ಯುವತಿ ಸೆಲ್ಫಿ ಕೇಳಿದ್ದಕ್ಕೆ ತಾಪ್ಸಿ ಪನ್ನು ಧಿಮಾಕು; ಕ್ಲಾಸ್​ ತೆಗೆದುಕೊಂಡ ನೆಟ್ಟಿಗರು

|

Updated on: Jul 28, 2024 | 7:18 PM

ತಾಪ್ಸಿ ಪನ್ನು ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅವರನ್ನು ಕಂಡಾಗ ಜನರು ಸೆಲ್ಫಿ ಕೇಳುವುದು ಸಹಜ. ಆದರೆ, ಇತ್ತೀಚೆಗೆ ಯುವತಿಯೊಬ್ಬರು ಬಂದು ಸೆಲ್ಫಿ ಕೇಳಿದ್ದಕ್ಕೆ ತಾಪ್ಸಿ ಪನ್ನು ಅವರು ಧಿಮಾಕಿನಿಂದ ನಡೆದುಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ. ಕಮೆಂಟ್ ಮಾಡಿದ ಎಲ್ಲರೂ ನಟಿಯ ನಡೆಯಲ್ಲಿ ಪ್ರಶ್ನಿಸಿದ್ದಾರೆ.

ಯುವತಿ ಸೆಲ್ಫಿ ಕೇಳಿದ್ದಕ್ಕೆ ತಾಪ್ಸಿ ಪನ್ನು ಧಿಮಾಕು; ಕ್ಲಾಸ್​ ತೆಗೆದುಕೊಂಡ ನೆಟ್ಟಿಗರು
ಅನನ್ಯಾ ದ್ವಿವೇದಿ, ತಾಪ್ಸಿ ಪನ್ನು
Follow us on

ಬಾಲಿವುಡ್ ನಟಿ ತಾಪ್ಸಿ ಪನ್ನು ಅವರು ಆಗಾಗ ಏನಾದರೂ ಕಿರಿಕ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ತಮ್ಮ ನೇರ ನಡೆ ನುಡಿಯ ಕಾರಣಕ್ಕೆ ಕೆಲವೊಮ್ಮೆ ಅವರು ಟ್ರೋಲ್​ ಆಗುತ್ತಾರೆ. ಆದರೆ ಈಗ ಅವರು ಇನ್ನೊಂದು ಕಾರಣದಿಂದ ನೆಟ್ಟಿಗರ ಅಸಮಾಧಾನಕ್ಕೆ ಕಾರಣ ಆಗಿದ್ದಾರೆ. ಅಭಿಮಾನದಿಂದ ಬಂದು ಸೆಲ್ಫಿ ಕೇಳಿದ ಯುವತಿಯೊಬ್ಬರ ಜೊತೆ ತಾಪ್ಸಿ ಪನ್ನು ಅವರು ಒರಟಾಗಿ ನಡೆದುಕೊಂಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ? ನೆಟ್ಟಿಗರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ತಾಪ್ಸಿ ಪನ್ನು ಅವರು ‘ಖೇಲ್​ ಖೇಲ್ ಮೇ’ ಸಿನಿಮಾದಲ್ಲಿ ನಟಿಸಿದ್ದಾರೆ. ಅಕ್ಷಯ್​ ಕುಮಾರ್​ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಹೊಸ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಮುಂಬೈನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಅನೇಕರನ್ನು ಆಹ್ವಾನಿಸಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಅನನ್ಯಾ ದ್ವಿವೇದಿ ಕೂಡ ಬಂದಿದ್ದರು. ಅನನ್ಯಾ ಜೊತೆ ತಾಪ್ಸಿ ಪನ್ನು ಅವರು ಧಿಮಾಕು ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ: ಮದುವೆ ವಿಷಯ ಮುಚ್ಚಿಟ್ಟಿದ್ದ ತಾಪ್ಸಿ ಪನ್ನು; ವಿಡಿಯೋ ಲೀಕ್​ನಿಂದ ರಹಸ್ಯ ಬಯಲು

ಹಾಡಿನ ಬಿಡುಗಡೆ ಬಳಿಕ ಅನನ್ಯಾ ದ್ವಿವೇದಿ ಅವರು ತಾಪ್ಸಿ ಪನ್ನು ಬಳಿ ಹೋಗಿ ಸೆಲ್ಫಿ ಕೇಳಿದರು. ಆದರೆ ಅದಕ್ಕೆ ತಾಪ್ಸಿ ಅವರು ಸಮ್ಮತಿ ನೀಡಲಿಲ್ಲ. ಈ ಸಂದರ್ಭದ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿರುವ ಜನರು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ. ನಟಿಯ ವರ್ತನೆ ಸರಿಯಿಲ್ಲ ಎಂದು ಅನೇಕರು ಟೀಕೆ ಮಾಡಿದ್ದಾರೆ. ಈ ಬಗ್ಗೆ ತಾಪ್ಸಿ ಅವರು ಪ್ರತಿಕ್ರಿಯಿಸುವುದು ಬಾಕಿ ಇದೆ.

Tapsee strikes again! Swipe for more
byu/Away-Enthusiasm8771 inBollyBlindsNGossip

ವೈರಲ್​ ಆಗಿರುವ ಈ ವಿಡಿಯೋ ನೋಡಿ ಅನನ್ಯಾ ದ್ವಿವೇದಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ಈ ವಿಡಿಯೋದಲ್ಲಿ ಇರುವುದು ನಾನೇ. ಅನೇಕ ಕ್ಯಾಮೆರಾಗಳು ಈಗಾಗಲೇ ಸುತ್ತುವರಿದಿರುವಾಗ ಸೆಲ್ಫಿ ಬೇಡ ಅಂತ ಹೇಳಿದ್ದು ಯಾಕೆ ಅಂತ ನನಗೆ ಅರ್ಥ ಆಗತ್ತಿಲ್ಲ. ಅವರು ನಮ್ಮನ್ನು ಆಹ್ವಾನಿಸಿದ್ದೇ ಅವರ ಹಾಡಿನ ಪ್ರಚಾರಕ್ಕಾಗಿ. ಈ ನಟಿಗೆ ನಿಜಕ್ಕೂ ಉತ್ತಮವಾದ ಪಿಆರ್​ ತರಬೇತಿ ಬೇಕಿದೆ’ ಎಂದು ಅನನ್ಯಾ ದ್ವಿವೇದಿ ಅವರು ಕಮೆಂಟ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.