ಗುಟ್ಟಾಗಿ ಮದುವೆ ಆದ ನಟಿ ತಾಪ್ಸಿ ಪನ್ನು? ಆಪ್ತರಿಂದಲೇ ಫೋಟೋ ಲೀಕ್
ನಟಿ ತಾಪ್ಸಿ ಪನ್ನು ಹಾಗೂ ಮಥಾಯಸ್ ಬೋ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಪರಸ್ಪರ ಭೇಟಿ ಆದ ನಂತರ ಇವರ ಮಧ್ಯೆ ಪ್ರೀತಿ ಮೂಡಿದೆ. ಇಬ್ಬರೂ ಹಾಯಾಗಿ ಸುತ್ತಾಡಿಕೊಂಡಿದ್ದರು. ಇತ್ತೀಚೆಗೆ ಇವರು ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದರು ಎಂದು ಹೇಳಲಾಗಿತ್ತು.
ನಟಿ ತಾಪ್ಸಿ ಪನ್ನು (Tapsee Pannu) ಅವರು ಇತ್ತೀಚೆಗೆ ಸಖತ್ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಮದುವೆ ವಿಚಾರ. ಬ್ಯಾಡ್ಮಿಂಟನ್ ಆಟಗಾರ ಮಥಾಯಸ್ ಬೋ ಜೊತೆ ತಾಪ್ಸಿ ವಿವಾಹ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಈಗ ಉದಯಪುರದಲ್ಲಿ ಇವರ ಮದುವೆ ಗುಟ್ಟಾಗಿ ನೆರವೇರಿದೆ ಎಂದು ಹೇಳಲಾಗುತ್ತಿದೆ. ತಾಪ್ಸಿ ಪನ್ನು ಆಪ್ತರು ಹಂಚಿಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಿಂದ ತಾಪ್ಸಿ ಪನ್ನು ಮದುವೆ ವಿಚಾರ ರಿವೀಲ್ ಆದಂತೆ ಆಗಿದೆ.
ನಟಿ ತಾಪ್ಸಿ ಪನ್ನು ಹಾಗೂ ಮಥಾಯಸ್ ಬೋ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಪರಸ್ಪರ ಭೇಟಿ ಆದ ನಂತರ ಇವರ ಮಧ್ಯೆ ಪ್ರೀತಿ ಮೂಡಿದೆ. ಇಬ್ಬರೂ ಹಾಯಾಗಿ ಸುತ್ತಾಡಿಕೊಂಡಿದ್ದರು. ಇತ್ತೀಚೆಗೆ ಇವರು ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದರು ಎಂದು ಹೇಳಲಾಗಿತ್ತು. ಈ ವಿವಾಹಕ್ಕೆ ಆಪ್ತರು ಮತ್ತು ಕುಟುಂಬದವರು ಮಾತ್ರ ಹಾಜರಿ ಹಾಕಿದ್ದಾರೆ. ಬಾಲಿವುಡ್ನ ಯಾರಿಗೂ ಇದರಲ್ಲಿ ಆಹ್ವಾನ ಇರಲಿಲ್ಲ ಎನ್ನಲಾಗಿದೆ.
ಫೋಟೋದಲ್ಲೇನಿದೆ?
ಎವಾನಿಯಾ ಪನ್ನು ಅವರು ತಾಪ್ಸಿ ಪನ್ನು ಅವರ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಇನ್ಸ್ಟಾಗ್ರಾಮ್ನಲ್ಲಿ ತಾಪ್ಸಿಗೆ ಮೇಕಪ್ ಮಾಡಿದ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಅವರು ಹಂಚಿಕೊಂಡ ಫೋಟೋ ಎಲ್ಲರ ಕಣ್ಣು ಕುಕ್ಕಿತ್ತು. ಸ್ಟೇಟಸ್ನಲ್ಲಿ ಅವರು ಬ್ಯಾಕ್ ಟು ಬ್ಯಾಕ್ ಮದುವೆ ಸಂಭ್ರಮದ ಫೋಟೋ ಹಂಚಿಕೊಳ್ಳುತ್ತಿದ್ದಾರೆ. ಎಲ್ಲರ ಜೊತೆಗೂಡಿ ಪೋಸ್ ಕೊಟ್ಟ ಫೋಟೋ ವೈರಲ್ ಆಗಿದೆ. ಇದು ತಾಪ್ಸಿ ಪನ್ನು ಮದುವೆಯಲ್ಲಿ ಕ್ಲಿಕ್ಕಿಸಿದ ಫೋಟೋ ಎಂದು ಅನೇಕರು ಊಹಿಸಿದ್ದಾರೆ.
ಇದನ್ನೂ ಓದಿ: ಕ್ರಿಶ್ಚಿಯನ್-ಸಿಖ್ ಸಂಪ್ರದಾಯದಂತೆ ತಾಪ್ಸಿ ಪನ್ನು ಮದುವೆ; ಬಾಲಿವುಡ್ ಮಂದಿಗೆ ಆಹ್ವಾನ ಇಲ್ಲ?
ಹೀಗೆಯೇ ಆಗಿತ್ತು
ಬಹುತೇಕ ಬಾಲಿವುಡ್ ಸೆಲೆಬ್ರಿಟಿಗಳು ಮದುವೆ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದು ಇದೆ. ಮದುವೆ ಆದ ಬಳಿಕ ಈ ಬಗ್ಗೆ ಪೋಸ್ಟ್ ಮಾಡುತ್ತಾರೆ. ನಟಿ ತಾಪ್ಸಿ ಪನ್ನು ಕೂಡ ಹಾಗೆಯೇ ಮಾಡುವ ಆಲೋಚನೆ ಇಟ್ಟುಕೊಂಡಿರಬಹುದು ಎಂದು ಕೆಲವರು ಊಹಿಸಿದ್ದಾರೆ. ಇನ್ನೂ ಕೆಲವರು ನಿಜಕ್ಕೂ ತಾಪ್ಸಿ ಪನ್ನು ಮದುವೆ ನಡೆದಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಮೊದಲು ಮದುವೆ ವಿಚಾರದ ಬಗ್ಗೆ ತಾಪ್ಸಿ ಪನ್ನು ಮಾತನಾಡಿದ್ದರು. ‘ಖಾಸಗಿ ವಿಚಾರದಲ್ಲಿ ನಾನು ಎಂದಿಗೂ ಸ್ಪಷ್ಟನೆ ನೀಡಿಲ್ಲ, ನೀಡುವುದೂ ಇಲ್ಲ’ ಎಂದು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ