‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ್ದು ‘ಬಾಹುಬಲಿ’ಗಿಂತಲೂ ದೊಡ್ಡ ಗೆಲುವು: ಇದು ಆಮಿರ್ ಖಾನ್ ಫಾರ್ಮುಲಾ

| Updated By: ರಾಜೇಶ್ ದುಗ್ಗುಮನೆ

Updated on: Apr 05, 2022 | 9:30 PM

ಆಮಿರ್ ಖಾನ್ ಅವರು ಬಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ನಟನೆ, ನಿರ್ಮಾಣದಲ್ಲಿ ಅವರು ತೊಡಗಿಕೊಂಡಿದ್ದಾರೆ. ಬಾಲಿವುಡ್​ಅನ್ನು ತುಂಬಾನೇ ಹತ್ತಿರದಿಂದ ಕಂಡಿದ್ದಾರೆ.  ಅವರು ಸಿನಿಮಾ ಯಶಸ್ಸು ಕಂಡಿದೆ ಅಥವಾ ಕಂಡಿಲ್ಲ ಎಂದು ಹೇಳಲು ತಮ್ಮದೇ ಫಾರ್ಮುಲಾ ಇಟ್ಟುಕೊಂಡಿದ್ದಾರೆ.

‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ್ದು ‘ಬಾಹುಬಲಿ’ಗಿಂತಲೂ ದೊಡ್ಡ ಗೆಲುವು: ಇದು ಆಮಿರ್ ಖಾನ್ ಫಾರ್ಮುಲಾ
ಬಾಹುಬಲಿ-ದಿ ಕಾಶ್ಮೀರ್ ಫೈಲ್ಸ್
Follow us on

‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾ (The Kashmir Files) ಬಾಲಿವುಡ್​ ಅಂಗಳದಲ್ಲಿ ಮಾಡಿದ ಸಾಧನೆ ತುಂಬಾನೇ ದೊಡ್ಡದು. ಈ ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ. ಈ ಚಿತ್ರವನ್ನು ಮೆಚ್ಚಿಕೊಂಡು ಎಲ್ಲರೂ ಹೊಗಳುತ್ತಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್​’ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 3.55 ಕೋಟಿ ರೂಪಾಯಿ. ಆದರೆ, ಈ ಚಿತ್ರದ ಬಾಕ್ಸ್​ ಆಫೀಸ್ ಕಲೆಕ್ಷನ್​ 200 ಕೋಟಿ ರೂಪಾಯಿ ದಾಟಿದೆ. ಈ ಸಿನಿಮಾ ಆರಂಭದಲ್ಲಿ 650 ಸ್ಕ್ರೀನ್​ಗಳಲ್ಲಿ ಮಾತ್ರ ತೆರೆಗೆ ಬಂದಿತ್ತು. ನಂತರ ಈ ಚಿತ್ರದ ಥಿಯೇಟರ್​ ಸಂಖ್ಯೆ 2,000ಕ್ಕೆ ವಿಸ್ತರಣೆ ಆಗಿತ್ತು. ಈ ಚಿತ್ರದ ಗೆಲುವು ‘ಬಾಹುಬಲಿ 2’ ಚಿತ್ರಕ್ಕಿಂತಲೂ ದೊಡ್ಡದು ಎನ್ನುತ್ತದೆ ಆಮಿರ್ ಖಾನ್​ (Aamir Khan) ಫಾರ್ಮುಲಾ.

ಆಮಿರ್ ಖಾನ್ ಅವರು ಬಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ನಟನೆ, ನಿರ್ಮಾಣದಲ್ಲಿ ಅವರು ತೊಡಗಿಕೊಂಡಿದ್ದಾರೆ. ಬಾಲಿವುಡ್​ಅನ್ನು ತುಂಬಾನೇ ಹತ್ತಿರದಿಂದ ಕಂಡಿದ್ದಾರೆ.  ಅವರು ಸಿನಿಮಾ ಯಶಸ್ಸು ಕಂಡಿದೆ ಅಥವಾ ಕಂಡಿಲ್ಲ ಎಂದು ಹೇಳಲು ತಮ್ಮದೇ ಫಾರ್ಮುಲಾ ಇಟ್ಟುಕೊಂಡಿದ್ದಾರೆ. ಚಿತ್ರದ ಯಶಸ್ಸನ್ನು ಅಳೆಯಲು ವಾರಾಂತ್ಯದ ಕಲೆಕ್ಷನ್​ ಹಾಗೂ ಸಿನಿಮಾದ ಒಟ್ಟೂ ಕಲೆಕ್ಷನ್​ ನಡುವೆ ಹೋಲಿಕೆ ಮಾಡಿ ನೋಡಬೇಕು ಎಂಬುದು ಆಮಿರ್ ಖಾನ್ ಅವರ ಲೆಕ್ಕಾಚಾರ.

‘ನನ್ನ ನಟನೆಯ ‘3 ಈಡಿಯಟ್ಸ್​’ ಸಿನಿಮಾ ಮೊದಲ ವಾರಾಂತ್ಯಕ್ಕೆ 40 ಕೋಟಿ ಗಳಿಕೆ ಮಾಡಿತ್ತು. ಈ ಚಿತ್ರದ ಒಟ್ಟೂ ಗಳಿಕೆ 202 ಕೋಟಿ ರೂಪಾಯಿ. ಅಂದರೆ, ವಾರಾಂತ್ಯದ ಕಲೆಕ್ಷನ್​ಗಿಂತ ಐದು ಪಟ್ಟು ಹೆಚ್ಚು ಈ ಸಿನಿಮಾ ಗಳಿಕೆ ಮಾಡಿತ್ತು. ಹೀಗಾಗಿ, ಈ ಚಿತ್ರ ಉತ್ತಮವಾಗಿದೆ ಎನ್ನಬಹುದು. ವಾರಾಂತ್ಯದಲ್ಲಿ 100 ಕೋಟಿ ಗಳಿಸಿ, ಸಿನಿಮಾದ ಒಟ್ಟೂ ಗಳಿಕೆ 200 ಕೋಟಿ ಎಂದರೆ, ಆ ಸಿನಿಮಾ ಉತ್ತಮವಾಗಿಲ್ಲ ಎಂದರ್ಥ’ ಎಂದು ಬಾಲಿವುಡ್​ ಹಂಗಾಮಕ್ಕೆ ನೀಡಿದ ಸಂದರ್ಶನದಲ್ಲಿ ಆಮಿರ್ ಖಾನ್ ಈ ಮೊದಲು ಹೇಳಿದ್ದರು. ಇದೇ ಫಾರ್ಮುಲಾ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೂ ಅನ್ವಯ ಮಾಡಲಾಗಿದೆ.

‘ದಿ ಕಾಶ್ಮೀರ್ ಫೈಲ್ಸ್​ ಸಿನಿಮಾ’ ಮೊದಲ ವಾರಂತ್ಯದಲ್ಲಿ 27.15 ಕೋಟಿ ರೂಪಾಯಿ ಗಳಿಸಿತ್ತು. ಈ ಚಿತ್ರದ ಒಟ್ಟೂ ಕಲೆಕ್ಷನ್​ 250ರ ಗಡಿ ಸಮೀಪಿಸಿದೆ. ಅಂದರೆ, ವಾರಾಂತ್ಯದ ಕಲೆಕ್ಷನ್​ಗಿಂತ  8.83 ಪಟ್ಟು ಹೆಚ್ಚು ಈ ಸಿನಿಮಾ ಗಳಿಕೆ ಮಾಡಿದೆ.

ಈ ಫಾರ್ಮುಲಾ ವಿಚಾರದಲ್ಲಿ, ‘ಪುಷ್ಪ’ (7.04), ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ (6.87), ಬಾಹುಬಲಿ: ದಿ ಬಿಗಿನಿಂಗ್​ (5.31) 3 ಈಡಿಯಟ್ಸ್​ (5) ರೇಟಿಂಗ್​ ಇದೆ.  ‘ಪುಷ್ಪ’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಆಮಿರ್ ಖಾನ್ ಅವರು ಈ ಫಾರ್ಮುಲಾ ಬಗ್ಗೆ ಹೇಳಿಕೊಂಡಿದ್ದರು.

ಇದನ್ನೂ ಓದಿ: ಸೀಕ್ರೇಟ್​ ಆಗಿ ಮತ್ತೊಂದು ಸಿನಿಮಾ ಶೂಟಿಂಗ್ ಮುಗಿಸಿದ ‘ದಿ ಕಾಶ್ಮೀರ್​ ಫೈಲ್ಸ್​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ

‘ದಿ ಕಾಶ್ಮೀರ್ ಫೈಲ್ಸ್​’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಬ್ರಿಟನ್ ಸಂಸತ್ತಿನಿಂದ ಆಹ್ವಾನ