AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಸಿನಿಮಾದಲ್ಲಿ ರಜನಿಕಾಂತ್​-ಅಮಿತಾಭ್​ ಬಚ್ಚನ್​; 32 ವರ್ಷಗಳ ಬಳಿಕ ದಿಗ್ಗಜರ ಸಂಗಮ

Thalaivar 170: ರಜನಿಕಾಂತ್​ ಮತ್ತು ಅಮಿತಾಭ್​ ಬಚ್ಚನ್​ ಅವರು ‘ಹಮ್​’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ 1991ರಲ್ಲಿ ತೆರೆಕಂಡಿತ್ತು. ಅದಾಗಿ ಬರೋಬ್ಬರಿ 32 ವರ್ಷಗಳು ಕಳೆದ ಬಳಿಕ ಅವರಿಬ್ಬರು ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇಷ್ಟು ವರ್ಷಗಳ ಸುದೀರ್ಘ ಗ್ಯಾಪ್​ನ ನಂತರ ‘ತಲೈವರ್​ 170’ ಚಿತ್ರದಲ್ಲಿ ದಿಗ್ಗಜ ನಟರ ಸಂಗಮ ಆಗುತ್ತಿದೆ.

ಒಂದೇ ಸಿನಿಮಾದಲ್ಲಿ ರಜನಿಕಾಂತ್​-ಅಮಿತಾಭ್​ ಬಚ್ಚನ್​; 32 ವರ್ಷಗಳ ಬಳಿಕ ದಿಗ್ಗಜರ ಸಂಗಮ
ಅಮಿತಾಭ್​ ಬಚ್ಚನ್​, ರಜನಿಕಾಂತ್​
ಮದನ್​ ಕುಮಾರ್​
|

Updated on: Oct 03, 2023 | 6:45 PM

Share

ಭಾರತೀಯ ಚಿತ್ರರಂಗದಲ್ಲಿ ಅಮಿತಾಭ್​ ಬಚ್ಚನ್​ (Amitabh Bachchan) ಮತ್ತು ರಜನಿಕಾಂತ್​ ಅವರು ದಿಗ್ಗಜ ನಟರಾಗಿ ಗುರುತಿಸಿಕೊಂಡಿದ್ದಾರೆ. ಹಿಂದಿ ಸಿನಿಮಾಗಳಲ್ಲಿ ಅಮಿತಾಭ್​ ಬಚ್ಚನ್​ ಮಿಂಚಿದರೆ, ತಮಿಳು ಚಿತ್ರರಂಗದಲ್ಲಿ ರಜನಿಕಾಂತ್​ (Rajinikanth) ಅಬ್ಬರಿಸುತ್ತಿದ್ದಾರೆ. ಈಗ ಈ ಲೆಜೆಂಡರಿ ಕಲಾವಿದರು ‘ತಲೈವರ್​ 170’ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲು ರೆಡಿ ಆಗಿದ್ದಾರೆ. ಆ ಬಗ್ಗೆ ನಿರ್ಮಾಣ ಸಂಸ್ಥೆ ‘ಲೈಕಾ ಪ್ರೊಡಕ್ಷನ್ಸ್​’ ಕಡೆಯಿಂದ ದೊಡ್ಡ ನ್ಯೂಸ್​ ಹೊರಬಿದ್ದಿದೆ. ರಜನಿಕಾಂತ್​ ನಟನೆಯ 170ನೇ ಸಿನಿಮಾ ಇದಾಗಿದ್ದು, ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ತಾತ್ಕಾಲಿಕವಾಗಿ ‘ತಲೈವರ್​ 170’ (Thalaivar 170) ಎಂದು ಈ ಸಿನಿಮಾವನ್ನು ಕರೆಯಲಾಗುತ್ತಿದೆ.

ರಜನಿಕಾಂತ್​ ಮತ್ತು ಅಮಿತಾಭ್​ ಬಚ್ಚನ್​ ಅವರು ‘ಹಮ್​’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಆ ಸಿನಿಮಾ 1991ರಲ್ಲಿ ತೆರೆಕಂಡಿತ್ತು. ಅದಾಗಿ ಬರೋಬ್ಬರಿ 32 ವರ್ಷಗಳು ಕಳೆದ ಬಳಿಕ ಅವರಿಬ್ಬರು ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇಷ್ಟು ವರ್ಷಗಳ ಸುದೀರ್ಘ ಗ್ಯಾಪ್​ನಲ್ಲಿ ಅವರಿಬ್ಬರು ಒಂದೇ ಸಿನಿಮಾದಲ್ಲಿ ನಟಿಸದೇ ಇರಬಹುದು. ಆದರೆ ಪರಸ್ಪರರ ಸಿನಿಮಾಗಳಿಗೆ ಶುಭ ಕೋರುತ್ತಾ, ಬೆಂಬಲವಾಗಿ ನಿಂತಿದ್ದರು. ರಜನಿಕಾಂತ್​ ನಟನೆಯ ‘ರೋಬೋ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಅಮಿತಾಭ್​ ಬಚ್ಚನ್​ ಭಾಗಿ ಆಗಿದ್ದರು.

‘ಹಮ್​’ ಮಾತ್ರವಲ್ಲದೇ 1983ರಲ್ಲಿ ಬಿಡುಗಡೆ ಆದ ‘ಅಂದಾ ಕಾನೂನ್​’ ಸಿನಿಮಾದಲ್ಲಿ ರಜನಿಕಾಂತ್​ ಮತ್ತು ಅಮಿತಾಭ್​ ಬಚ್ಚನ್​ ಅವರು ತೆರೆ ಹಂಚಿಕೊಂಡಿದ್ದರು. ಅಲ್ಲದೇ, 1985ರಲ್ಲಿ ಬಿಡುಗಡೆ ಆದ ‘ಗಿರಫ್ತಾರ್​’ ಸಿನಿಮಾದಲ್ಲೂ ಅವರಿಬ್ಬರು ಒಟ್ಟಿಗೆ ನಟಿಸಿದ್ದರು. ಈಗ ರಜನಿಕಾಂತ್​ ನಟನೆಯ ‘ತಲೈವರ್​ 170’ ಸಿನಿಮಾದ ಚಿತ್ರತಂಡಕ್ಕೆ ಅಮಿತಾಭ್​ ಬಚ್ಚನ್​ ಅವರನ್ನು ಸ್ವಾಗತಿಸಲಾಗಿದೆ. ಈ ಹೈ-ವೋಲ್ಟೇಜ್​ ಕಾಂಬಿನೇಷನ್​ ಕಾರಣದಿಂದ ಈ ಸಿನಿಮಾ ಮೇಲಿನ ನಿರೀಕ್ಷೆ ಜೋರಾಗಿದೆ.

ಇದನ್ನೂ ಓದಿ: ‘ಜೈಲರ್’ ಬಳಿಕ ದೊಡ್ಡ ಘೋಷಣೆ ಮಾಡಿದ ರಜನಿಕಾಂತ್​; ಲೋಕೇಶ್​ ಕನಗರಾಜ್​ ಜತೆ ಸಿನಿಮಾ

ಈ ವರ್ಷ ತೆರೆಕಂಡ ‘ಜೈಲರ್​’ ಸಿನಿಮಾದಿಂದ ರಜನಿಕಾಂತ್​ ಅವರಿಗೆ ಭರ್ಜರಿ ಸಕ್ಸಸ್​ ಸಿಕ್ಕಿದೆ. ಅವರ ವೃತ್ತಿಜೀವನಕ್ಕೆ ಹೊಸ ಚಾರ್ಮ್​ ಬಂದಿದೆ. ರಜನಿಕಾಂತ್​, ಅಮಿತಾಭ್​ ಬಚ್ಚನ್​ ಮಾತ್ರವಲ್ಲದೇ ಫಹಾದ್ ಫಾಸಿಲ್​, ರಾಣಾ ದಗ್ಗುಬಾಟಿ, ಮಂಜು ವಾರಿಯರ್​ ಕೂಡ ‘ತಲೈವರ್​ 170’ ಸಿನಿಮಾದಲ್ಲಿ ನಟಿಸುತ್ತಿರುವುರಿಂದ ಅಭಿಮಾನಿಗಳ ಮನದಲ್ಲಿ ಕುತೂಹಲ ಹೆಚ್ಚಾಗಿದೆ. ಈ ಸಿನಿಮಾಗೆ ‘ಜೈ ಭೀಮ್​’ ಖ್ಯಾತಿಯ ಟಿ.ಜೆ. ಜ್ಞಾನವೇಲ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅನಿರುದ್ಧ್​ ರವಿಚಂದರ್​ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More