ ಧನ್ಯವಾದ ಹೇಳಲೇಬೇಕು. ಆ ಸಿನಿಮಾದಲ್ಲಿ ಅವರು ಬೋಲ್ಡ್ ಪಾತ್ರ ಮಾಡಿ ಸೈ ಎನಿಸಿಕೊಂಡರು. ಆ ಬಳಿಕ ಅವರಿಗೆ ಸಿಗುವ ಅವಕಾಶಗಳು ಕೂಡ ಜಾಸ್ತಿ ಆದವು. ತೃಪ್ತಿ ದಿಮ್ರಿ ಹವಾ ಎಷ್ಟರಮಟ್ಟಿಗೆ ಇದೆ ಎಂದರೆ, ಭಾರತದ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅವರು ನಂಬರ್​ ಒನ್ ಸ್ಥಾನ ಪಡೆದಿದ್ದಾರೆ. ಬಾಲಿವುಡ್​ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಅನೇಕ ಘಟಾನುಘಟಿ ಸೆಲೆಬ್ರಿಟಿಗಳನ್ನು ಕೂಡ ತೃಪ್ತಿ ಹಿಂದಿಕ್ಕಿದ್ದಾರೆ.

2024ರ ವರ್ಷ ಮುಗಿಯುತ್ತಾ ಬಂದಿದೆ. ಈ ವರ್ಷ ಯಾವ ಸೆಲೆಬ್ರಿಟಿಗಳಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿದೆ ಎಂಬ ಪಟ್ಟಿಯನ್ನು ಐಎಂಡಿಬಿ ಬಿಡುಗಡೆ ಮಾಡಿದೆ. ಐಎಂಡಿಬಿ ವೆಬ್​ಸೈಟ್​ಗೆ ವಿಶ್ವಾದ್ಯಂತ ಮನ್ನಣೆ ಇದೆ. ಸಿನಿಮಾ, ಸೀರಿಯಲ್, ವೆಬ್ ಸಿರೀಸ್, ಡಾಕ್ಯುಮೆಂಟರಿ ಹಾಗೂ ಸೆಲೆಬ್ರಿಟಿಗಳ ಬಗ್ಗೆ ಇದರಲ್ಲಿ ಮಾಹಿತಿ ಸಿಗುತ್ತದೆ. ಈ ವೆಬ್​ಸೈಟ್​ಗೆ ಭೇಟಿ ನೀಡಿದ ಓದುಗರ ಸಂಖ್ಯೆಯ ಆಧಾರದ ಮೇಲೆ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಬಾಲಿವುಡ್​ನಲ್ಲಿ ದೀಪಿಕಾ ಪಡುಕೋಣೆ, ಶಾರುಖ್ ಖಾನ್, ಆಲಿಯಾ ಭಟ್​, ಐಶ್ವರ್ಯಾ ರೈ, ಸಲ್ಮಾನ್ ಖಾನ್, ಆಮಿರ್​ ಖಾನ್ ಮುಂತಾದವರು ಘಟಾನುಘಟಿಗಳಾಗಿ ಗುರುತಿಸಿಕೊಂಡಿದ್ದಾರೆ. ಅವರೆಲ್ಲರನ್ನೂ ಹಿಂದಿಕ್ಕಿ ತೃಪ್ತಿ ದಿಮ್ರಿ ಅವರು ಟಾಪ್​ 10 ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಮನ್ನಣೆ ಸಿಕ್ಕಿದ್ದಕ್ಕೆ ಅವರು ಸೋಶಿಯಲ್ ಮೀಡಿಯಾ ಮೂಲಕ ಐಎಂಡಿಬಿಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ತೃಪ್ತಿ ದಿಮ್ರಿಗೆ ಖುಲಾಯಿಸಿದ ಅದೃಷ್ಟ, ಸ್ಟಾರ್ ನಟ, ನಿರ್ದೇಶಕನ ಸಿನಿಮಾದಲ್ಲಿ ಅವಕಾಶ

ಐಎಂಡಿಬಿ ಪ್ರಕಟಿಸಿದ 2024ರ ಅತಿ ಹೆಚ್ಚು ಜನಪ್ರಿಯ ಸೆಲೆಬ್ರಿಟಿಗಳ ಟಾಪ್​ 10 ಪಟ್ಟಿ:

  1. ತೃಪ್ತಿ ದಿಮ್ರಿ
  2. ದೀಪಿಕಾ ಪಡುಕೋಣೆ.
  3. ಇಶಾನ್ ಕಟ್ಟರ್​.
  4. ಶಾರುಖ್ ಖಾನ್​.
  5. ಶೋಭಿತಾ ದುಲಿಪಾಲ.
  6. ಶಾರ್ವರಿ ವಾಘ್.
  7. ಐಶ್ವರ್ಯಾ ರೈ ಬಚ್ಚನ್.
  8. ಸಮಂತಾ ರುತ್ ಪ್ರಭು.
  9. ಆಲಿಯಾ ಭಟ್.
  10. ಪ್ರಭಾಸ್​

ಟಾಪ್​ 10 ಪಟ್ಟಿಯಲ್ಲಿ ಕನ್ನಡ ಚಿತ್ರರಂಗದ ಯಾವುದೇ ಸೆಲೆಬ್ರಿಟಿಗಳು ಕೂಡ ಸ್ಥಾನ ಪಡೆದಿಲ್ಲ ಎಂಬುದು ಅಚ್ಚರಿಯ ಸಂಗತಿ. ಅಷ್ಟೇ ಅಲ್ಲದೇ, ನಟಿ ರಶ್ಮಿಕಾ ಮಂದಣ್ಣ ಅವರ ಹೆಸರು ಕೂಡ ಪಟ್ಟಿಯಲ್ಲಿ ಇಲ್ಲ. ತೃಪ್ತಿ ದಿಮ್ರಿ ಅವರು ಈ ವರ್ಷ ‘ಬ್ಯಾಡ್ ನ್ಯೂಸ್’, ‘ವಿಕ್ಕಿ ವಿದ್ಯಾ ಕ ವೋ ವಾಲ ವಿಡಿಯೋ’, ‘ಭೂಲ್​ ಭುಲಯ್ಯ 3’ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:36 pm, Thu, 5 December 24