Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ವಿಷಯ ಮುಚ್ಚಿಟ್ಟಿದ್ದ ತಾಪ್ಸಿ ಪನ್ನು; ವಿಡಿಯೋ ಲೀಕ್​ನಿಂದ ರಹಸ್ಯ ಬಯಲು

ಉದಯಪುರದಲ್ಲಿ ಮಾ.23ರಂದು ತಾಪ್ಸಿ ಪನ್ನು ಮತ್ತು ಮಥಾಯಿಸ್​ ಬೋ ಅವರ ವಿವಾಹ ನಡೆದಿತ್ತು. ಮದುವೆಯಲ್ಲಿ ತಾಪ್ಸಿ ಪನ್ನು ಅವರು ಹಾಡುತ್ತಾ, ಕುಣಿಯುತ್ತಾ ವೇದಿಕೆಗೆ ಬಂದು ಮಥಾಯಿಸ್​ ಬೋ ಅವರನ್ನು ತಬ್ಬಿಕೊಂಡರು. ಮದುವೆಗೆ ಬಂದಿದ್ದ ಅತಿಥಿಯೊಬ್ಬರ ಮೊಬೈಲ್​ನಲ್ಲಿ ಈ ಸಂದರ್ಭದ ವಿಡಿಯೋ ಸೆರೆಯಾಗಿದ್ದು, ಈಗ ಸೋರಿಕೆ ಆಗಿ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮದುವೆ ವಿಷಯ ಮುಚ್ಚಿಟ್ಟಿದ್ದ ತಾಪ್ಸಿ ಪನ್ನು; ವಿಡಿಯೋ ಲೀಕ್​ನಿಂದ ರಹಸ್ಯ ಬಯಲು
ತಾಪ್ಸಿ ಪನ್ನು ಮದುವೆ ವಿಡಿಯೋ ಲೀಕ್​
Follow us
ಮದನ್​ ಕುಮಾರ್​
|

Updated on: Apr 03, 2024 | 9:29 PM

ಬಾಲಿವುಡ್​ ನಟಿ ತಾಪ್ಸಿ ಪನ್ನು (Taapsee Pannu) ಅವರ ಖಾಸಗಿ ವಿಚಾರ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಕೆಲವೇ ದಿನಗಳ ಹಿಂದೆ ಬ್ಯಾಡ್ಮಿಂಟನ್​ ಆಟಗಾರ ಮಥಾಯಿಸ್​ ಬೋ ಜೊತೆ ತಾಪ್ಸಿ ಪನ್ನು ಅವರು ಮದುವೆ ಆಗಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಆದರೆ ಆ ವಿಚಾರವನ್ನು ತಾಪ್ಸಿ ಪನ್ನು ಅವರಾಗಲಿ, ಮಥಾಯಿಸ್​ ಬೋ (Mathias Boe) ಅವರಾಗಲಿ ಒಪ್ಪಿಕೊಂಡಿಲ್ಲ. ಮದುವೆ ಬಗ್ಗೆ ಅವರು ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಅವರ ಶಾದಿ ರಹಸ್ಯ ಈಗ ಬಯಲಾಗಿದೆ. ತಾಪ್ಸಿ ಪನ್ನು ಹಾಗೂ ಮಥಾಯಿಸ್ ಬೋ ಅವರ ಮದುವೆ ವಿಡಿಯೋ ಲೀಕ್​ (Taapsee Pannu Wedding Video Leak) ಆಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ. ತಾಪ್ಸಿ ಪನ್ನು ಅವರು ಮದುಮಗಳಾಗಿ ಸಿಕ್ಕಾಪಟ್ಟೆ ಸಿಂಗಾರ ಮಾಡಿಕೊಂಡಿದ್ದಾರೆ. ಮೈ ತುಂಬ ಆಭರಣ ಧರಿಸಿ ಮಿಂಚಿದ್ದಾರೆ. ಕೆಂಪು ಬಣ್ಣದ ಅವರ ಕಾಸ್ಟ್ಯೂಮ್​ ಗಮನ ಸೆಳೆಯುತ್ತಿದೆ. ತಾಪ್ಸಿ ಪತಿ ಮಥಾಯಿಸ್​ ಬೋ ಅವರು ಶೇರ್ವಾನಿ ಧರಿಸಿ ಕಂಗೊಳಿಸಿದ್ದಾರೆ. ಆಪ್ತರ ಸಮ್ಮುಖದಲ್ಲಿ ಅವರಿಬ್ಬರ ಮದುವೆ ನಡೆದಿದೆ.

ವರದಿಗಳ ಪ್ರಕಾರ ಮಾರ್ಚ್​ 23ರಂದು ತಾಪ್ಸಿ ಪನ್ನು ಹಾಗೂ ಮಥಾಯಿಸ್​ ಬೋ ಅವರ ಮದುವೆ ನಡೆದಿದೆ. ಉದಯಪುರದಲ್ಲಿ ನಡೆದ ಸೆಲೆಬ್ರಿಟಿ ವಿವಾಹದಲ್ಲಿ ತಾಪ್ಸಿ ಪನ್ನು ಅವರು ಹಾಡುತ್ತಾ, ಕುಣಿಯುತ್ತಾ ವೇದಿಕೆಗೆ ಬಂದು ಮಥಾಯಿಸ್​ ಬೋ ಅವರನ್ನು ತಬ್ಬಿಕೊಂಡಿದ್ದಾರೆ. ಅತಿಥಿಯೊಬ್ಬರ ಮೊಬೈಲ್​ನಲ್ಲಿ ಈ ಸಂದರ್ಭದ ವಿಡಿಯೋ ಸೆರೆಯಾಗಿದೆ. ಅದೇ ಈಗ ಸೋರಿಕೆ ಆಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

Taapse Pannu Wedding Video byu/PinPitiful inBollyBlindsNGossip

ಹಲವು ವರ್ಷಗಳಿಂದ ತಾಪ್ಸಿ ಪನ್ನು ಮತ್ತು ಮಥಾಯಿಸ್​ ಬೋ ಅವರು ಪ್ರೀತಿಸುತ್ತಿದ್ದರು. ಇಬ್ಬರೂ ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದು ಕಡಿಮೆ. ಅವರ ವಿವಾಹ ಸಮಾರಂಭಕ್ಕೆ ಕೆಲವೇ ಮಂದಿಗೆ ಆಹ್ವಾನ ನೀಡಲಾಗಿತ್ತು. ಅನುರಾಗ್​ ಕಶ್ಯಪ್​, ಕನ್ನಿಕಾ ದಿಲೋನ್​, ಪವೈಲ್​ ಗುಲಾಟಿ ಮುಂತಾದವರು ಈ ಮದುವೆಗೆ ಸಾಕ್ಷಿ ಆಗಿದ್ದಾರೆ. ಒಟ್ಟಿನಲ್ಲಿ ತಾಪ್ಸಿ ಪನ್ನು ಅವರು ತಮ್ಮ ಮದುವೆಯ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರೂ ಕೂಡ ವಿಡಿಯೋ ಲೀಕ್​ನಿಂದ ಎಲ್ಲವೂ ಬಯಲಾದಂತೆ ಆಗಿದೆ.

ಇದನ್ನೂ ಓದಿ: ಬಾಲಿವುಡ್​ನಲ್ಲಿ ರಾತ್ರಿ 10 ಗಂಟೆ ನಂತರ ಏನೆಲ್ಲ ಆಗುತ್ತದೆ ಎಂಬುದನ್ನು ವಿವರಿಸಿದ ತಾಪ್ಸಿ ಪನ್ನು

ತಾಪ್ಸಿ ಪನ್ನು ಅವರಿಗೆ ಈಗ 36 ವರ್ಷ ವಯಸ್ಸು. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಬಹುಭಾಷೆಯಲ್ಲಿ ನಟಿಸಿ ಫೇಮಸ್​ ಆಗಿದ್ದಾರೆ. ‘ಡಂಕಿ’ ‘ತಪ್ಪಡ್​’, ‘ಮುಲ್ಕ್​’, ‘ಪಿಂಕ್​’, ‘ಮಿಷನ್​ ಮಂಗಲ್​’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಅವರು ಜನಪ್ರಿಯತೆ ಗಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ