AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋಲೀಸರಿಂದ ದೌರ್ಜನ್ಯ: ಖ್ಯಾತ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಆರೋಪ

Britney Spears: ಗಾಯಕಿ ಬ್ರಿಟ್ನಿ ಸ್ಪಿಯರ್ಸ್​ ಪೊಲೀಸರು ಹಾಗೂ ಕೆಲವು ಅಭಿಮಾನಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನನ್ನ ಮನೆಯಲ್ಲಿಯೇ ನಾನು ಸತತವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದೇನೆ ಎಂದಿದ್ದಾರೆ.

ಪೋಲೀಸರಿಂದ ದೌರ್ಜನ್ಯ: ಖ್ಯಾತ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಆರೋಪ
ಮಂಜುನಾಥ ಸಿ.
|

Updated on: Oct 03, 2023 | 8:03 PM

Share

ಹಾಲಿವುಡ್​ನ (Hollywood) ಜನಪ್ರಿಯ ಗಾಯಕಿ, ನಟಿ ಬ್ರಿಟ್ನಿ ಸ್ಪಿಯರ್ಸ್​ ಸುದೀರ್ಘ ಹೋರಾಟದ ಬಳಿಕ ಕಳೆದ ವರ್ಷವಷ್ಟೆ ತಮ್ಮ ತಂದೆಯಿಂದ ಸ್ವಾತಂತ್ರ್ಯ ಪಡೆದುಕೊಂಡು ಸ್ವತಂತ್ರ್ಯವಾಗಿ ಬದುಕಲು ಆರಂಭಿಸಿದ್ದಾರೆ. ಆದರೆ ಇತ್ತೀಚೆಗೆ ಮತ್ತೆ ತಮ್ಮದೇ ಮನೆಯಲ್ಲಿ ತಾವು ಹಲವು ಗಂಟೆಗಳ ಕಾಲ ದೌರ್ಜನ್ಯ ಎದುರಿಸಿದ್ದಾಗಿ ಬ್ರಿಟ್ನಿ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಕಾರಣ ಇನ್​ಸ್ಟಾಗ್ರಾಂನಲ್ಲಿ ಬ್ರಿಟ್ನಿ ಅಪ್​ಲೋಡ್ ಮಾಡಿದ್ದ ಒಂದು ವಿಡಿಯೋ.

ಕನ್​ಸರ್ವೇಷನ್​ನಿಂದ 2021ರಲ್ಲಿ ಮುಕ್ತಿ ಪಡೆದ ಬಳಿಕ ಸ್ವತಂತ್ರ್ಯವಾಗಿ ಬಾಯ್​ಫ್ರೆಂಡ್​ ಜೊತೆ ವಾಸಿಸುತ್ತಿರುವ ಬ್ರಿಟ್ನಿ, ಇನ್​ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿದ್ದರು. ಬಿಕಿನಿ ಧರಿಸಿ ಡ್ಯಾನ್ಸ್ ಮಾಡುವ ವಿಡಿಯೋಗಳನ್ನು ಸತತವಾಗಿ ಅಪ್​ಲೋಡ್ ಮಾಡುತ್ತಿದ್ದರು. ಹಾಗೆಯೇ ಇತ್ತೀಚೆಗೆ ಎರಡು ಚಾಕುವನ್ನು ಕೈಯಲ್ಲಿ ಹಿಡಿದುಕೊಂಡು ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಅಪ್​ಲೋಡ್ ಮಾಡಿದ್ದರು.

ಈ ವಿಡಿಯೋ ನೋಡಿದ ಹಲವರು ಬ್ರಿಟ್ನಿಯ ಈ ಹಿಂದಿನ ಮಾನಸಿಕ ಸಮಸ್ಯೆಯನ್ನು ನೆನಪಿಸಿಕೊಂಡು ಆತಂಕ ವ್ಯಕ್ತಪಡಿಸಿದ್ದರು. ಬ್ರಿಟ್ನಿ ಸ್ಪಿಯರ್ಸ್ ಈ ಹಿಂದೆ ಮಾನಸಿಕ ಸಮಸ್ಯೆಯಿಂದ ಬಳಲಿದ್ದರು, ಈಗ ಚಾಕು ಹಿಡಿದುಕೊಂಡು ನೃತ್ಯ ಮಾಡಿದ್ದಾರೆ. ಅವರು ತಮಗೆ ತಾವೇ ಹಾನಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದಿದ್ದರು. ಅಂತೆಯೇ ಕೆಲವರು ಪೊಲೀಸರಿಗೂ ಈ ವಿಷಯದಲ್ಲಿ ತನಿಖೆ ನಡೆಸುವಂತೆ ಒತ್ತಾಯಸಿದ್ದರು.

ಇದನ್ನೂ ಓದಿ:21 ವರ್ಷದ ಮಹಿಳೆಯನ್ನು ಪೋಷಕರ ವಶದಿಂದ ಬಿಡುಗಡೆಗಾಗಿ ಹೇಬಿಯಸ್ ಮನವಿ; ಅಮೆರಿಕದಲ್ಲಿ ಬ್ರಿಟ್ನಿ ಸ್ಪಿಯರ್ಸ್ ಪ್ರಕರಣವನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್

ಅಂತೆಯೇ ಪೊಲೀಸರು ಸಹ ಬ್ರಿಟ್ನಿ ಸ್ಪಿಯರ್ಸ್ ಮನೆಗೆ ಹೋಗಿ ಬ್ರಿಟ್ನಿಯೊಟ್ಟಿಗೆ ಕೆಲವು ಗಂಟೆಗಳ ಕಾಲ ಪ್ರಶ್ನೋತ್ತರ ನಡೆಸಿದ್ದರು. ವಿಡಿಯೋದಲ್ಲಿ ಬ್ರಿಟ್ನಿ ಹಿಡಿದಿದ್ದಿದ್ದು ನಿಜವಾದ ಚಾಕುಗಳನ್ನಲ್ಲ, ಬದಲಗೆ ನಕಲಿ ಚಾಕುಗಳನ್ನು ಎಂದು ಖಾತ್ರಿಪಡಿಸಿಕೊಂಡಿದ್ದರು. ಘಟನೆಯ ಬಳಿಕ ಇನ್​ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಬ್ರಿಟ್ನಿ ನನ್ನ ಮನೆಯಲ್ಲಿಯೇ ನಾನು ಕೆಲವು ಗಂಟೆಗಳ ಕಾಲ ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾದೆ ಎಂದಿದ್ದಾರೆ.

”ನನ್ನ ತಂಡದವರು ಲಾಸ್ ಎಂಜಲ್ಸ್​ನ ನಕಲಿ ವಸ್ತುಗಳನ್ನು ಮಾರುವ ಅಂಗಡಿಯೊಂದರಿಂದ ಬಾಡಿಗೆಗೆ ತಂದಿದ್ದರು. ಅದನ್ನು ಹಿಡಿದುಕೊಂಡು ನಾನು ನೃತ್ಯ ಮಾಡಿದ್ದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಪೊಲೀಸರನ್ನು ಕರೆಯುವ ಅಗತ್ಯವೂ ಇಲ್ಲ. ನಾನು ನನ್ನ ನೆಚ್ಚಿನ ಫರ್ಮಾಮರ್ ಶಕೀರಾರ ನೃತ್ಯವನ್ನು ನಕಲು ಮಾಡಲು ಪ್ರಯತ್ನಿಸಿದ್ದೆ ಅಷ್ಟೆ” ಎಂದು ಪೋಸ್ಟ್​ನಲ್ಲಿ ಬ್ರಿಟ್ನಿ ಬರೆದುಕೊಂಡಿದ್ದರು. ಹಾಗಿದ್ದರೂ ಸಹ ಕೆಲವರು ಪೊಲೀಸರು ಬ್ರಿಟ್ನಿಯನ್ನು ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದ್ದರು.

ಮತ್ತೊಂದು ಪೋಸ್ಟ್​ನಲ್ಲಿ, ”ಪೊಲೀಸರು ನನ್ನ ಮನೆಗೆ ಬಂದಿದ್ದರು. ನನ್ನ ತಂಡದವರು ಸ್ಪಷ್ಟನೆ ನೀಡಿದರೂ ಸಹ ಕೇಳದೆ, ನನ್ನೊಟ್ಟಿಗೆ ಮಾತನಾಡಿಯೇ ತೆರಳುವುದಾಗಿ ಹೇಳಿದರು. ಅಂತೆಯೇ ನಾನು ಹೋಗಿ ಮಾತನಾಡಿ ಸ್ಪಷ್ಟನೆ ನೀಡಿದೆ. ನನ್ನ ಮನೆಯಲ್ಲಿಯೇ ನಾನು ಸತತವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದೇನೆ. ಇದು ಸಾಕಾಗಿ ಹೋಗಿದೆ” ಎಂದಿದ್ದಾರೆ ಬ್ರಿಟ್ನಿ.

ಬ್ರಿಟ್ನಿ ಸ್ಪಿಯರ್ಸ್ ಸತತ 14 ವರ್ಷ ತನ್ನ ತಂದೆ ಹಾಗೂ ಕೆಲವು ವಕೀಲರ ನಿಗಾವಣೆಯಲ್ಲಿ ಜೀವನ ಕಳೆದಿದ್ದಾರೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಬ್ರಿಟ್ನಿಯನ್ನು ನ್ಯಾಯಾಲಯವು ಅವರ ತಂದೆ ಹಾಗೂ ಕೆಲವು ವಕೀಲರ ಸುಪರ್ದಿಗೆ ಒಪ್ಪಿಸಿತ್ತು. ಕೊನೆಗೆ 2021ರಲ್ಲಿ ಬ್ರಿಟ್ನಿಗೆ ತಂದೆಯ ನಿಗಾವಣೆಯಿಂದ ಮುಕ್ತಿ ಸಿಕ್ಕಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ