AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್​ ನಟನೆಯ ‘ಟಾಕ್ಸಿಕ್​’ ಚಿತ್ರದ ನಾಯಕಿಯರ ಬಗ್ಗೆ ಮುಂದುವರಿದಿದೆ ಗೊಂದಲ

‘ಟಾಕ್ಸಿಕ್​’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಯಶ್​ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಯಾವ ನಟಿಗೆ ಸಿಗಲಿದೆ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಅದ್ದೂರಿ ಬಜೆಟ್​ನಲ್ಲಿ ‘ಟಾಕ್ಸಿಕ್​’ ಸಿನಿಮಾ ನಿರ್ಮಾಣ ಆಗುತ್ತಿದೆ. ಆದಷ್ಟು ಬೇಗ ಪಾತ್ರವರ್ಗದ ಬಗ್ಗೆ ಅಪ್​ಡೇಟ್​ ಸಿಗಲಿ ಎಂದು ಫ್ಯಾನ್ಸ್​ ಬಯಸಿದ್ದಾರೆ.

ಯಶ್​ ನಟನೆಯ ‘ಟಾಕ್ಸಿಕ್​’ ಚಿತ್ರದ ನಾಯಕಿಯರ ಬಗ್ಗೆ ಮುಂದುವರಿದಿದೆ ಗೊಂದಲ
‘ಟಾಕ್ಸಿಕ್​’ ಪೋಸ್ಟರ್​
ಮದನ್​ ಕುಮಾರ್​
|

Updated on: Mar 24, 2024 | 7:08 PM

Share

ನಟ ಯಶ್​ ಅವರು ‘ಟಾಕ್ಸಿಕ್​’ (Toxic) ಸಿನಿಮಾದ ಮೇಲೆ ಸಂಪೂರ್ಣ ಗಮನ ಹರಿಸಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್​’ ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್​ ಅವರು ಈ ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಯಶ್​ (Yash) ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಕಲಾವಿದರ ಆಯ್ಕೆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಹಲವು ಬಗೆಯ ಅಂತೆ-ಕಂತೆಗಳು ಹರಿದಾಡುತ್ತಿವೆ. ಸಾಯಿ ಪಲ್ಲವಿ, ಕರೀನಾ ಕಪೂರ್​ ಖಾನ್​ ಮುಂತಾದ ನಟಿಯರ ಹೆಸರು ಕೇಳಿಬರುತ್ತಿದೆ. ಆದರೆ ಇದನ್ನೆಲ್ಲ ನಿರ್ಮಾಣ ಸಂಸ್ಥೆ ತಳ್ಳಿಹಾಕಿದೆ.

‘ಟಾಕ್ಸಿಕ್​’ ಒಂದು ಸಾಧಾರಣ ಸಿನಿಮಾ ಅಲ್ಲ. ಹಾಗಾಗಿ ಈ ಚಿತ್ರದ ಮೇಲೆ ಜನರಿಗೆ ಸಿಕ್ಕಾಪಟ್ಟೆ ಎಗ್ಸೈಟ್​ಮೆಂಟ್​ ಇದೆ. ಸದ್ಯಕ್ಕೆ ಚಿತ್ರತಂಡದಿಂದ ಅಧಿಕೃತವಾಗಿ ಪಾತ್ರವರ್ಗದ ಬಗ್ಗೆ ಘೋಷಣೆ ಆಗಿಲ್ಲ. ಅಷ್ಟರೊಳಗೆ ನಾಯಕಿಯ ಆಯ್ಕೆ ಆಗಿದೆ ಎಂದು ಕೆಲವರು ಸುದ್ದಿ ಹಬ್ಬಿಸಿದ್ದಾರೆ. ಬಹುತೇಕ ಸಾಯಿ ಪಲ್ಲವಿ ಅಥವಾ ಕರೀನಾ ಕಪೂರ್​ ಹೆಸರು ಅಂತಿಮ ಎಂದು ತಿಳಿದುಕೊಂಡಿದ್ದ ಎಲ್ಲರಿಗೂ ನಿರ್ಮಾಣ ಸಂಸ್ಥೆಯ ಸ್ಪಷ್ಟನೆ ಕೇಳಿದ ಬಳಿಕ ಹೊಸ ಹೊಸ ಪ್ರಶ್ನೆ ಹುಟ್ಟಿಕೊಂಡಿವೆ.

‘ಟಾಕ್ಸಿಕ್​’ ಸಿನಿಮಾದ ಶೂಟಿಂಗ್​ ಸೆಟ್​ನಿಂದ ಯಶ್​ ಫೋಟೋಗಳು ಲೀಕ್​

ಯಶ್ ಅವರು ‘ಟಾಕ್ಸಿಕ್’ ಒಪ್ಪಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡರು. ಈಗ ಈ ಸಿನಿಮಾದ ಅಪ್​ಡೇಟ್​ ನೀಡುವಲ್ಲಿಯೂ ತಡವಾಗುತ್ತಿದೆ. ಗಾಸಿಪ್​ಗಳನ್ನು ನಂಬುವುದೋ ಬಿಡುವುದೋ ಎಂದು ಸಿನಿಪ್ರಿಯರಲ್ಲಿ ಗೊಂದಲ ಮೂಡಿದೆ. ಇತ್ತೀಚೆಗೆ ಈ ಸಿನಿಮಾದ ಶೂಟಿಂಗ್​ ತಯಾರಿ ವೇಳೆ ಯಶ್​ ಮತ್ತು ಗೀತು ಮೋಹನ್​ದಾಸ್​ ಅವರು ಗೋವಾದಲ್ಲಿ ಕಾಣಿಸಿಕೊಂಡ ಫೋಟೋ ಹಾಗೂ ವಿಡಿಯೋ ವೈರಲ್​ ಆಗಿತ್ತು.

ಹೊಸ ಕಲಾವಿದರಿಗೆ ‘ಟಾಕ್ಸಿಕ್​’ ಸಿನಿಮಾದಲ್ಲಿ ಅವಕಾಶ ಕೊಡಲಾಗುತ್ತಿದೆ. ಆಡಿಷನ್​ಗೆ ಕರೆ ನೀಡಲಾಗಿದೆ. 25ರಿಂದ 75 ವರ್ಷ ವಯಸ್ಸಿನ ಪುರುಷರು, 12ರಿಂದ 16 ವರ್ಷ ವಯಸ್ಸಿನ ಮಕ್ಕಳು, 23ರಿಂದ 65 ವರ್ಷ ವಯಸ್ಸಿನ ಮಹಿಳೆಯರು ಆಡಿಷನ್​ ನೀಡಬಹುದು. ಒಂದು ಇಂಟ್ರಡಕ್ಷನ್​ ವಿಡಿಯೋ ಮತ್ತು ಒಂದು ನಿಮಿಷ ನಟನೆ ತೋರಿಸುವ ವಿಡಿಯೋವನ್ನು 8618706590 ನಂಬರ್​ಗೆ ವಾಟ್ಸಪ್​ ಮೂಲಕ ಕಳಿಸಬೇಕು. ಮಾರ್ಚ್​ 25 ಕಡೆಯ ದಿನಾಂಕ ಎಂದು ಸೋಶಿಯಲ್​ ಮೀಡಿಯಾದಲ್ಲಿ ‘ಕೆವಿಎನ್​ ಪ್ರೊಡಕ್ಷನ್ಸ್​’ ಮಾಹಿತಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಪೊಲೀಸರ ಮೇಲೆ ಒತ್ತಡ ಹಾಕಿರೋ ಸಿಎಂಗೆ ನಾಚಿಕೆಯಾಗಬೇಕು: ಬಿಎಸ್​ವೈ ವಾಗ್ದಾಳಿ
ಪೊಲೀಸರ ಮೇಲೆ ಒತ್ತಡ ಹಾಕಿರೋ ಸಿಎಂಗೆ ನಾಚಿಕೆಯಾಗಬೇಕು: ಬಿಎಸ್​ವೈ ವಾಗ್ದಾಳಿ
ಕುವೈತ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ
ಕುವೈತ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ