Amitabh Bachchan: ಅಭಿಮಾನಿಗಳನ್ನು ಭೇಟಿ ಮಾಡುವಾಗ ಚಪ್ಪಲಿ ಹಾಕಿಕೊಳ್ಳಲ್ಲ ಅಮಿತಾಭ್​ ಬಚ್ಚನ್​; ಕಾರಣ ತಿಳಿಸಿದ ಸ್ಟಾರ್​ ನಟ

Amitabh Bachchan Fans: ಸೋಶಿಯಲ್​ ಮೀಡಿಯಾದಲ್ಲಿ ಅಮಿತಾಭ್ ಬಚ್ಚನ್​ ಸಕ್ರಿಯರಾಗಿದ್ದಾರೆ. ತಮ್ಮ ಆಲೋಚನೆಗಳನ್ನು ಅದರಲ್ಲಿ ಅವರು ಹಂಚಿಕೊಳ್ಳುತ್ತಾರೆ. ಈಗ ಅವರು ಫ್ಯಾನ್ಸ್ ಬಗ್ಗೆ ಬರೆದುಕೊಂಡಿದ್ದಾರೆ.

Amitabh Bachchan: ಅಭಿಮಾನಿಗಳನ್ನು ಭೇಟಿ ಮಾಡುವಾಗ ಚಪ್ಪಲಿ ಹಾಕಿಕೊಳ್ಳಲ್ಲ ಅಮಿತಾಭ್​ ಬಚ್ಚನ್​; ಕಾರಣ ತಿಳಿಸಿದ ಸ್ಟಾರ್​ ನಟ
ಅಮಿತಾಭ್​ ಬಚ್ಚನ್​

Updated on: Jun 07, 2023 | 4:02 PM

ಬಾಲಿವುಡ್​ನ ಸೂಪರ್​ ಸ್ಟಾರ್​ ಅಮಿತಾಭ್​ ಬಚ್ಚನ್ (Amitabh Bachchan)​ ಅವರು ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಪ್ರತಿ ಭಾನುವಾರ ಅಮಿತಾಭ್​ ಬಚ್ಚನ್​ ಅವರನ್ನು ನೋಡಲು ಅವರ ಮನೆ ಮುಂದೆ ನೂರಾರು ಅಭಿಮಾನಿಗಳು (Amitabh Bachchan fans) ಜಮಾಯಿಸುತ್ತಾರೆ. ಮನೆ ಹೊರಗೆ ಬರುವ ಬಿಗ್​ ಬಿ ಅವರು ಎಲ್ಲರ ಕಡೆಗೆ ಕೈ ಬೀಸುತ್ತಾರೆ. ಮೊದಲಿನಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ವಿಶೇಷ ಏನೆಂದರೆ, ಅಭಿಮಾನಿಗಳನ್ನು ಭೇಟಿ ಮಾಡುವಾಗ ಅಮಿತಾಭ್​ ಬಚ್ಚನ್​ ಅವರು ಚಪ್ಪಲಿ ಹಾಕಿಕೊಳ್ಳುವುದಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಈಗ ಅವರು ತಿಳಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಅಮಿತಾಭ್ ಬಚ್ಚನ್​ ಸಕ್ರಿಯರಾಗಿದ್ದಾರೆ. ತಮ್ಮ ದಿನಚರಿಯ ಬಗ್ಗೆ, ಅನುಭವದ ಬಗ್ಗೆ, ಹೊಸ ಸಿನಿಮಾಗಳ ಬಗ್ಗೆ ಸೋಶಿಯಲ್​ ಮೀಡಿಯಾ ಮೂಲಕ ಅವರು ಅಭಿಮಾನಿಗಳಿಗೆ ತಿಳಿಸುತ್ತಾರೆ. ತಮ್ಮ ಆಲೋಚನೆಗಳನ್ನು ಕೂಡ ಅದರಲ್ಲಿ ಹಂಚಿಕೊಳ್ಳುತ್ತಾರೆ. ತಾವು ಫ್ಯಾನ್ಸ್​ ಮೀಟ್​ ಮಾಡುವಾಗ ಯಾಕೆ ಚಪ್ಪಲಿ ಧರಿಸುವುದಿಲ್ಲ ಎಂಬುದನ್ನು ಅವರೀಗ ವಿವರಿಸಿದ್ದಾರೆ. ಈ ಬಗ್ಗೆ ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

‘ಅಭಿಮಾನಿಗಳನ್ನು ಭೇಟಿ ಮಾಡುವಾಗ ಯಾರಾದರೂ ಬರಿಗಾಲಿನಲ್ಲಿ ಹೋಗುತ್ತಾರಾ ಅಂತ ಕೆಲವರು ನನ್ನ ಬಳಿ ವಾದ ಮಾಡುತ್ತಾರೆ. ನಾನು ಬರಿಗಾಲಿನಲ್ಲೇ ಹೋಗುತ್ತೇನೆ. ನೀವು ದೇವಸ್ಥಾನಕ್ಕೆ ಹೋಗುವಾಗ ಚಪ್ಪಲಿ ಹಾಕಿಕೊಳ್ಳುವುದಿಲ್ಲ. ಭಾನುವಾರ ಬರುವ ನನ್ನ ಹಿತೈಷಿಗಳೆಲ್ಲರೂ ನನ್ನ ಪಾಲಿಗೆ ದೇವಸ್ಥಾನ ಇದ್ದಹಾಗೆ’ ಎಂದು ಅಮಿತಾಭ್​ ಬಚ್ಚನ್​ ಅವರು ಪೋಸ್ಟ್​ ಮಾಡಿದ್ದಾರೆ. ಅಭಿಮಾನಿಗಳಿಗೆ ಅವರು ನೀಡಿದ ಈ ಪರಿ ಗೌರವ ಕಂಡು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್​ಕುಮಾರ್​ ಕೂಡ ಅಭಿಮಾನಿಗಳನ್ನು ದೇವರು ಎಂದಿದ್ದರು. ಅಮಿತಾಭ್​ ಬಚ್ಚನ್​ ಅವರ ಮನದಲ್ಲೂ ಫ್ಯಾನ್ಸ್ ಬಗ್ಗೆ ಅದೇ ಭಾವನೆ ಇದೆ.

ಇದನ್ನೂ ಓದಿ: ಮಾವನ ಜತೆ ಮುದ್ದು ಸೊಸೆಯ ತರಲೆ-ತಮಾಷೆ; ಐಶ್​-ಅಮಿತಾಭ್​ ಬಚ್ಚನ್​ ಕ್ಯೂಟ್​ ವಿಡಿಯೋ ನೋಡಿ

ಅಮಿತಾಭ್ ಬಚ್ಚನ್​ ಅವರು ಬ್ಲಾಗ್​ ಮೂಲಕ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅದೇ ರೀತಿ ತಮ್ಮ ಹೆಲ್ಮೆಟ್​ ವಿವಾದದ ಬಗ್ಗೆ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದರು. ‘ಅದು ಭಾನುವಾರ. ಚಿತ್ರೀಕರಣಕ್ಕೆ ಸೂಕ್ತ ಅನುಮತಿಯನ್ನು ತೆಗೆದುಕೊಳ್ಳಲಾಗಿತ್ತು. ಎಲ್ಲಾ ಕಚೇರಿಗಳು ಮುಚ್ಚಿರುವುದರಿಂದ ಮತ್ತು ಸಾರ್ವಜನಿಕರ ಓಡಾಟ ಮತ್ತು ಟ್ರಾಫಿಕ್​ ಇಲ್ಲದ ಕಾರಣ ಭಾನುವಾರ ಅನುಮತಿ ಕೋರಲಾಯಿತು. ಚಿತ್ರೀಕರಣಕ್ಕಾಗಿ ರಸ್ತೆಯ ಒಂದು ಭಾಗವನ್ನು ಪೊಲೀಸರು ನಿರ್ಬಂಧಿಸಿದ್ದರು. ಆ ದಾರಿ ಇರುವುದು 30ರಿಂದ 40 ಮೀಟರ್​ ಮಾತ್ರ. ನಾನು ಧರಿಸಿದ್ದ ಆ ಡ್ರೆಸ್​ ಸಿನಿಮಾದ ಕಾಸ್ಟ್ಯೂಮ್​. ಬೈಕ್​ ಹತ್ತಿ ಹಿಂಬದಿಯಲ್ಲಿ ಕುಳಿತ ರೀತಿಯಲ್ಲಿ ನಾನು ನಟಿಸಿದೆ. ಸವಾರಿ ಮಾಡಲಿಲ್ಲ. ನನ್ನ ಬಗ್ಗೆ ಕಾಳಜಿ ತೋರಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ಅಮಿತಾಭ್​ ಬಚ್ಚನ್​ ಬರೆದುಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us