ನಟ ಆಮಿರ್ ಖಾನ್ ಅವರು ತಮ್ಮ ವೃತ್ತಿಜೀವನದಲ್ಲಿ ಗಮನಾರ್ಹ ಸಿನಿಮಾಗಳನ್ನು ನೀಡಿದ್ದಾರೆ. ಅವರ ಪ್ರತಿ ಸಿನಿಮಾದಲ್ಲಿ ಒಂದಿಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ. 2009ರಲ್ಲಿ ಬಿಡುಗಡೆ ಆದ ‘3 ಈಡಿಯಟ್ಸ್’ ಸಿನಿಮಾ ಸೂಪರ್ ಹಿಟ್ ಆಗಿದ್ದೂ ಅಲ್ಲದೇ, ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ರಾಜ್ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದ ಆ ಸಿನಿಮಾ ಈಗಲೂ ಅಭಿಮಾನಿಗಳ ಫೇವರಿಟ್ ಲಿಸ್ಟ್ನಲ್ಲಿ ಇದೆ. ಅಲ್ಲದೇ, ಆಸ್ಕರ್ ಪ್ರಶಸ್ತಿ ನೀಡುವ ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸಸ್’ ಸಂಸ್ಥೆಯು ಈ ಸಿನಿಮಾದ ಒಂದು ದೃಶ್ಯವನ್ನು ಮೆಚ್ಚಿಕೊಂಡಿದೆ.
‘3 ಈಡಿಯಟ್ಸ್’ ಸಿನಿಮಾದಲ್ಲಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ವಿಡಂಬನೆ ಇದೆ. ಆ ಚಿತ್ರದಲ್ಲಿ ಬರುವ ಒಂದು ಎಕ್ಸಾಂ ದೃಶ್ಯವನ್ನು ‘ಅಕಾಡೆಮಿ’ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪರೀಕ್ಷೆ ನಡೆಯುತ್ತಿರುವಾಗ ಆಮಿರ್ ಖಾನ್, ಶರ್ಮನ್ ಜೋಶಿ ಮತ್ತು ಆರ್. ಮಾಧವನ್ ಅವರು 30 ನಿಮಷ ತಡವಾಗಿ ಎಕ್ಸಾಂ ಹಾಲ್ಗೆ ಬರುತ್ತಾರೆ. ಅವಧಿ ಮುಗಿದ ಬಳಿಕವೂ ಪರೀಕ್ಷೆ ಬರುತ್ತಾರೆ. ಹಾಗಾಗಿ ಉತ್ತರ ಪತ್ರಿಕೆಯನ್ನು ಸ್ವೀಕರಿಸಲು ಮೇಲ್ವಿಚಾರಕರು ಒಪ್ಪುವುದಿಲ್ಲ. ಆಗ ಆಮಿರ್ ಖಾನ್ ಒಂದು ಉಪಾಯ ಮಾಡ್ತಾರೆ. ‘ನಿಮಗೆ ನಾವು ಯಾರು ಅಂತ ಗೊತ್ತಾ? ನಮ್ಮ ರೋಲ್ ನಂಬರ್ ಗೊತ್ತಾ’ ಎಂದು ಎಚ್ಚರಿಕೆ ನೀಡುವ ಧ್ವನಿಯಲ್ಲಿ ಪ್ರಶ್ನಿಸುತ್ತಾರೆ. ‘ಇಲ್ಲ’ ಎಂಬ ಉತ್ತರ ಮೇಲ್ವಿಚಾರಕರ ಕಡೆಯಿಂದ ಬರುತ್ತದೆ. ಆಗ ಬೇರೆಯವರ ಉತ್ತರ ಪತ್ರಿಕೆಗಳ ಜೊತೆಗೆ ತಮ್ಮ ಉತ್ತರ ಪತ್ರಿಕೆಯನ್ನು ಮಿಕ್ಸ್ ಮಾಡಿ ಈ ಸ್ನೇಹಿತರು ಓಡಿ ಹೋಗುತ್ತಾರೆ. ಈ ಸೀನ್ ಸಖತ್ ಫನ್ನಿ ಆಗಿದೆ.
‘ಇಲ್ಲಿ ರಾಂಚೋ ಸಮಯಪ್ರಜ್ಞೆ ಶೇಕಡ ನೂರರಷ್ಟಿದೆ’ ಎಂಬ ಕ್ಯಾಪ್ಷನ್ನೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಜೊತೆಗೆ ಸಿನಿಮಾದ ಬಗ್ಗೆ ವಿವರಗಳನ್ನು ಬರೆಯಲಾಗಿದೆ. ಇದು ಆಮಿರ್ ಖಾನ್ ಅಭಿಮಾನಿಗಳಿಗೆ ಖುಷಿ ನೀಡಿದೆ. ‘ಈ ಸಿನಿಮಾಗೆ ಆಸ್ಕರ್ ಪಡೆಯುವ ಅರ್ಹತೆ ಇತ್ತು’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ‘ಆಮಿರ್ ಖಾನ್ ಸಿನಿಮಾಗಳು ಯಾವಾಗಲೂ ಚೆನ್ನಾಗಿರುತ್ತವೆ’, ‘ಬಾಲಿವುಡ್ನಲ್ಲಿ ನಿರ್ಮಾಣವಾದ ಅತ್ಯುತ್ತಮ ಸಿನಿಮಾಗಳಲ್ಲಿ ಇದು ಕೂಡ ಒಂದು’ ಎಂಬ ಕಮೆಂಟ್ಗಳು ಕೂಡ ಬಂದಿವೆ.
ಇದನ್ನೂ ಓದಿ: ಆಮಿರ್ ಖಾನ್ ಮಗ ಜುನೈದ್ ಖಾನ್ಗೆ ಶ್ರೀದೇವಿಯ 2ನೇ ಮಗಳು ಖುಷಿ ಕಪೂರ್ ಜೋಡಿ
ಈ ಮೊದಲು ‘ಅಕಾಡೆಮಿ’ ಇನ್ಸ್ಟಾಗ್ರಾಮ್ ಖಾತೆಯಿಂದ ‘ಕಳಂಕ್’, ‘ಬಾಜಿರಾವ್ ಮಸ್ತಾನಿ’ ಸಿನಿಮಾಗಳ ದೃಶ್ಯಗಳನ್ನು ಕೂಡ ಹಂಚಿಕೊಳ್ಳಲಾಗಿತ್ತು. ‘ಭಾರತದ ಸಿನಿಮಾಗಳ ಬಗ್ಗೆ ಅಕಾಡೆಮಿಗೆ ಗೀಳು ಹಿಡಿದಿದೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.