ಸ್ವರಾ ಭಾಸ್ಕರ್ ತೂಕ ಏರಿಕೆಗೆ ಕಾರಣವಾಗಿದ್ದೇನು? ಇದರಿಂದ ತಪ್ಪಿತಾ ಹಲವು ಸಿನಿಮಾ ಅವಕಾಶ?
ಸ್ವರಾ ಭಾಸ್ಕರ್ ಅವರು ಗರ್ಭಧಾರಣೆಯ ನಂತರ ತೂಕ ಹೆಚ್ಚಿಸಿಕೊಂಡಿದ್ದಾರೆ ಎಂಬುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾಯ್ತನದ ನಂತರದ ದೇಹ ಬದಲಾವಣೆಗಳನ್ನು ಅವರು ಸ್ವೀಕರಿಸಿದ್ದಾರೆ ಮತ್ತು ದೇಹದ ಅಪಮಾನಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರು ತಮ್ಮ ವೃತ್ತಿಜೀವನ ಮತ್ತು ಕುಟುಂಬ ಜೀವನದ ನಡುವೆ ಸಮತೋಲನವನ್ನು ಕಂಡುಕೊಳ್ಳುತ್ತಿದ್ದಾರೆ.

ಹಿಂದಿ ನಟಿ ಸ್ವರಾ ಭಾಸ್ಕರ್ (Swara Bhaskar) ಅವರಿಗೆ ಇಂದು (ಏಪ್ರಿಲ್ 9 ) ಜನ್ಮದಿನ. ಅವರಿಗೆ ಶುಭಾಶಯಗಳು ಬರುತ್ತಾ ಇವೆ. ಇನ್ಸ್ಟಾಗ್ರಾಮ್ನಲ್ಲಿ 9 ಲಕ್ಷ ಹಿಂಬಾಲಕರನ್ನು ಹೊಂದಿರೋ ಸ್ವರಾ ಭಾಸ್ಕರ್ ಅವರು ಇತ್ತೀಚೆಗೆ ತೂಕ ಹೆಚ್ಚಿಸಿಕೊಂಡಿದ್ದಾರೆ. ಮೊದಲು ತೆಳ್ಳಗೆ ಇದ್ದ ಅವರು ಈಗ ಗುರುತೇ ಸಿಗದಷ್ಟು ದಪ್ಪ ಆಗಿದ್ದಾರೆ. ಸ್ವರಾ ಭಾಸ್ಕರ್ ಅವರು ಇಷ್ಟು ದಪ್ಪ ಆಗಲು ಕಾರಣ ಏನು? ಇದರಿಂದ ಸಿನಿಮಾ ಅವಕಾಶ ಕೈ ತಪ್ಪಿತೇ? ಈ ಪ್ರಶ್ನೆಗಳಿಗೆ ಅವರು ಈ ಮೊದಲು ಉತ್ತರ ನೀಡಿದ್ದರು.
ಸ್ವರಾ ಭಾಸ್ಕರ್ ಅವರು ರಾಜಕಾರಣಿ ಫಹಾದ್ ಅಹ್ಮದ್ ಅವರನ್ನು ವಿವಾಹ ಆದರು. 2023ರಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ರಬಿಯಾ ಎಂದು ನಾಮಕರಣ ಮಾಡಲಾಗಿದೆ. ಅವರು ಆ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ದೇಹದ ತೂಕ ಹೆಚ್ಚಿಸಿಕೊಂಡಿದ್ದು ಕಂಡು ಬಂದಿತ್ತು. ಇದರಿಂದ ಅವಕಾಶ ತಪ್ಪಿದೆ ಎಂದು ಹೇಳಲಾಗಿತ್ತು. ಇದಕ್ಕೆ ಸ್ವರಾ ಉತ್ತರಿಸಿದ್ದರು.
‘ಸ್ವರಾ ಭಾಸ್ಕರ್ ತೂಕ ಏರಿಸಿಕೊಂಡಿದ್ದರಿಂದ ಅವರಿಗೆ ಅವಕಾಶ ಸಿಗುತ್ತಿಲ್ಲ’ ಎಂದು ವರದಿ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಅವರು, ‘ಕೆಲ ತಿಂಗಳ ಹಿಂದೆ ನಾನು ಮಗುವಿಗೆ ಜನ್ಮ ಕೊಟ್ಟಿದ್ದೇನೆ. ಇದರಿಂದ ತೂಕ ಹೆಚ್ಚಿದೆ. ದಯವಿಟ್ಟು ಯಾರಾದರೂ ಈ ಪ್ರತಿಭೆಗಳಿಗೆ ಹೆರಿಗೆಯ ಶರೀರಶಾಸ್ತ್ರವನ್ನು ವಿವರಿಸಬಹುದೇ’ ಎಂದು ಕೋರಿದ್ದರು.
ಸ್ವರಾ ಭಾಸ್ಕರ್ ಅವರು ಸಿನಿಮಾಗಳನ್ನು ಮಾಡಿ ಫೇಮಸ್ ಆದರು. 2010ರಿಂದ ಅವರು ಸಿನಿಮಾ ರಂಗದಲ್ಲಿ ತೊಡಗಿಕೊಂಡಿದದಾರೆ. 2014ರಲ್ಲಿ ಅವರಿಗೆ ಕಿರುತೆರೆಗಳಿಂದ ಆಫರ್ಗಳು ಬಂದವು. 2022ರಲ್ಲಿ ರಿಲೀಸ್ ಆದ ‘ಜಹಾನ್ ಚಾರ್ ಯಾರ್’ ಸಿನಿಮಾ ಬಳಿಕ ಅವರು ಅಷ್ಟಾಗಿ ತೆರೆಮೇಲೆ ಬ್ಯುಸಿ ಇಲ್ಲ. ರಬಿನಾ ಆರೈಕೆಯಲ್ಲಿ ಅವರು ಬ್ಯುಸಿ ಇದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋಗಳನ್ನು ಸ್ವರಾ ಭಾಸ್ಕರ್ ಅವರು ಹಂಚಿಕೊಳ್ಳುತ್ತಾ ಇರುತ್ತಾರೆ.
ಮಗು ಜನಿಸಿ ವರ್ಷಗಳೇ ಕಳೆದರು ಅವರು ದೇಹದ ತೂಕ ಇಳಿಸಿಕೊಂಡಿಲ್ಲ ಏಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದು ಇದೆ. ಆದರೆ, ಇದಕ್ಕೆ ಅವರು ಹೆಚ್ಚು ತಲೆಕೆಸಿಕೊಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







