ವೆಕೇಶನ್​ ಹೋಗೋ ಜಾಗದಲ್ಲಿ ಈ ಸೆಲೆಬ್ರಿಟಿಗಳು ಖರೀದಿಸಿದ್ದಾರೆ ಐಷಾರಾಮಿ ಬಂಗಲೆ; ಇಲ್ಲಿದೆ ವಿವರ

ಭಾರತ ಹಾಗ ವಿಶ್ವದ ನಾನಾ ಕಡೆಗಳಲ್ಲಿ ಮನೆ ಹೊಂದಿದ ಅನೇಕ ಸೆಲೆಬ್ರಿಟಿಗಳಿದ್ದಾರೆ. ಶಾರುಖ್ ಖಾನ್ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ಪ್ರಭಾಸ್ ಸೇರಿ ಅನೇಕರು ಈ ರೀತಿಯ ಮನೆ ಹೊಂದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ವೆಕೇಶನ್​ ಹೋಗೋ ಜಾಗದಲ್ಲಿ ಈ ಸೆಲೆಬ್ರಿಟಿಗಳು ಖರೀದಿಸಿದ್ದಾರೆ ಐಷಾರಾಮಿ ಬಂಗಲೆ; ಇಲ್ಲಿದೆ ವಿವರ
ವೆಕೇಶನ್​ ಹೋಗೋ ಜಾಗದಲ್ಲಿ ಈ ಸೆಲೆಬ್ರಿಟಿಗಳು ಖರೀದಿಸಿದ್ದಾರೆ ಐಷಾರಾಮಿ ಬಂಗಲೆ
Follow us
| Edited By: Rajesh Duggumane

Updated on: Nov 21, 2023 | 9:16 PM

ಸೆಲೆಬ್ರಿಟಿಗಳು ಒಮ್ಮೆ ಜನಪ್ರಿಯತೆ ಪಡೆದ ಬಳಿಕ ನಾನಾ ಕಡೆಗಳಿಂದ ಅವರಿಗೆ ಹಣ ಹರಿದು ಬರುತ್ತದೆ. ಆಗ ಅವರು ಐಷಾರಾಮಿ ಮನೆ ಖರೀದಿಸಲು ಆಸಕ್ತಿ ತೋರಿಸುತ್ತಾರೆ. ಈ ಮನೆ ಉಳಿದುಕೊಳ್ಳೋಕೆ ಆದರೆ, ರಜೆಯ ಮಜ ಕಳೆಯೋಕೆ ಮತ್ತೊಂದು ಮನೆ ಖರೀದಿ ಮಾಡಿರುತ್ತಾರೆ. ಭಾರತ ಹಾಗ ವಿಶ್ವದ ನಾನಾ ಕಡೆಗಳಲ್ಲಿ ಮನೆ ಹೊಂದಿದ ಅನೇಕ ಸೆಲೆಬ್ರಿಟಿಗಳಿದ್ದಾರೆ. ಶಾರುಖ್ ಖಾನ್ (Shah Rukh Khan), ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ಪ್ರಭಾಸ್ ಸೇರಿ ಅನೇಕರು ಈ ರೀತಿಯ ಮನೆ ಹೊಂದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಶಾರುಖ್ ಖಾನ್ ಹಾಗೂ ಗೌರಿ ಖಾನ್

ಶಾರುಖ್ ಖಾನ್ ಅವರು ಪವರ್ ಕಪಲ್​​ ಪೈಕಿ ಶಾರುಖ್ ಖಾನ್ ಹಾಗೂ ಗೌರಿ ಖಾನ್ ವಿಶ್ವದ ನಾನಾ ಕಡೆಗಳಲ್ಲಿ ಪ್ರಾಪರ್ಟಿ ಹೊಂದಿದ್ದಾರೆ. ಮುಂಬೈನಲ್ಲಿ ಮನ್ನತ್ ಹೆಸರಿನ ಮನೆ ಇದೆ. ಶಾರುಖ್ ಖಾನ್ ಅವರು ದುಬೈನ ಪಾಮ್ ಜುಮೇರಾದಲ್ಲಿ ಮನೆ ಹೊಂದಿದ್ದಾರೆ. ಇದು ಸಿಕ್ಸ್​ ಬೆಡ್​ರೂಂ ಮನೆ ಇದೆ. ಪ್ರೈವೇಟ್​ ಬೀಚ್​, ಬೀಚ್​ ಇದೆ. ದುಬೈಗೆ ತೆರಳಿದಾಗ ಅವರು ಇಲ್ಲಿಯೇ ಉಳಿದುಕೊಳ್ಳುತ್ತಾರೆ ಎನ್ನಲಾಗಿದೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಅವರು ಪನ್ವೇಲ್​​ನಲ್ಲಿ ಮನೆ ಹೊಂದಿದ್ದಾರೆ. ಅವರು ಆಗಾಗ ಇಲ್ಲಿಗೆ ಭೇಟಿ ನೀಡುತ್ತಾರೆ. ಅವರು ಕೊವಿಡ್ ಸಂದರ್ಭದಲ್ಲಿ ಸಂಪೂರ್ಣವಾಗಿ ಇಲ್ಲಿಯೇ ಕಳೆದಿದ್ದರು. ಅವರು ಟ್ರಾಕ್ಟರ್​ನಿಂದ ಗದ್ದೆ ಹೂಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಜಾಕ್ವೆಲಿನ ಫರ್ನಾಂಡಿಸ್ ಕೂಡ ಸಲ್ಲುಗೆ ಕಂಪನಿ ಕೊಟ್ಟಿದ್ದರು.

ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಲಿಬಾಗ್​ನಲ್ಲಿ ಮನೆ ಹೊಂದಿದ್ದಾರೆ. ಸಮಯ ಸಿಕ್ಕಾಗ ಅವರು ಪತ್ನಿ ಜೊತೆ ಇಲ್ಲಿಗೆ ಆಗಮಿಸುತ್ತಿದ್ದರು. ಅನುಷ್ಕಾ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ವಿರಾಟ್ ಅವರು ಬ್ರೇಕ್​ನಲ್ಲಿದ್ದಾರೆ. ಬಹುಶಃ ಅನುಷ್ಕಾ ಜೊತೆ ಅವರು ಇಲ್ಲಿಗೆ ಭೇಟಿ ನೀಡಬಹುದು.

ಕರೀನಾ ಕಪೂರ್​ ಹಾಗೂ ಸೈಫ್​ ಅಲಿ ಖಾನ್

ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ಈ ದಂಪತಿ ಸ್ವಿಜರ್​ಲೆಂಡ್​ನಲ್ಲಿ ಮನೆ ಹೊಂದಿದ್ದಾರೆ. ಆಗಾಗ ಕುಟುಂಬ ಹಾಗೂ ಫ್ಯಾಮಿಲಿ ಜೊತೆ ಸ್ವಿಜರ್​ಲೆಂಡ್​​ಗೆ ಭೇಟಿ ನೀಡುತ್ತಾ ಇರುತ್ತಾರೆ. ಇವರ ಫೇವರಿಟ್ ಪ್ರವಾಸಿ ಸ್ಥಳ ಇದು.

ಕಂಗನಾ ರಣಾವತ್

ಕಂಗನಾ ರಣಾವತ್ ಅವರು ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಮನೆ ಹೊಂದಿದ್ದಾರೆ. ಶೂಟಿಂಗ್​ನಿಂದ ಬ್ರೇಕ್ ಪಡೆದು ಅವರು ಆಗಾಗ ಇಲ್ಲಿಗೆ ತೆರಳುತ್ತಾರೆ. ಮನಾಲಿ ಫಾರ್ಮ್​ಹೌಸ್​ನ ಫೋಟೋ ಹಾಗೂ ವಿಡಿಯೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ.

ರಾಮ್ ಕಪೂರ್

ಬಾಲಿವುಡ್ ನಟ ರಾಮ್ ಕಪೂರ್ ಅವರು ಅಲಿಬಾಗ್​​ನಲ್ಲಿ ವಿಲ್ಲಾ ಹೊಂದಿದ್ದಾರೆ. ಇದರ ಮೌಲ್ಯ 20 ಕೋಟಿ ರೂಪಾಯಿ ಎನ್ನಲಾಗಿದೆ. ಪತ್ನಿ ಗೌತಮಿ ಕಪೂರ್​ ಜೊತೆ ಅವರು ಆಗಾಗ ಭೇಟಿ ನೀಡುತ್ತಾರೆ. ಈ ಮನೆಯನ್ನು ಡಿಸೈನ್ ಮಾಡಿದ್ದು ಹೃತಿಕ್ ಅವರ ಮಾಜಿ ಪತ್ನಿ ಸುಸಾಸನೇ ಖಾನ್.

ರಾಹುಲ್ ಖನ್ನಾ

ಬಾಲಿವುಡ್​ನ ಹ್ಯಾಂಡ್ಸಮ್​ ಹಂಕ್ ರಾಹುಲ್ ಖನ್ನಾ ಅಲಿಬಾಗ್​ನಲ್ಲಿ ಮನೆ ಹೊಂದಿದ್ದಾರೆ. ಈ ಮನೆಗೆ ಅವರು ಆಗಾಗ ಭೇಟಿ ನೀಡುತ್ತಾ ಇರುತ್ತಾರೆ. ಈ ಭಾಗದಲ್ಲಿ ಬಾಲಿವುಡ್​​ನ ಅನೇಕ ಸೆಲೆಬ್ರಿಟಿಗಳು ಮನೆ ಹೊಂದಿದ್ದಾರೆ.

ಇದನ್ನೂ ಓದಿ: ‘ಬೃಂದಾವನ ತಂಡ ಮಾಡಿದ್ದು ಸರಿ ಅಲ್ಲ’; ವಿಶ್ವನಾಥ್ ಹಾವೇರಿಗೆ ನ್ಯಾಯ ಕೊಡಿಸಿ ಎಂದು ಆಗ್ರಹ

ಧೋನಿ

ಎಂಎಸ್​ ಧೋನಿ ಅವರು ರಾಂಚಿಯಲ್ಲಿ ಫಾರ್ಮ್​ಹೌಸ್ ಹೊಂದಿದ್ದಾರೆ. ಎಂಎಸ್​ ಧೋನಿ ಫಾರ್ಮ್​ಹೌಸ್ ಎಂದೇ ಇದಕ್ಕೆ ಹೆಸರು ಇಡಲಾಗಿದೆ. ಸಾಕ್ಷಿ ಹಾಗೂ ಮಗಳು ಜೀವಾ ಜೊತೆ ಫಾರ್ಮ್​ಹೌಸ್​ಗೆ ಭೇಟಿ ನೀಡುತ್ತಲೇ ಇರುತ್ತಾರೆ.

ಪ್ರಭಾಸ್

ಪ್ರಭಾಸ್ ಅವರು ಇಟಲಿಯಲ್ಲಿ ದೊಡ್ಡ ವಿಲ್ಲಾ ಹೊಂದಿದ್ದಾರೆ. ವರ್ಷಕ್ಕೆ ಒಮ್ಮೆ ಅವರು ಇಲ್ಲಿಗೆ ತೆರಳುತ್ತಾರೆ. ಅವರು ಭಾರತದಲ್ಲಿ ಇದ್ದ ಸಂದರ್ಭದಲ್ಲಿ ಈ ವಿಲ್ಲಾನ ಬಾಡಿಗೆ ಬಿಡುತ್ತಾರೆ. ವರ್ಷಕ್ಕೆ 40 ಲಕ್ಷ ರೂಪಾಯಿ ಬಾಡಿಗೆ ಬರುತ್ತದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
ನದಿಯಲ್ಲಿ ಕಳಕೊಂಡಿದ್ದ ಸರ ಮೂಕಾಂಬಿಕೆಯ ಬೇಡಿದ್ದಕ್ಕೆ ತಕ್ಷಣ ಸಿಕ್ತು!
ನದಿಯಲ್ಲಿ ಕಳಕೊಂಡಿದ್ದ ಸರ ಮೂಕಾಂಬಿಕೆಯ ಬೇಡಿದ್ದಕ್ಕೆ ತಕ್ಷಣ ಸಿಕ್ತು!
ಎಂಟು ಜನರ ಮೇಲೆ ಎಲಿಮಿನೇಷನ್​ ತೂಗುಗತ್ತಿ; ಯಾರಾಗಲಿದ್ದಾರೆ ಔಟ್?
ಎಂಟು ಜನರ ಮೇಲೆ ಎಲಿಮಿನೇಷನ್​ ತೂಗುಗತ್ತಿ; ಯಾರಾಗಲಿದ್ದಾರೆ ಔಟ್?
ಈ ರೀತಿಯ ಸಿಕ್ಸ್ ರಿಂಕು ಸಿಂಗ್ ಮಾತ್ರ ಸಿಡಿಸಲು ಸಾಧ್ಯ: ರೋಚಕ ವಿಡಿಯೋ
ಈ ರೀತಿಯ ಸಿಕ್ಸ್ ರಿಂಕು ಸಿಂಗ್ ಮಾತ್ರ ಸಿಡಿಸಲು ಸಾಧ್ಯ: ರೋಚಕ ವಿಡಿಯೋ
ಕೊಪ್ಪಳ: ಹೊತ್ತಿ ಉರಿದ ಮೂರು ಅಂತಸ್ತಿನ ಜ್ಯುವೆಲ್ಲರಿ ಶಾಪ್ ಕಟ್ಟಡ
ಕೊಪ್ಪಳ: ಹೊತ್ತಿ ಉರಿದ ಮೂರು ಅಂತಸ್ತಿನ ಜ್ಯುವೆಲ್ಲರಿ ಶಾಪ್ ಕಟ್ಟಡ
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​