AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರಪ್ರಶಸ್ತಿ ಘೋಷಣೆಗೆ ಕ್ಷಣಗಣನೆ, ಕನ್ನಡ ಸಿನಿಮಾಗಳ ಮೇಲೆ ಎಲ್ಲರ ಕಣ್ಣು, ಸ್ಪರ್ಧೆಯೂ ಜೋರಿದೆ

70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಇಂದು ಘೋಷಣೆ ಆಗಲಿದ್ದು, ಕನ್ನಡದ ಕೆಲವು ಒಳ್ಳೆಯ ಸಿನಿಮಾಗಳು ಸ್ಪರ್ಧೆಯಲ್ಲಿವೆ ಹಾಗೂ ಗೆಲ್ಲುವ ಭರವಸೆಯನ್ನು ಮೂಡಿಸಿವೆ. ಇಲ್ಲಿವೆ ಸಿನಿಮಾಗಳ ಪಟ್ಟಿ.

ರಾಷ್ಟ್ರಪ್ರಶಸ್ತಿ ಘೋಷಣೆಗೆ ಕ್ಷಣಗಣನೆ, ಕನ್ನಡ ಸಿನಿಮಾಗಳ ಮೇಲೆ ಎಲ್ಲರ ಕಣ್ಣು, ಸ್ಪರ್ಧೆಯೂ ಜೋರಿದೆ
ಮಂಜುನಾಥ ಸಿ.
|

Updated on: Aug 16, 2024 | 11:21 AM

Share

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಕೊಡಬಾಡುವ ಭಾರತ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಎನಿಸಿಕೊಂಡಿರುವ ರಾಷ್ಟ್ರ ಪ್ರಶಸ್ತಿ ಇಂದು (ಆಗಸ್ಟ್ 16) ರಂದು ಘೋಷಣೆ ಆಗಲಿದೆ. ಮಧ್ಯಾಹ್ನ ಮೂರು ಗಂಟೆಗೆ ಪ್ರಶಸ್ತಿ ಪಟ್ಟಿ ಘೋಷಣೆ ಆಗಲಿದ್ದು, ಕನ್ನಡ ಸಿನಿಮಾಗಳ ಮೇಲೆ ಹಲವರ ದೃಷ್ಟಿ ನೆಟ್ಟಿದೆ. ಈ ಬಾರಿ ಸ್ಪರ್ಧೆಯಲ್ಲಿ ಕನ್ನಡದ ಕೆಲವು ಗಟ್ಟಿ ಸಿನಿಮಾಗಳು ಇವೆ. ಆದರೆ ಕನ್ನಡ ಸಿನಿಮಾಗಳಿಗೆ ಸ್ಪರ್ಧೆಯೂ ಸಹ ಗಟ್ಟಿಯಾಗಿಯೇ ಇದೆ. ವಿಶೇಷವಾಗಿ ಈ ಬಾರಿ ಅತ್ಯುತ್ತಮ ನಟ ಯಾರಾಗಬಹುದು ಎಂಬ ಕುತೂಹಲ ದೊಡ್ಡ ಮಟ್ಟದಲ್ಲಿ ಏರ್ಪಟ್ಟಿದೆ.

ಕನ್ನಡದ ‘ಕಾಂತಾರ’ ಸಿನಿಮಾ ಈ ಬಾರಿ ಪ್ರಶಸ್ತಿ ಪಟ್ಟಿಯಲ್ಲಿದೆ. ಅತ್ಯುತ್ತಮ ಸಿನಿಮಾ, ಸಂಗೀತ, ಎಡಿಟಿಂಗ್, ಪ್ರೊಡಕ್ಷನ್ ಡಿಸೈನ್, ಅತ್ಯುತ್ತಮ ನಟನೆ, ಅತ್ಯುತ್ತಮ ಸಿನಿಮಾ ಮತ್ತು ನಿರ್ದೇಶನ, ವಸ್ತ್ರ ವಿನ್ಯಾಸ ಇನ್ನೂ ಕೆಲವು ವಿಭಾಗಗಳಲ್ಲಿ ‘ಕಾಂತಾರ’ ಸಿನಿಮಾ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇದೆ. ‘ಕೆಜಿಎಫ್ 2’ ಸಿನಿಮಾ ಸಹ ಪ್ರಶಸ್ತಿ ಪಟ್ಟಿಯಲ್ಲಿದ್ದು ಅತ್ಯುತ್ತಮ ಸಾಹಸ, ಅತ್ಯುತ್ತಮ ನಟನೆ, ಪ್ರೊಡಕ್ಷನ್ ಡಿಸೈನ್, ವಿಎಫ್​ಎಕ್ಸ್, ಹಿನ್ನೆಲೆ ಸಂಗೀತ ಇನ್ನೂ ಕೆಲವು ವಿಭಾಗಗಳಲ್ಲಿ ಸ್ಪರ್ಧೆ ಒಡ್ಡಲಿದೆ. ‘ಕಾಂತಾರ’, ‘ಕೆಜಿಎಫ್ 2’ ಮಾತ್ರವೇ ಅಲ್ಲದೆ ಜನಪ್ರಿಯ ಸಿನಿಮಾಗಳ ಸಾಲಿಗೆ ಸೇರದ ಆದರೆ ತಮ್ಮ ಗುಣಮಟ್ಟ, ವಸ್ತುವಿನಿಂದ ಗಮನ ಸೆಳೆದಿರುವ ಪೃಥ್ವಿ ಕೋಣನೂರು ಅವರ ಸಿನಿಮಾ ‘ಹದಿನೇಳೆಂಟು’, ‘ಕೋಳಿ ಎಸ್ರು’, ‘ಪೆದ್ರೊ’, 19.20.21, ‘ಫೋಟೊ’, ‘ವಿರಾಟಪುರದ ವಿರಾಗಿ’, ‘ನಾನು ಕುಸುಮ’ ಇನ್ನೂ ಕೆಲವು ಸಿನಿಮಾಗಳು ಪ್ರಶಸ್ತಿ ಸೆಣಸಾಟದಲ್ಲಿವೆ.

ಇದನ್ನೂ ಓದಿ:SIIMA Awards 2023: ಪ್ರಶಸ್ತಿ ಗೆದ್ದ ತೆಲುಗು ಸಿನಿಮಾಗಳಿವು:RRRಗೆ ಸಿಗಲಿಲ್ಲ ಅತ್ಯುತ್ತಮ ಸಿನಿಮಾ ಪ್ರಶಸ್ತಿ

ಇನ್ನು ಈ ಬಾರಿ ರಾಷ್ಟ್ರ ಪ್ರಶಸ್ತಿಗೆ ಸ್ಪರ್ಧೆಯೂ ಸಹ ಜೋರಾಗಿಯೇ ಇದೆ. ಮಲಯಾಳಂನ ಮಮ್ಮುಟಿ ನಟನೆಯ ಕೆಲ ಸಿನಿಮಾಗಳು ಸ್ಪರ್ಧೆಯಲ್ಲಿವೆ. ಪೃಥ್ವಿರಾಜ್ ಸುಕುಮಾರ್ ನಟನೆಯ ‘ಜನ ಗಣ ಮನ’, ಮಲಯಾಳಂ ನ ಇತರೆ ಕೆಲವು ಸಿನಿಮಾಗಳಾದ, ‘ರೊರಸಾಚ್’, ‘ಮುಕುಂದನ್ ಉನ್ನಿ ಅಸೋಸಿಯೇಟ್ಸ್’, ‘ಜಯ ಜಯ ಜಯ ಹೇ’, ‘ಪುಜು’, ‘ಅರಿಪ್ಪು’, ‘ಸಲ್ಯೂಟ್’ ಇನ್ನೂ ಕೆಲವು ಸಿನಿಮಾಗಳಿವೆ. ಇನ್ನು ತಮಿಳಿನಲ್ಲಿ ಸಹ ಕೆಲವು ಒಳ್ಳೆಯ ಸಿನಿಮಾಗಳಿವೆ, ‘ಗಾರ್ಗಿ’, ‘ವೆಂದು ತಣಿದತು ಕಾಡು’ ಇನ್ನು ಕೆಲವು ಉತ್ತಮ ಸಿನಿಮಾಗಳು ಸ್ಪರ್ಧೆಯಲ್ಲಿವೆ. ‘ಆರ್​ಆರ್​ಆರ್’ ಸಿನಿಮಾ 2022 ರಲ್ಲಿ ಬಿಡುಗಡೆ ಆಯ್ತದರೂ ಅದು 2021 ರಲ್ಲಿಯೇ ಸೆನ್ಸಾರ್ ಆಗಿತ್ತು. ಸೂಪರ್ ಹಿಟ್ ಸಿನಿಮಾ ‘ಸೀತಾ ರಾಮಂ’ ಸಿನಿಮಾ 2022 ರಲ್ಲಿ ಬಿಡುಗಡೆ ಆಗಿದ್ದು ಸ್ಪರ್ಧೆಯಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ