ಸಖತ್ ಐಷಾರಾಮಿ ಆಗಿದೆ ‘ಅನಿಮಲ್’ ನಟಿ ತೃಪ್ತಿ ಮನೆ; ಏನೆಲ್ಲ ಇದೆ ಗೊತ್ತಾ?

| Updated By: ರಾಜೇಶ್ ದುಗ್ಗುಮನೆ

Updated on: Feb 29, 2024 | 10:18 AM

ತೃಪ್ತಿ ದಿಮ್ರಿ ಮನೆ ಹೋಟೆಲ್​ ರೀತಿಯಲ್ಲಿ ಇದೆ. ಅವರು ಮನೆಯ ರೂಂ ಅಷ್ಟು ಐಷಾರಾಮಿ ಆಗಿ ಇದೆ. ಬಹಳ ಸುಂದರವಾಗಿ ಈ ಮನೆಯನ್ನು ಡಿಸೈನ್ ಮಾಡಲಾಗಿದೆ. ತೃಪ್ತಿ ಮನೆಯ ಒಳಗೆ ಒಂದು ಸಣ್ಣ ಕೊಳ ಇದೆ. ಮುಂಜಾನೆ ಇಲ್ಲಿ ಸಮಯ ಕಳೆಯೋಕೆ ಅವರು ಇಷ್ಟಪಡುತ್ತಾರೆ.

ಸಖತ್ ಐಷಾರಾಮಿ ಆಗಿದೆ ‘ಅನಿಮಲ್’ ನಟಿ ತೃಪ್ತಿ ಮನೆ; ಏನೆಲ್ಲ ಇದೆ ಗೊತ್ತಾ?
ತೃಪ್ತಿ
Follow us on

ಬಾಲಿವುಡ್ ನಟಿ ತೃಪ್ತಿ ದಿಮ್ರಿ ಅವರು ‘ಅನಿಮಲ್’ ಸಿನಿಮಾದಿಂದ (Animal Movie) ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಅವರು ಮಾಡಿರೋ ಪಾತ್ರ ಹೆಚ್ಚು ಹೊತ್ತು ತೆರೆಮೇಲೆ ಬರದೇ ಹೋದರೂ ಅವರ ಖ್ಯಾತಿ ಸಾಕಷ್ಟು ಹೆಚ್ಚಾಗಿದೆ. ಅವರು ಮಾಡಿರೋ ಬೋಲ್ಡ್ ಪಾತ್ರಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ತೃಪ್ತಿ ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಐಷಾರಾಮಿ ಮನೆ ಹೊಂದಿದ್ದಾರೆ. ಅವರ ಮನೆಯ ಫೋಟೋಗಳು ವೈರಲ್ ಆಗುತ್ತಿವೆ.

ತೃಪ್ತಿ ದಿಮ್ರಿ ಅವರು 2017ರಲ್ಲಿ ‘ಮಾಮ್’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಅವರು ಕೆಲವರು ಚಿತ್ರಗಳಲ್ಲಿ ಬಣ್ಣ ಹಚ್ಚಿದರು. ಆದರೆ, ದೊಡ್ಡ ಗೆಲುವು ಕಾಣಲಿಲ್ಲ. 2020ರಲ್ಲಿ ‘ಬುಲ್ ಬುಲ್’ ಚಿತ್ರದಲ್ಲಿ ನಟಿಸಿದರು. ಈ ಸಿನಿಮಾನ ಅನುಷ್ಕಾಶ ಶರ್ಮಾ ಸಹೋದರ ಕರ್ಣೇಶ್ ನಿರ್ಮಾಣ ಮಾಡಿದ್ದರು. ಇವರ ಮಧ್ಯೆ ಪ್ರೀತಿ ಮೂಡಿತ್ತು. ನಂತರ ಅದು ಬ್ರೇಕಪ್​ನಲ್ಲಿ ಕೊನೆ ಆಯಿತು. 2023ರಲ್ಲಿ ‘ಅನಿಮಲ್’ ಸಿನಿಮಾದಲ್ಲಿ ಜೋಯಾ ಹೆಸರಿನ ಪಾತ್ರ ಮಾಡಿ ಗಮನ ಸೆಳೆದರು. ಅವರು ಐಷಾರಾಮಿ ಮನೆ ಖರೀದಿ ಮಾಡಿದ್ದಾರೆ.

ತೃಪ್ತಿ ದಿಮ್ರಿ ಅವರ ಮನೆ ಹೋಟೆಲ್​ ರೀತಿಯಲ್ಲಿ ಇದೆ. ಅವರು ಮನೆಯ ರೂಂ ಅಷ್ಟು ಐಷಾರಾಮಿ ಆಗಿ ಇದೆ. ಬಹಳ ಸುಂದರವಾಗಿ ಈ ಮನೆಯನ್ನು ಡಿಸೈನ್ ಮಾಡಲಾಗಿದೆ. ತೃಪ್ತಿ ಮನೆಯ ಒಳಗೆ ಒಂದು ಸಣ್ಣ ಕೊಳ ಇದೆ. ಮುಂಜಾನೆ ಇಲ್ಲಿ ಸಮಯ ಕಳೆಯೋಕೆ ಅವರು ಇಷ್ಟಪಡುತ್ತಾರೆ. ಅವರು ಫಿಟ್ನೆಸ್​ಗೆ ಹೆಚ್ಚು ಒತ್ತು ನೀಡುತ್ತಾರೆ. ಹೀಗಾಗಿ, ಈ ಪೂಲ್ ಸಮೀಪ ತೃಪ್ತಿ ಯೋಗ ಮಾಡುತ್ತಾರೆ. ಇಲ್ಲಿ ಇರುವ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ತೃಪ್ತಿ ದಿಮ್ರಿ ಅವರಿಗೆ ಪೇಂಟಿಂಗ್ ಹಾಗೂ ಪುಸ್ತಕ ಎಂದರೆ ಇಷ್ಟ. ಈ ಕಾರಣಕ್ಕೆ ಮನೆಯಲ್ಲಿ ಇದಕ್ಕೆ ಪ್ರತ್ಯೇಕ ಕೊಠಡಿ ಇದೆ. ಮನೆಯಲ್ಲೇ ಅವರು ಒಂದು ಲೈಬ್ರರಿ ಮಾಡಿದ್ದಾರೆ. ಸಮಯ ಸಿಕ್ಕಾಗ ಇಲ್ಲಿ ಕುಳಿತು ಅವರು ಓದುತ್ತಾರೆ. ಮನೆಯ ಬಳಿ ದೊಡ್ಡ ಸ್ವಿಮ್ಮಿಂಗ್ ಪೂಲ್ ಇದೆ. ಇದರ ಬಳಿ ಬಿಕಿನಿ ತೊಟ್ಟು ಅವರು ಮಿಂಚಿದ್ದರು. ಈ ಫೋಟೀ ವೈರಲ್ ಆಗಿತ್ತು. ಈ ಸ್ವಿಮ್ಮಿಂಗ್​ ಪೂಲ್ ಸುತ್ತ ತೆಂಗಿನ ಮರಗಳು ಇವೆ. ತೃಪ್ತಿ ಅವರ ರೂಂನಲ್ಲಿ ಓದೋಕೆ ಪ್ರತ್ಯೇಕ ಜಾಗ ಇದೆ. ಅವರಿಗೆ ಓದುವ ಹವ್ಯಾಸ ಇರುವುದರಿಂದ ಆಗಾಗ ಇಲ್ಲಿ ಸಮಯ ಕಳೆಯುತ್ತಾರೆ. ಈ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ.

ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಜೊತೆ ನಟಿಸೋ ಚಾನ್ಸ್ ಪಡೆದ ತೃಪ್ತಿ ದಿಮ್ರಿ; ಹಾರರ್ ಸಿನಿಮಾಗೆ ಆಯ್ಕೆ

ತೃಪ್ತಿ ದಿಮ್ರಿ ಅವರ ಮನೆಯಲ್ಲಿ ದೊಡ್ಡ ಬಾಲ್ಕನಿ ಇದೆ. ಮುಂಜಾನೆ ಇಲ್ಲಿ ಸಮಯ ಕಳೆಯಲು ಇಷ್ಟಪಡಿತ್ತಾರೆ. ಸೂರ್ಯನ ಕಿರಣ ಮುಖದ ಮೇಲೆ ಬಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು. ತೃಪ್ತಿಗೆ ಮೇಕಪ್ ಎಂದರೆ ಇಷ್ಟ. ಈ ಕಾರಣಕ್ಕೆ ಮೇಕಪ್​ಗೋಸ್ಕರ ವಿಶೇಷ ಕೊಠಡಿ ಇದೆ. ಹೊರಗೆ ಹೋಗುವ ಮೊದಲು ಮೇಕಪ್​ ಮಾಡಿಕೊಂಡೇ ತೆರಳುತ್ತಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ