ಸುಶಾಂತ್ ಸಿಂಗ್ ಕೇಸ್; ಪ್ರಮುಖ ಆರೋಪಿಯನ್ನು ಕೈಬಿಟ್ಟ ಕೋರ್ಟ್
ಸುಶಾಂತ್ ಸಿಂಗ್ ರಜಪೂತ್ ಅವರು 2022ರ ಜೂನ್ ತಿಂಗಳಲ್ಲಿ ನಿಧನ ಹೊಂದಿದರು. ಮುಂಬೈ ಫ್ಲ್ಯಾಟ್ನಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡರು. ಇದು ಕೊಲೆ ಎಂದು ಅನೇಕರು ಆರೋಪಿಸಿದರು. ಇದನ್ನು ಹೈ ಪ್ರಾಫೈಲ್ ಕೇಸ್ ಎಂದು ಪರಿಗಣಿಸಲಾಯಿತು.
ನಟ ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟು ಕೆಲವು ವರ್ಷಗಳು ಕಳೆದಿವೆ. ಅವರು ಇಲ್ಲ ಎಂಬ ನೋವು ಬಹುವಾಗಿ ಕಾಡುತ್ತಿದೆ. ಅವರ ಸಾವಿನ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ಮಧ್ಯೆ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಕಾರಣ ಆಗಿದೆ ಎನ್ನಲಾದ ಡ್ರಗ್ ಕೇಸ್ನ ಆರೋಪಿ ಆಗಿದ್ದ ಆಸ್ಟ್ರೇಲಿಯಾದ ವ್ಯಕ್ತಿಯನ್ನು ನಿರಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ. ಆತ ತಪ್ಪು ಮಾಡಿದ್ದಾನೆ ಎಂದು ಹೇಳಲು ಸರಿಯಾದ ರೀತಿಯ ದಾಖಲೆಗಳು ಇಲ್ಲದ ಕಾರಣ ಕೋರ್ಟ್ ಈ ಆದೇಶ ನೀಡಿದೆ.
ಸುಶಾಂತ್ ಸಿಂಗ್ ರಜಪೂತ್ ಅವರು 2022ರ ಜೂನ್ ತಿಂಗಳಲ್ಲಿ ನಿಧನ ಹೊಂದಿದರು. ಮುಂಬೈ ಫ್ಲ್ಯಾಟ್ನಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡರು. ಇದು ಕೊಲೆ ಎಂದು ಅನೇಕರು ಆರೋಪಿಸಿದರು. ಇದನ್ನು ಹೈ ಪ್ರಾಫೈಲ್ ಕೇಸ್ ಎಂದು ಪರಿಗಣಿಸಲಾಯಿತು. ಇದರ ಬೆನ್ನು ಹತ್ತಿ ಹೋದ ಪೊಲೀಸರಿಗೆ ಡ್ರಗ್ ವಾಸನೆಯೂ ಬಂದಿತ್ತು. ಮಾದಕ ವಸ್ತು ನಿಯಂತ್ರಣ ಮಂಡಳಿ ಈ ಪ್ರಕರಣದ ತನಿಖೆ ಆರಂಭಿಸಿದೆ. ಈ ಪ್ರಕರಣದಲ್ಲಿ ಆಸ್ಟ್ರೇಲಿಯಾದ ಬ್ಯಾರಟೆಲ್ಸ್ ಎಂಬಾತ ಅರೆಸ್ಟ್ ಆಗಿದ್ದ.
2020ರ ನವೆಂಬರ್ನಲ್ಲಿ ಮಾದಕ ವಸ್ತು ನಿಯಂತ್ರಣ ಮಂಡಳಿ ಬ್ಯಾರಟೆಲ್ಸ್ ಎಂಬಾತನ ಅರೆಸ್ಟ್ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಜಡ್ಜ್ ಮಹೇಶ್ ಜಾಧವನ್ ಅವರು ದಾಖಲೆಯ ಕೊರತೆ ಇದೆ ಎಂದು ಅಭಿಪ್ರಾಯಪಟ್ಟರು.
‘ಬ್ಯಾರಟೆಲ್ಸ್ ಅವರು ಅಪರಾಧಿ ಎಂಬುದನ್ನು ಸಾಬೀತು ಮಾಡಲು ಯಾವುದೇ ದಾಖಲೆಗಳು ಇಲ್ಲ’ ಎಂದು ಮಹೇಶ್ ಜಾಧವ್ ಹೇಳಿದ್ದಾರೆ. ಹೀಗಾಗಿ, ಅವರನ್ನು ಬಿಡುಗಡೆ ಮಾಡಲಾಗುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ಮೇಲೆ ಈ ಆದೇಶ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ‘ಎರಡನೇ ಅಧ್ಯಾಯ’ ಆರಂಭಿಸಿದ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಗರ್ಲ್ಫ್ರೆಂಡ್
ಸಿಬಿಐ ಸದ್ಯ ಸುಶಾಂತ್ ಸಿಂಗ್ ರಜಪೂತ್ ಕೇಸ್ನ ವಿಚಾರಣೆ ಮಾಡುತ್ತಿದೆ. ಇದು ಕೊಲೆ ಎನ್ನುವ ಗುಮಾನಿ ಇದೆ. ಸುಶಾಂತ್ ಅವರು ಜೂನ್ 13ರಂದು ನಿಧನ ಹೊಂದಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಅವರನ್ನು ಕೊಲೆ ಮಾಡಲಾಗಿದೆಯೋ ಎನ್ನುವ ಪ್ರಶ್ನೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:48 am, Fri, 16 August 24