ಯಶ್ ಹಿಂದಿ ಪ್ರಾಜೆಕ್ಟ್ ಬಗ್ಗೆ ಇನ್ನೊಂದು ವಿಷಯ ಬಹಿರಂಗ; ರಾವಣನ ಎಂಟ್ರಿ ಯಾವಾಗ?
ಏಪ್ರಿಲ್ 2ರಂದು ನಿರ್ಮಾಪಕರ ಜನ್ಮದಿನವಾದ್ದರಿಂದ ಆ ದಿನವೇ ಸಿನಿಮಾದ ಶೂಟಿಂಗ್ ಪ್ರಾರಂಭ ಮಾಡಬೇಕು ಎಂಬ ಆಸೆ ಅವರದ್ದಾಗಿತ್ತು. ಆದ್ದರಿಂದ ಸಣ್ಣ ಸನ್ನಿವೇಶದ ಮೂಲಕ ಅವರು ಶೂಟಿಂಗ್ ಆರಂಭ ಮಾಡಿದರು. ಆದರೆ ಆ ಸೀನ್ಗಳಲ್ಲಿ ಕೇವಲ ಬಾಲನಟರಷ್ಟೇ ಭಾಗಿ ಆಗಿದ್ದರು. ಯಶ್ ಅವರು ಚಿತ್ರೀಕರಣದ ಸೆಟ್ನತ್ತ ಸುಳಿಯಲಿಲ್ಲ.
ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ನಟ ‘ರಾಕಿಂಗ್ ಸ್ಟಾರ್’ ಯಶ್ (Yash) ಅವರಿಗೆ ಸಖತ್ ಬೇಡಿಕೆ ಇದೆ. ಅವರ ಕಾಲ್ಶೀಟ್ ಪಡೆಯಲು ಬಾಲಿವುಡ್ ಮಂದಿ ಕಾದಿದ್ದಾರೆ. ಸದ್ಯಕ್ಕೆ ಯಶ್ ಅವರು ‘ಟಾಕ್ಸಿಕ್’ (Toxic) ಸಿನಿಮಾದ ಮೇಲೆ ಸಂಪೂರ್ಣ ಗಮನ ಹರಿಸುತ್ತಿದ್ದಾರೆ. ಈ ನಡುವೆ ಹಿಂದಿಯ ‘ರಾಮಾಯಣ’ (Ramayana) ಸಿನಿಮಾದಲ್ಲಿ ಯಶ್ ನಟಿಸುತ್ತಾರೆ ಎಂಬ ಸುದ್ದಿ ಜೋರಾಗಿದೆ. ಆ ಬಗ್ಗೆ ಇನ್ನೊಂದು ಗಾಸಿಪ್ ಕೇಳಿಬಂದಿದೆ. ಈ ಸಿನಿಮಾ ಮೂರು ಪಾರ್ಟ್ಗಳಲ್ಲಿ ಮೂಡಿಬರಲಿದ್ದು, ಮೊದಲ ಪಾರ್ಟ್ನಲ್ಲಿ ಯಶ್ ನಟಿಸುವುದಿಲ್ಲ ಎನ್ನಲಾಗಿದೆ! ಈಗಾಗಲೇ ಈ ಸಿನಿಮಾದ ಶೂಟಿಂಗ್ ಶುರುವಾಗಿದೆ.
ಏಪ್ರಿಲ್ 2ರಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಜನ್ಮದಿನ. ಆ ವಿಶೇಷ ದಿನದಂದೇ ರಾಮಾಯಣ ಸಿನಿಮಾದ ಶೂಟಿಂಗ್ ಆರಂಭಿಸಬೇಕು ಎಂಬ ಆಸೆ ಅವರದ್ದಾಗಿತ್ತು. ಹಾಗಾಗಿ ಅವರು ಚಿಕ್ಕ ದೃಶ್ಯದ ಮೂಲಕ ಏ.2ರಂದು ಚಿತ್ರೀಕರಣ ಪ್ರಾರಂಭ ಮಾಡಿದರು. ಆದರೆ ಈ ದೃಶ್ಯಗಳಲ್ಲಿ ಕೇವಲ ಬಾಲನಟರು ಮಾತ್ರ ಭಾಗಿ ಆಗಿದ್ದರು ಎನ್ನಲಾಗಿದೆ. ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಅವರು ಶೂಟಿಂಗ್ ಸೆಟ್ನತ್ತ ಸುಳಿಯಲಿಲ್ಲ.
ಇದನ್ನೂ ಓದಿ: ಹೊಸ ಸಿನಿಮಾದಲ್ಲಿ ಯಶ್ಗೆ ಜೋಡಿ ಆಗ್ತಾರಾ 52 ವರ್ಷದ ನಟಿ ಸಾಕ್ಷಿ ತನ್ವರ್?
ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ರಾಮನ ಪಾತ್ರ ಮಾಡಲಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ಅಭಿನಯಿಸುತ್ತಾರೆ ಎನ್ನಲಾಗಿದೆ. ಅದೇ ರೀತಿ, ರಾಮಾಯಣದ ಇನ್ನೊಂದು ಪ್ರಮುಖ ಪಾತ್ರವಾದ ರಾವಣನಾಗಿ ಯಶ್ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಆಗಿದೆ. ಅಚ್ಚರಿ ಏನೆಂದರೆ ಮೂರು ಪಾರ್ಟ್ಗಳ ಈ ಸಿನಿಮಾದಲ್ಲಿ ರಾವಣನ ಎಂಟ್ರಿ ಆಗುವುದು 2ನೇ ಪಾರ್ಟ್ನಲ್ಲಿ ಎನ್ನಲಾಗಿದೆ.
ಇದನ್ನೂ ಓದಿ: ಪದೇ ಪದೇ ಪ್ರಶ್ನೆ ಕೇಳಿದವರಿಗೆ ಯಶ್ ಉತ್ತರ; ಝಲಕ್ ತೋರಿಸಿದ ರಾಕಿ ಭಾಯ್
‘ಬಾಲಿವುಡ್ ಹಂಗಾಮಾ’ ವರದಿ ಪ್ರಕಾರ, ಮೊದಲ ಪಾರ್ಟ್ನಲ್ಲಿ ರಾವಣನ ಪಾತ್ರ ಇರುವುದಿಲ್ಲ. ಹಾಗಾಗಿ ಯಶ್ ಅವರು ಮೊದಲ ಪಾರ್ಟ್ನ ಶೂಟಿಂಗ್ನಲ್ಲಿ ಪಾಲ್ಗೊಳ್ಳುವುದಿಲ್ಲ. ಅಲ್ಲಿಯ ತನಕ ಅವರು ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರಲಿದ್ದಾರೆ. ‘ಟಾಕ್ಸಿಕ್’ ಕೆಲಸಗಳು ಮುಗಿದ ನಂತರವಷ್ಟೇ ಅವರು ‘ರಾಮಾಯಣ’ ಶೂಟಿಂಗ್ ಸೆಟ್ಗೆ ಎಂಟ್ರಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ನಿತೇಶ್ ತಿವಾರಿ ಅವರು ರಾಮಾಯಣ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ರಣಬೀರ್ ಕಪೂರ್ ಅವರು ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.