ಪುರುಷತ್ವದ ಸಂಕೇತಕ್ಕೆ ಹೇಳಿಮಾಡಿಸಿದ ವ್ಯಕ್ತಿ ಅಮಿತಾಭ್ ಎಂದು ಟ್ವೀಟ್ ಮಾಡಿದ ತಾಲಿಬಾನ್

|

Updated on: Oct 07, 2023 | 2:46 PM

80ರ ವಯಸ್ಸಿನಲ್ಲೂ ಅಮಿತಾಭ್ ಅವರು ಬಣ್ಣದ ಲೋಕದಲ್ಲಿ ಬ್ಯುಸಿ ಇದ್ದಾರೆ ಎಂದರೆ ಅದು ಸಣ್ಣ ಮಾತಲ್ಲ. ಹಲವು ಅನಾರೋಗ್ಯ ಸಮಸ್ಯೆಗಳಿದ್ದರೂ ಅದನ್ನು ಮೆಟ್ಟಿ ನಿಂತಿದ್ದಾರೆ. ಅವರ ಬಗ್ಗೆ ತಾಲಿಬಾನ್​ ಅವರು ಪೋಸ್ಟ್ ಒಂದನ್ನು ಮಾಡಿದ್ದಾರೆ.

ಪುರುಷತ್ವದ ಸಂಕೇತಕ್ಕೆ ಹೇಳಿಮಾಡಿಸಿದ ವ್ಯಕ್ತಿ ಅಮಿತಾಭ್ ಎಂದು ಟ್ವೀಟ್ ಮಾಡಿದ ತಾಲಿಬಾನ್
ಅಮಿತಾಭ್
Follow us on

ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಖ್ಯಾತಿ ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರನ್ನು ಆರಾಧಿಸುವವರು ವಿದೇಶದಲ್ಲೂ ಇದ್ದಾರೆ. ಹಲವು ದಶಕಗಳಿಂದ ಅವರು ಚಿತ್ರರಂಗಕ್ಕೆ ತಮ್ಮ ಕಲಾ ಸೇವೆ ನೀಡುತ್ತಾ ಬರುತ್ತಿದ್ದಾರೆ. 80ರ ವಯಸ್ಸಿನಲ್ಲೂ ಅಮಿತಾಭ್ ಅವರು ಬಣ್ಣದ ಲೋಕದಲ್ಲಿ ಬ್ಯುಸಿ ಇದ್ದಾರೆ ಎಂದರೆ ಅದು ಸಣ್ಣ ಮಾತಲ್ಲ. ಹಲವು ಅನಾರೋಗ್ಯ ಸಮಸ್ಯೆಗಳಿದ್ದರೂ ಅದನ್ನು ಮೆಟ್ಟಿ ನಿಂತಿದ್ದಾರೆ. ಅವರ ಬಗ್ಗೆ ತಾಲಿಬಾನ್​ ಅವರು ಪೋಸ್ಟ್ ಒಂದನ್ನು ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗುತ್ತಿದೆ.

‘ತಾಲಿಬಾನ್ ಪಿಆರ್​ ಡಿಪಾರ್ಟ್​ಮೆಂಟ್’ ಟ್ವಿಟರ್ ಖಾತೆ ಮೂಲಕ ಅಮಿತಾಭ್ ಬಚ್ಚನ್ ಇರುವ ಫೋಟೋ ಒಂದನ್ನು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್​ನಲ್ಲಿ ಅಮಿತಾಭ್ ಬಗ್ಗೆ ಬರೆಯಲಾಗಿದೆ. ‘ಅಮಿತಾಭ್ ಬಚ್ಚನ್ ಓರ್ವ ಭಾರತೀಯ ನಟ. ಪುರುಷತ್ವದ ಸಂಕೇತಕ್ಕೆ ಹೇಳಿಮಾಡಿಸಿದ ವ್ಯಕ್ತಿಯಾಗಿರುವ ಅವರನ್ನು ಅಫ್ಘಾನಿಸ್ತಾನದವರು ಇಷ್ಟಪಡುತ್ತಾರೆ. ಅವರು 1980ರಲ್ಲಿ ನಮ್ಮ ಭವ್ಯವಾದ ರಾಷ್ಟ್ರಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದ ಅಧ್ಯಕ್ಷ ನಜೀಬುಲ್ಲಾ ಅವರು ಅಮಿತಾಭ್ ಅವರನ್ನು ಗೌರವಿಸಿದ್ದರು’ ಎಂದು ಟ್ವಿಟರ್​ನಲ್ಲಿ ಬರೆಯಲಾಗಿದೆ.

ಈ ಪೋಸ್ಟ್​ಗೆ ಚಿತ್ರವಿಚಿತ್ರ ಕಮೆಂಟ್​ಗಳು ಬಂದಿವೆ. ಮಲಯಾಳಂ ಭಾಷೆಯಲ್ಲಿ ವ್ಯಕ್ತಿಯೋರ್ವ ಕಮೆಂಟ್ ಮಾಡಿದ್ದಾನೆ. ಇದಕ್ಕೆ ತಾಲಿಬಾನ್ ಪಿಆರ್ ತಂಡ ಉತ್ತರಿಸಿದೆ. ‘ಏನಿದು ಡ್ರಾಯಿಂಗ್’ ಎಂದು ಅವರು ಬರೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರು ವಿಚಿತ್ರ ಭಂಗಿಯಲ್ಲಿರುವ ಫೋಟೋನ ಪೋಸ್ಟ್ ಮಾಡಲಾಗಿದೆ. ‘ನಮ್ಮ ಭಾಯಿಜಾನ್ ತಾಲಿಬಾನ್ ಸೇರಬಹುದೇ’ ಎಂದು ಕೇಳಲಾಗಿದೆ. ಇದಕ್ಕೆ ಉತ್ತರಿಸಿರೋ ಪಿಆರ್ ತಂಡ, ‘ಇಲ್ಲ ಇಲ್ಲ. ಅವರು ಸಲಿಂಗಕಾಮಿ. ಅವರ ಬಾಡಿ ಲಾಂಗ್ವೇಜ್ ನೋಡಿ’ ಎಂದಿದ್ದಾರೆ.

ಇದನ್ನೂ ಓದಿ: ಒಂದೇ ಸಿನಿಮಾದಲ್ಲಿ ರಜನಿಕಾಂತ್​-ಅಮಿತಾಭ್​ ಬಚ್ಚನ್​; 32 ವರ್ಷಗಳ ಬಳಿಕ ದಿಗ್ಗಜರ ಸಂಗಮ

ಅಮಿತಾಭ್ ಬಚ್ಚನ್ ನಟನೆಯ ‘ಖುದಾ ಗವಾ’ ಸಿನಿಮಾ 1992 ರಿಲೀಸ್ ಆಯಿತು. ಈ ಚಿತ್ರದ ಶೂಟಿಂಗ್​ಗಾಗಿ ಅವರು ಅಪಘಾನಿಸ್ತಾನಕ್ಕೆ ತೆರಳಿದ್ದರು. ಅಪಘಾನಿಸ್ತಾನ ಸದ್ಯ ತಾಲಿಬಾನ್ ವಶದಲ್ಲಿದೆ. ‘ಕಾಬುಲ್ ಎಕ್ಸ್​ಪ್ರೆಸ್’ ಸೇರಿ ಬಾಲಿವುಡ್​ನ ಹಲವು ಚಿತ್ರಗಳು ಇಲ್ಲಿ ಶೂಟ್ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ