‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣಗಿಂತ (Rashmika Mandanna) ತೃಪ್ತಿ ದಿಮ್ರಿ ಪಾತ್ರ ಹೈಲೈಟ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ತೃಪ್ತಿ ಅವರ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ. ಅನೇಕರು ಈ ವಿಚಾರವನ್ನು ಚರ್ಚೆ ಮಾಡುತ್ತಿದ್ದಾರೆ. ತೃಪ್ತಿಗೆ ಸಿಕ್ಕಷ್ಟು ಜನಪ್ರಿಯತೆ ರಶ್ಮಿಕಾಗೆ ಸಿಕ್ಕಿಲ್ಲ ಎಂದು ಅನೇಕರು ಹೇಳಿದ್ದಿದೆ. ಆದರೆ, ಈ ವಾದವನ್ನು ‘ಅನಿಮಲ್’ ಸಿನಿಮಾದಲ್ಲಿ ಪೋಷಕ ಪಾತ್ರ ಮಾಡಿರುವ ಸಿದ್ದಾಂತ್ ಕಾರ್ಣಿಕ್ ಅವರು ಒಪ್ಪಿಕೊಂಡಿಲ್ಲ. ಅವರು ತಮ್ಮ ವಾದ ಮುಂದಿಟ್ಟಿದ್ದಾರೆ.
‘ಅನಿಮಲ್’ ಸಿನಿಮಾ ಉದ್ದಕ್ಕೂ ರಶ್ಮಿಕಾ ಮಂದಣ್ಣ ಅವರ ಪಾತ್ರ ಆಗಾಗ ಬಂದು ಹೋಗುತ್ತದೆ. ಆದರೆ, ತೃಪ್ತಿ ಪಾತ್ರ ದ್ವಿತೀಯಾರ್ಧದಲ್ಲಿ ಸ್ವಲ್ಪ ಹೊತ್ತು ಮಾತ್ರ ಬರುತ್ತದೆ. ಆದರೆ, ರಶ್ಮಿಕಾಗಿಂತ ಹೆಚ್ಚು ಚರ್ಚೆ ಆಗುತ್ತಿರುವುದು ತೃಪ್ತಿ ಹೆಸರು. ಈ ಬಗ್ಗೆ ಸಿದ್ದಾಂತ್ ಕಾರ್ಣಿಕ್ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಬಾಬಿ ಡಿಯೋಲ್ ಅವರ ಪಾತ್ರದ ಉದಾಹರಣೆ ಕೊಟ್ಟು ಈ ಬಗ್ಗೆ ವಿವರಿಸಿದ್ದಾರೆ.
‘ಎಲ್ಲಾ ಪಾತ್ರಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇರುತ್ತದೆ. ಆದರೆ, ತೀವ್ರತೆಯಲ್ಲಿ ವ್ಯತ್ಯಾಸ ಇರಬಹುದು. ಬಾಬಿ ಡಿಯೋಲ್ ಅವರು ತೆರೆಮೇಲೆ 15 ನಿಮಿಷ ಮಾತ್ರ ಕಾಣಿಸಿಕೊಳ್ಳುತ್ತಾರೆ. ಆದರೆ, ಜನರು ರಣಬೀರ್ ಅವರ ಪಾತ್ರದ ಬಳಿಕ ಹೆಚ್ಚು ಮಾತನಾಡೋದು ಬಾಬಿ ಡಿಯೋಲ್ ಪಾತ್ರದ ಬಗ್ಗೆ. ಒಂದೇ ಸಿನಿಮಾದ ಪಾತ್ರಗಳು ಸ್ಪರ್ಧಗೆ ಇಳಿಯಬಾರದು. ಸಿನಿಮಾ ಗೆದ್ದಿದೆ ಎಂದರೆ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ ಎಂದರ್ಥ’ ಎಂದಿದ್ದಾರೆ ಸಿದ್ದಾಂತ್.
‘ನೀವು ಜನರು ನೀಡುವ ಪ್ರೀತಿಯನ್ನು ಸ್ವೀಕರಿಸುತ್ತೀರಿ ಎಂದಾದರೆ ಅವರು ಮಾಡುವ ಟ್ರೋಲ್ನ ಕೂಡ ನೀವು ಒಪ್ಪಬೇಕು. ನಿಮಗೆ ಎರಡೂ ಸಮತೋಲನದಲ್ಲಿ ಸಿಗುತ್ತದೆ’ ಎಂದಿದ್ದಾರೆ ಸಿದ್ದಾಂತ್. ಈ ಮೂಲಕ ಜನರ ತೀರ್ಪನ್ನು ಬಂದ ಹಾಗೆ ಸ್ವೀಕರಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: 500 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಅನಿಮಲ್’; ವೀಕೆಂಡ್ನಲ್ಲಿ ಭರ್ಜರಿ ಕಮಾಯಿ
‘ಅನಿಮಲ್’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನೂ ಕೆಲವು ದಿನಗಳ ಕಾಲ ಚಿತ್ರದ ಅಬ್ಬರ ಮುಂದುವರಿಯಲಿದೆ. ಈ ಸಿನಿಮಾದಿಂದ ರಣಬಿರ್ ಕಪೂರ್, ರಶ್ಮಿಕಾ ಮಂದಣ್ಣ ಮೊದಲಾದವರಿಗೆ ದೊಡ್ಡ ಗೆಲುವು ಸಿಕ್ಕಿದೆ. ರಣಬೀರ್ ಕಪೂರ್ ಹಲವು ಶೇಡ್ಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ