ಸ್ವರಾ ಭಾಸ್ಕರ್​ಗೆ ಸಂಸದೆ ಮೇಲೆ ಕ್ರಶ್; ಲೈಂಗಿಕ ಆಸಕ್ತಿ ರಿವೀಲ್ ಮಾಡಿ ಟ್ರೋಲ್ ಆದ ನಟಿ

ಸ್ವರಾ ಭಾಸ್ಕರ್ ಅವರು ತಮ್ಮ ದ್ವಿಲಿಂಗಿತ್ವದ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದಾರೆ. ಡಿಂಪಲ್ ಯಾದವ್ ಅವರ ಮೇಲೆ ತಮಗೆ ಕ್ರಶ್ ಇದೆ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸ್ವರಾ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಆದರೆ, ಅವರು ಈ ವಿವಾದಗಳಿಗೆ ತಲೆಕೆಡಿಸಿಕೊಳ್ಳದೆ ಮುಂದುವರಿಯುತ್ತಿದ್ದಾರೆ.

ಸ್ವರಾ ಭಾಸ್ಕರ್​ಗೆ ಸಂಸದೆ ಮೇಲೆ ಕ್ರಶ್; ಲೈಂಗಿಕ ಆಸಕ್ತಿ ರಿವೀಲ್ ಮಾಡಿ ಟ್ರೋಲ್ ಆದ ನಟಿ
ಸ್ವರಾ-ಡಿಂಪಲ್

Updated on: Aug 21, 2025 | 7:34 AM

ನಟಿ ಸ್ವರಾ ಭಾಸ್ಕರ್ (Swara Bhasker) ಅವರು ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಅವರು ಸಿನಿಮಾ ಮಾಡಿದ್ದು ಕಡಿಮೆಯೇ ಆದರೂ, ವಿವಾಗಳ ಕಾರಣಕ್ಕೆ, ಹೇಳಿಕೆಯ ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಈಗ ಅವರು ತಮ್ಮ ಲೈಂಗಿಕ ಆಸಕ್ತಿ ಬಗ್ಗೆ ಹೇಳಿದ್ದಾರೆ. ಈ ವೇಳೆ ಅವರು ನೀಡಿರುವ ಹೇಳಿಕೆ ಚರ್ಚೆಗೆ ಕಾರಣ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಆದರೆ, ಇದಕ್ಕೆಲ್ಲ ಅವರು ತಲೆಕೆಡಿಸಿಕೊಳ್ಳುವವರು ಅಲ್ಲವೇ ಅಲ್ಲ.

‘ನಾವೆಲ್ಲರೂ ದ್ವಿಲಿಂಗಿಗಳು (ಬೈಸೆಕ್ಶುವಲ್). ಜನರನ್ನು ಅವರ ಪಾಡಿಗೆ ಅವರನ್ನು ಬಿಟ್ಟರೆ ಅವರು ದ್ವಿಲಿಂಗಿ ಅನ್ನೋದು ಗೊತ್ತಾಗುತ್ತದೆ. ಆದರೆ, ಗಂಡು ಹೆಣ್ಣಿಗೆ, ಹೆಣ್ಣು ಗಂಡಿಗೆ ಆಕರ್ಷಿರತರಾಗುವುದು ನಮ್ಮ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳಿಂದ ಬಂದಿದೆ’ ಎಂದು ಅವರು ಹೇಳಿದ್ದಾರೆ.

ಸ್ವರಾ ಭಾಸ್ಕರ್​ಗೆ ಯಾರ ಮೇಲಾದರೂ ಕ್ರಶ್ ಇದೆಯೇ ಎಂದು ಕೇಳಲಾಯಿತು. ಈ ವೇಳೆ ಅವರು ನಟರ ಹೆಸರು ಹೇಳುವ ಬದಲು ಮಹಿಳೆಯರ ಹೆಸರನ್ನೇ ತೆಗೆದುಕೊಂಡಿದ್ದಾರೆ. ನನಗೆ ಡಿಂಪಲ್ ಯಾದವ್ ಮೇಲೆ ಕ್ರಶ್ ಇದೆ ಎಂದು ಹೇಳಿದ್ದಾರೆ. ಡಿಂಪಲ್ ಅವರು ಸಮಾಜವಾದಿ ಪಕ್ಷದ ಸಂಸದೆ. ಅಲ್ಲದೆ, ಅಖಿಲೇಶ್ ಯಾದವ್ ಪತ್ನಿ ಕೂಡ ಹೌದು.

ಇದನ್ನೂ ಓದಿ
ಒಂದೇ ವಾರಕ್ಕೆ ಸುಸ್ತಾದ ‘ಕೂಲಿ’; ಹೀನಾಯ ಕಲೆಕ್ಷನ್​​​ ಆರಂಭಿಸಿದ ಸಿನಿಮಾ
‘ಕ್ವಾಟ್ಲೆ ಕಿಚನ್’ ಶೋ​ನಿಂದ ದಿಢೀರ್​ ಹೊರ ನಡೆದ ಕೆಂಪಮ್ಮ; ಇಲ್ಲಿದೆ ವಿವರ
ಮಂಗಳೂರು ಬೆಡಗಿ ಪೂಜಾ ಹೆಗ್ಡೆ ಮುಟ್ಟಿದ್ದೆಲ್ಲವೂ ಕಬ್ಬಿಣ; ಕೈ ಕೊಟ್ಟ ಅದೃಷ್ಟ
ಸಲ್ಮಾನ್ ಖಾನ್ ಬಿಗ್ ಬಾಸ್ ಸಂಭಾವನೆಗೆ ಕತ್ತರಿ; ಕಿಚ್ಚನ ವಿಚಾರದಲ್ಲಿ ಏನು?

ಸ್ವರಾ ಭಾಸ್ಕರ್ ಅವರು ಸದ್ಯ ‘ಪತಿ ಪತ್ನಿ ಔರ್ ಪಂಗಾ ಜೋಡಿಯೋ ಕಾ ರಿಯಾಲಿಟಿ ಚೆಕ್’ ಹೆಸರಿನ ರಿಯಾಲಿಟಿ ಶೋಗೆ ಬಂದಿದ್ದಾರೆ. ಇದರಲ್ಲಿ ಅವರ ಪತಿ ಹಾಗೂ ರಾಜಕಾರಣಿ ಫಹಾದ್ ಅಹ್ಮದ್ ಕೂಡ  ಇದ್ದಾರೆ.

ಇದನ್ನೂ ಓದಿ: ಸ್ವರಾ ಭಾಸ್ಕರ್ ತೂಕ ಏರಿಕೆಗೆ ಕಾರಣವಾಗಿದ್ದೇನು? ಇದರಿಂದ ತಪ್ಪಿತಾ ಹಲವು ಸಿನಿಮಾ ಅವಕಾಶ?

ಸ್ವರಾ ಭಾಸ್ಕರ್ ಅವರು ಮುಸ್ಲಿಂ ವ್ಯಕ್ತಿಯನ್ನು ವಿವಾಹ ಆದರು. ಇದಕ್ಕೆ ಅವರು ಸಾಕಷ್ಟು ಟ್ರೋಲ್​ಗಳನ್ನು ಎದುರಿಸಬೇಕಾಯಿತು. ಆದರೆ, ಇದಕ್ಕೆ ಅವರು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. 2023ರಲ್ಲಿ ಸ್ವರಾ ಹಾಗೂ ಫಹಾದ್ ದಂಪತಿಗೆ ಮಗಳು ಜನಿಸಿದಳು. ಮಗುವಿಗೆ ರಾಬಿಯಾ ಎಂದು ಹೆಸರು ಇಡಲಾಗಿದೆ.  ಸ್ವರಾ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಯಾವ ಚಿತ್ರವೂ ಹೇಳಿಕೊಳ್ಳುವಂತಹ ಯಶಸ್ಸು ತಂದಿಲ್ಲ. ಅವರ ನಟನೆಯ ‘ರಾಂಜಾನಾ’ ಗಮನ ಸೆಳೆದ ಚಿತ್ರಗಳಲ್ಲಿ ಒಂದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.