ಕೆಲವೇ ದಿನಗಳ ಹಿಂದೆ ನಟಿ ಸುಶ್ಮಿತಾ ಸೇನ್ (Sushmita Sen) ಅವರಿಗೆ ಹೃದಯಾಘಾತ ಆಗಿತ್ತು. ಆ ವಿಚಾರವನ್ನು ಅವರು ಕೊಂಚ ತಡವಾಗಿ ಬಹಿರಂಗಪಡಿಸಿದರು. ಅಚ್ಚರಿ ಏನೆಂದರೆ ಅವರ ಹೃದಯದಲ್ಲಿ ಶೇಕಡ 90ರಷ್ಟು ಬ್ಲಾಕೇಜ್ ಇತ್ತು. ಹಾಗಿದ್ದರೂ ಅವರು ಅಚ್ಚರಿಯ ರೀತಿಯಲ್ಲಿ ಬದುಕುಳಿದರು. ಸುಶ್ಮಿತಾ ಸೇನ್ ಅವರದ್ದು ಶಿಸ್ತಿನ ಜೀವನ ಶೈಲಿ. ಎಂದಿಗೂ ಅವರು ವರ್ಕೌಟ್ ಮಾಡೋದು ತಪ್ಪಿಸೋದಿಲ್ಲ. ಹಾಗಿದ್ದರೂ ಕೂಡ ಅವರಿಗೆ ಹಾರ್ಟ್ ಅಟ್ಯಾಕ್ (Heart Attack) ಆಯಿತು. ಪುನೀತ್ ರಾಜ್ಕುಮಾರ್, ಸಿದ್ದಾರ್ಥ್ ಶುಕ್ತಾ ಸೇರಿದಂತೆ ಅನೇಕರು ಫಿಟ್ ಆಗಿದ್ದರೂ ಕೂಡ ಹೃದಯಾಘಾತದಿಂದ ನಿಧನರಾದರು. ‘ಜಿಮ್ಗೆ (Gym) ಹೋದರೂ ಹಾರ್ಟ್ ಅಟ್ಯಾಕ್ ತಪ್ಪಿದ್ದಲ್ಲ’ ಎಂದು ಗೊಣಗುವವರಿಗೆ ಸುಶ್ಮಿತಾ ಸೇನ್ ಕೆಲವು ಕಿವಿಮಾತು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..
ಫಿಟ್ ಆಗಿರುವ ಸೆಲೆಬ್ರಿಟಿಗಳು ಹೃದಯಾಘಾತಕ್ಕೆ ಒಳಗಾದಾಗ ಇಂತಹ ಮಾತುಗಳು ಕೇಳಿಬರುತ್ತವೆ. ‘ಎಷ್ಟೇ ಫಿಟ್ನೆಸ್ ಕಾಪಾಡಿಕೊಂಡರೂ ಹೃದಯಾಘಾತ ತಪ್ಪಿಸೋಕೆ ಆಗಲ್ಲ. ಹಾಗಿದ್ದ ಮೇಲೆ ಯಾಕೆ ವರ್ಕೌಟ್ ಮಾಡಬೇಕು? ಸುಮ್ಮನೇ ಇರೋದೇ ಒಳ್ಳೆಯದು’ ಅಂತ ಕೆಲವರು ಮಾತನಾಡಿಕೊಳ್ಳುತ್ತಾರೆ. ಆದರೆ ಅದು ಸರಿಯಲ್ಲ ಎಂದು ಸುಶ್ಮಿಕಾ ಸೇನ್ ಹೇಳಿದ್ದಾರೆ.
ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿ; ಅಲ್ಲೇ ಇದ್ದ ಸೋನು ಸೂದ್ ಮಾಡಿದ್ದೇನು?
‘ನಿಮ್ಮಲ್ಲಿ ಬಹುತೇಕ ಜನರು ಜಿಮ್ಗೆ ಹೋಗೋದನ್ನು ನಿಲ್ಲಿಸುತ್ತೀರಿ ಅಂತ ನನಗೆ ಗೊತ್ತು. ಜಿಮ್ಗೆ ಹೋದರೂ ಆಕೆಗೆ ಏನೂ ಉಪಯೋಗ ಆಗಲಿಲ್ಲ ನೋಡು ಅಂತ ಮಾತಾಡಿಕೊಳ್ತೀರಿ. ಆದರೆ ಅದು ಸರಿಯಲ್ಲ. ವರ್ಕೌಟ್ ಮಾಡುವುದು ನನಗೆ ಉಪಯೋಗಕ್ಕೆ ಬಂದಿದೆ. ನಾನು ಬದುಕುಳಿದಿದ್ದು ಭೀಕರ ಹೃದಯಾಘಾತದಿಂದ. ನನ್ನ ಹೃದಯದಲ್ಲಿ ಶೇಕಡ 95ರಷ್ಟು ಬ್ಲಾಕೇಜ್ ಇತ್ತು. ನನ್ನ ಜೀವನದಲ್ಲಿ ಕ್ರಿಯಾಶೀಲತೆ ಇದ್ದಿದ್ದರಿಂದಲೇ ನಾನು ಬದುಕಿದೆ’ ಎಂದಿದ್ದಾರೆ ಸುಶ್ಮಿತಾ ಸೇನ್.
ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದಿದ್ದ ಸುಶ್ಮಿತಾ ಸೇನ್ ಅವರು ಈ ಎಲ್ಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸರ್ಜರಿ ಬಳಿಕ ಅವರು ಸಾಕಷ್ಟು ಚೇತರಿಸಿಕೊಂಡಿದ್ದಾರೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ತಮಗೆ ಸಹಾಯ ಮಾಡಿದ ಎಲ್ಲರಿಗೂ ಸುಶ್ಮಿತಾ ಸೇನ್ ಧನ್ಯವಾದ ಅರ್ಪಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.