Tamannaah Bhatia: ಅಕ್ರಮವಾಗಿ ಐಪಿಎಲ್ ಪ್ರಸಾರ ಮಾಡಿದ ಆ್ಯಪ್​ಗೆ ತಮನ್ನಾ ಪ್ರಮೋಷನ್​; ಸಿಕ್ತು ನೋಟಿಸ್

|

Updated on: Apr 25, 2024 | 10:59 AM

2023ರ ಐಪಿಎಲ್ ಒಟಿಟಿ ಹಕ್ಕು ಜಿಯೋ ಸಿನಿಮಾ ಬಳಿ ಇತ್ತು. ಯಾವುದೇ ಬ್ರಾಡಕಾಸ್ಟಿಂಗ್ ಹಕ್ಕು ಪಡೆಯದೇ ಆ ವರ್ಷ ಐಪಿಎಲ್​​ನ ಫೇರ್​ಪ್ಲೇ ಆ್ಯಫ್​ನಲ್ಲಿ ಪ್ರಸಾರ ಮಾಡಲಾಗಿತ್ತು. ಇದರಿಂದ ಅಧಿಕೃತವಾಗಿ ಪ್ರಸಾರ ಹಕ್ಕು ಪಡೆದ ಜಿಯೋ ಸಿನಿಮಾಗೆ ಸಾಕಷ್ಟು ನಷ್ಟ ಆಗಿತ್ತು. ಈ ಆ್ಯಪ್ ಪ್ರಚಾರದಲ್ಲಿ ತಮನ್ನಾ ಭಾಗಿ ಆಗಿದ್ದರು.

Tamannaah Bhatia: ಅಕ್ರಮವಾಗಿ ಐಪಿಎಲ್ ಪ್ರಸಾರ ಮಾಡಿದ ಆ್ಯಪ್​ಗೆ ತಮನ್ನಾ ಪ್ರಮೋಷನ್​; ಸಿಕ್ತು ನೋಟಿಸ್
ತಮನ್ನಾ
Follow us on

ನಟಿ ತಮನ್ನಾ ಭಾಟಿಯಾ (Tamannaah Bhatia) ಅವರಿಗೆ ಮಹಾರಾಷ್ಟ್ರ ಸೈಬರ್ ಇಲಾಖೆಯವರು ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಅಕ್ರಮವಾಗಿ ಐಪಿಎಲ್​ನ ಪ್ರಸಾರ ಮಾಡಿದ ಆರೋಪ ಹೊಂದಿರುವ ‘ಫೇರ್​​ಪ್ಲೇ’ ಆ್ಯಪ್​ನ ಪ್ರಚಾರದಲ್ಲಿ ನಟಿ ತಮನ್ನಾ ಭಾಟಿಯಾ ಕೂಡ ಭಾಗಿ ಆಗಿದ್ದರು ಎನ್ನಲಾಗಿದೆ. ಈ ಆ್ಯಪ್​ ಮಹದೇವ್ ಆನ್​ಲೈನ್ ಗೇಮಿಂಗ್​ ಆ್ಯಪ್​ನ ಅಂಗಸಂಸ್ಥೆ ಆಗಿದೆ. ಇದರಿಂದ ತಮನ್ನಾ ಅವರಿಗೆ ತೊಂದರೆ ಆಗೋ ಸಾಧ್ಯತೆ ಇದೆ.

ಸೆಲೆಬ್ರಿಟಿಗಳು ಹಲವು ಪ್ರಾಡಕ್ಟ್​ಗಳ ಪ್ರಚಾರ ಮಾಡುತ್ತಾರೆ. ಅನೇಕ ಬಾರಿ ತಾವು ಪ್ರಮೋಷನ್ ಮಾಡುತ್ತಿರುವ ಸಂಸ್ಥೆ ಎಂಥದ್ದು, ಅದರ ಹಿನ್ನೆಲೆ ಏನು ಎಂಬುದನ್ನು ತಿಳಿಯದೇ ದುಡ್ಡಿದಾಗಿ ಜಾಹೀರಾತು ಮಾಡಿಕೊಡುತ್ತಾರೆ. ಸಂಸ್ಥೆಗಳು ಈ ರೀತಿ ತೊಂದರೆಗೆ ಸಿಲುಕಿದಾಗ ಅದರ ಪ್ರಚಾರ ಮಾಡಿದವರೂ ವಿಚಾರಣೆ ಎದುರಿಸಬೇಕಾಗುತ್ತದೆ. ನಟಿ ತಮನ್ನಾ ವಿಚಾರದಲ್ಲಿ ಈಗ ಆಗಿರುವುದು ಹಾಗೇಯೇ.

2023ರ ಐಪಿಎಲ್ ಒಟಿಟಿ ಹಕ್ಕು ಜಿಯೋ ಸಿನಿಮಾ ಬಳಿ ಇತ್ತು. ಯಾವುದೇ ಬ್ರಾಡಕಾಸ್ಟಿಂಗ್ ಹಕ್ಕು ಪಡೆಯದೇ ಆ ವರ್ಷ ಐಪಿಎಲ್​​ನ ಫೇರ್​ಪ್ಲೇ ಆ್ಯಫ್​ನಲ್ಲಿ ಪ್ರಸಾರ ಮಾಡಲಾಗಿತ್ತು. ಇದರಿಂದ ಅಧಿಕೃತವಾಗಿ ಪ್ರಸಾರ ಹಕ್ಕು ಪಡೆದ ಜಿಯೋ ಸಿನಿಮಾಗೆ ಸಾಕಷ್ಟು ನಷ್ಟ ಆಗಿತ್ತು. ಹೀಗಾಗಿ, ಫೇರ್​ಪ್ಲೇ ಆ್ಯಪ್ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.

ಕೇವಲ ತಮನ್ನಾ ಮಾತ್ರವಲ್ಲದೆ ಗಾಯಕ ಬಾದ್​ಶಾ, ನಟ ಸಂಜಯ್ ದತ್​ಗೂ ಸಮನ್ಸ್ ನೀಡಲಾಗಿದೆ. ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವುದರಿಂದ ವಿಚಾರಣೆಗೆ ಹಾಜರಾಗಲು ಮತ್ತಷ್ಟು ಸಮಯ ಕೇಳಿದ್ದಾರೆ. ನಟಿ ತಮನ್ನಾ ಕೂಡ ಸದ್ಯ ಬ್ಯುಸಿ ಇದ್ದಾರೆ. ಹೀಗಾಗಿ, ಅವರು ವಿಚಾರಣೆಗೆ ಹೆಚ್ಚಿನ ಸಮಯ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ‘ಅವರ ಜತೆ ಹಸಿಬಿಸಿ ದೃಶ್ಯ ನೋಡುತ್ತಿರಲಿಲ್ಲ, ನನಗೆ ಇರಿಸುಮುರುಸು ಆಗುತ್ತಿತ್ತು’: ತಮನ್ನಾ

2023 ನಟಿ ತಮನ್ನಾಗೆ ಆಶಾದಾಯಕವಾಗಿತ್ತು. ‘ಲಸ್ಟ್ ಸ್ಟೋರಿಸ್ 2’ ಹಾಗೂ ‘ಜೈಲರ್’ ಸಿನಿಮಾಗಳಲ್ಲಿ ನಟಿಸಿ ಅವರು ಗಮನ ಸೆಳೆದರು. ಈ ವರ್ಷ ಅವರು ‘ಅರಣ್​ಮಣೈ 4’, ‘ವೇದಾ’, ‘ಸ್ತ್ರೀ 2’, ‘ಒಡೇಲಾ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳ ಬಗ್ಗೆ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.