‘14 ಬಾರಿ ಗರ್ಭಿಣಿಯಾಗಲು ವಿಫಲನಾದೆ’: ನಟಿಯ ಅಳಲು
Kashmira Shah: ತಾಯಿಯಾಗುವ ಕಾಶ್ಮೀರಾ ಅವರ ಪಯಣ ಸುಲಭವಾಗಿರಲಿಲ್ಲ. ಈ ಬಗ್ಗೆ ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅವರು ಹಲವು ಬಾರಿ ಪ್ರೆಗ್ನೆಂಟ್ ಆಗುವ ಪ್ರಯತ್ನ ಮಾಡಿದ್ದರೂ ಅದು ಸಾಧ್ಯ ಆಗಿರಲಿಲ್ಲ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
ಗೋವಿಂದ ಅವರ ಸಂಬಂಧಿ ಹಾಗೂ ಹಾಸ್ಯನಟ ಕೃಷ್ಣ ಶಾ ಹಾಗೂ ನಟಿ ಕಾಶ್ಮೀರಾ ಶಾ ಅವರು 2013ರಲ್ಲಿ ವಿವಾಹ ಆದರು. 2017ರಲ್ಲಿ ಬಾಡಿಗೆ ತಾಯ್ತನದ ಮೂಲಕ ಕಾಶ್ಮೀರಾ ಅವಳಿ ಮಕ್ಕಳನ್ನು ಪಡೆದರು. ಆದರೆ ತಾಯಿಯಾಗುವ ಕಾಶ್ಮೀರಾ ಅವರ ಪಯಣ ಸುಲಭವಾಗಿರಲಿಲ್ಲ. ಈ ಬಗ್ಗೆ ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅವರು ಹಲವು ಬಾರಿ ಪ್ರೆಗ್ನೆಂಟ್ ಆಗುವ ಪ್ರಯತ್ನ ಮಾಡಿದ್ದರೂ ಅದು ಸಾಧ್ಯ ಆಗಿರಲಿಲ್ಲ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
‘ಇದು ನನಗೆ ತುಂಬಾ ಕಷ್ಟಕರವಾಗಿತ್ತು. ಏಕೆಂದರೆ ನಾನು ಸ್ವಾಭಾವಿಕವಾಗಿ ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ. ನನ್ನ ಆರೋಗ್ಯವು ಉತ್ತಮವಾಗಿಲ್ಲ. IVF ಪ್ರಕ್ರಿಯೆಯಲ್ಲಿ ನನ್ನ ದೇಹವು ಬಹಳಷ್ಟು ಪರಿಣಾಮ ಬೀರಿತು”, ಅವರು ಹೇಳಿಕೊಂಡಿದ್ದಾರೆ.
‘ನಾನು 14 ಬಾರಿ ಗರ್ಭಿಣಿಯಾಗಲು ವಿಫಲನಾಗಿದ್ದೆ. IVF ಚುಚ್ಚುಮದ್ದಿನಿಂದ ನಾನು ನಿರಂತರವಾಗಿ ಮೂಡ್ ಸ್ವಿಂಗ್ಸ್ ಹೊಂದಿದ್ದೆ. ನಾನು ತುಂಬಾ ತೂಕವನ್ನು ಹೆಚ್ಚಿಸಿದೆ. ನಾನು ತುಂಬಾ ಬಳಲುತ್ತಿದ್ದೆ. ನಾನು ಗಳಿಸಿದ ತೂಕವನ್ನು ಕಳೆದುಕೊಳ್ಳುವುದು ತುಂಬಾ ಸವಾಲಿನ ಸಂಗತಿಯಾಗಿದೆ ಏಕೆಂದರೆ ಇದು ನೈಸರ್ಗಿಕವಾಗಿಲ್ಲ’ ಎಂದು ಕಾಶ್ಮೀರಾ ಹೇಳಿದ್ದಾರೆ.
ಇದನ್ನೂ ಓದಿ:ತಮನ್ನಾ ಭಾಟಿಯಾರಿಂದ ಹಿಟ್ ಆಯ್ತು ‘ಸ್ತ್ರೀ 2’ ಸಿನಿಮಾ? ಪ್ರತಿಕ್ರಿಯಿಸಿದ ನಟಿ
‘ನನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ವೈದ್ಯರು ಹೇಳಿದರು. ನನ್ನ ಕಿರಿಕಿರಿಯು ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ದೇಹ ಶೇಪ್ ಕಳೆದುಕೊಳ್ಳುತ್ತಿತ್ತು. ಹಾಗಾಗಿ ನಾನು ಬಾಡಿಗೆ ತಾಯ್ತನವನ್ನು ಆರಿಸಿಕೊಂಡೆ. ಆದರೆ ನಾನು ನನ್ನ ದೇಹವನ್ನು ಕಳೆದುಕೊಳ್ಳುತ್ತಿದ್ದೆ. ನನ್ನ ಆರೋಗ್ಯ ಕೂಡ’ ಎಂದಿದ್ದಾರೆ ಅವರು.
ಅನೇಕ ಪ್ರಯತ್ನಗಳ ನಂತರ, ಕಾಶ್ಮೀರಾ ಮತ್ತು ಕೃಷ್ಣ ಅಭಿಷೇಕ್ ಬಾಡಿಗೆ ತಾಯ್ತನವನ್ನು ಆರಿಸಿಕೊಂಡರು. ಬಾಡಿಗೆ ತಾಯ್ತನದ ಮೂಲಕ ಅವರಿಗೆ ಅವಳಿ ಮಕ್ಕಳಿದ್ದರು. ಅವರು ತಮ್ಮ ಪುತ್ರರಿಗೆ ರಯಾನ್ ಮತ್ತು ಕ್ರಿಶಾಂಗ್ ಎಂದು ಹೆಸರು ಇಟ್ಟಿದ್ದಾರೆ.
ಕಾಶ್ಮೀರಾ ಅವರು ಹಿಂದಿ ಹಾಗೂ ಮರಾಠಿ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಅವರು 2020ರಲ್ಲಿ ‘ಹಿಂದಿ ಬಿಗ್ ಬಾಸ್ ಸೀಸನ್ 14’ರಲ್ಲಿ ಸ್ಪರ್ಧಿಸಿದ್ದರು. ಕೆಲವೇ ವಾರಗಳಲ್ಲಿ ಅವರು ದೊಡ್ಮನೆಯಿಂದ ಹೊರಕ್ಕೆ ಬಂದರು. ಹದಿನೈದು ಹಾಗೂ ಹದಿರಾನೇ ಸೀಸನ್ನಲ್ಲಿ ಅವರು ಅತಿಥಿಯಾಗಿ ತೆರಳಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ