‘ಪರಿಸ್ಥಿತಿ ಹೇಗಿದ್ದರೂ ನಮ್ಮ ಕರ್ತವ್ಯ ಮಾಡಬೇಕು’; ಆರ್ಯನ್ ಖಾನ್ ಕೇಸ್ ಬಗ್ಗೆ ಮಾತನಾಡಿದ ಸಮೀರ್
ಶಾರುಖ್ ಖಾನ್ ಹಾಗೂ ಸಮೀರ್ ಅವರ ಚಾಟ್ ಲೀಕ್ ಆಗಿತ್ತು. ಇದರಲ್ಲಿ ‘ತಂದೆಯಾಗಿ ಬೇಡಿಕೊಳ್ಳುತ್ತಿದ್ದೇನೆ. ನನ್ನ ಮಗನನ್ನು ಜೈಲಿನಲ್ಲಿರುವಂತೆ ಮಾಡಬೇಡ’ ಎಂದು ಶಾರುಖ್ ಕೋರಿದ್ದರು ಎನ್ನುವು ಚಾಟ್ ವೈರಲ್ ಆಗಿತ್ತು. ಈ ಬಗ್ಗೆಯೂ ವಾಂಖೆಡೆ ಅವರಿಗೆ ಕೇಳಲಾಗಿದೆ. ಅವರು ಮಾತನಾಡಿದ್ದಾರೆ.
ನಟ ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ಸಮೀರ್ ವಾಂಖೆಡೆ ಬಂಧಿಸಿದ್ದರು. ಈ ಪ್ರಕಣ ದೊಡ್ಡಮಟ್ಟದಲ್ಲಿ ಚರ್ಚೆ ಆಗಿತ್ತು. ಬಳಿಕ ಕೋರ್ಟ್ನಿಂದ ಆರ್ಯನ್ ಖಾನ್ಗೆ ಕ್ಲಿನ್ ಚಿಟ್ ಸಿಕ್ಕಿತು. ದುಡ್ಡಿಗಾಗಿ ಸಮೀರ್ ವಾಂಖೆಡೆ ಈ ರೀತಿ ಮಾಡಿದ್ದಾರೆ ಎನ್ನುವ ಆರೋಪ ಇದೆ. ಆರ್ಯನ್ ಖಾನ್ ಬಂಧನದ ಬಗ್ಗೆ ಸಮೀರ್ ವಾಂಖೆಡೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಆರ್ಯನ್ ಖಾನ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಈ ಪ್ರಕರಣದ ಬಳಿಕ ಸಮೀರ್ ಅವರನ್ನು ಪ್ರಕರಣದಿಂದ ಹೊರಗೆ ಇಡಲಾಗಿದೆ.
ಆರ್ಯನ್ ಖಾನ್ ಅವರನ್ನು ಕ್ರೂಜ್ಶಿಪ್ನಲ್ಲಿ ಬಂಧಿಸಿದರು ಸಮೀರ್. ಆ ಬಳಿಕ ಆರ್ಯನ್ ಖಾನ್ ಒಂದು ತಿಂಗಳಿಗೂ ಅಧಿಕ ಕಾಲ ಜೈಲು ವಾಸ ಅನುಭವಿಸಿದರು. ಈ ಪ್ರಕರಣವು ತಮ್ಮ ಜೀವನದ ಅತಿ ಸಣ್ಣ ಪ್ರಕರಣ ಎಂದು ಪರಿಸಿಗಣಿಸಿದ್ದಾರೆ ಸಮೀರ್. ಅಲ್ಲದೇ ಈ ಪ್ರಕರಣವನ್ನು ನಿರ್ವಹಿಸಿದ ರೀತಿಗೆ ಪಶ್ಚಾತಾಪ ಇಲ್ಲ ಎಂದು ಅವರು ಹೇಳಿದ್ದಾರೆ.
ಶಾರುಖ್ ಖಾನ್ ಅವರಿಗೆ ವಾರ್ನಿಂಗ್ ನೀಡುತ್ತಿದ್ದೀರಾ ಎಂದು ಕೇಳಲಾಯಿತು. ಇದಕ್ಕೆ ಸಮೀರ್ ಉತ್ತರಿಸಿದ್ದಾರೆ. ‘ನಾನು ಸಣ್ಣ ಮನುಷ್ಯ. ಯಾರಿಗಾದರೂ ವಾರ್ನ್ ಮಾಡೋಕೆ ನಾನು ಯಾರು? ನಾನು ಸಿನಿಮಾಗಳನ್ನು ನೋಡುವುದಿಲ್ಲ. ನನಗೆ ಅವರ ಹೆಸರುಗಳು ಗೊತ್ತಿಲ್ಲ’ ಎಂದಿದ್ದಾರೆ ಸಮೀರ್. ಶಾರುಖ್ ಖಾನ್ ಅವರಿಂದ ಹಣ ಕೀಳಲು ಸಮೀರ್ ಪ್ರಯತ್ನಿಸಿದ್ದರು ಎನ್ನುವ ಆರೋಪ ಇದೆ.
ಶಾರುಖ್ ಖಾನ್ ಹೆಸರು ಬಹುತೇಕರಿಗೆ ಗೊತ್ತಿರುತ್ತದೆ. ಅಂತಹುದ್ದರಲ್ಲಿ ಶಾರುಖ್ ಬಗ್ಗೆ ಸಮೀರ್ಗೆ ಗೊತ್ತಿಲ್ಲ ಎಂದರೆ ನಂಬೋದು ಕಷ್ಟ. ಇದೇ ಪ್ರಶ್ನೆಯನ್ನು ಸಮೀರ್ಗೆ ಕೇಳಲಾಯಿತು. ‘ಶಾರುಖ್ ಖಾನ್ ಸ್ಟಾರ್ಡಂ ಬಗ್ಗೆ ನಿಮಗೆ ಗೊತ್ತಿಲ್ಲವೇ’ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ಪ್ರಧಾನಿ ನರೇಂದ್ರ ಮೋದಿ, ಚತ್ರಪತಿ ಶಿವಾಜಿ ಮಹರಾಜ್ ಅವರಂಥ ನಿಜವಾದ ಹೀರೋಗಳ ಬಗ್ಗೆ ನನಗೆ ಕೇಳಿ’ ಎಂದಿದ್ದಾರೆ. ಈ ಮೂಲಕ ಶಾರುಖ್ ನಿಜವಾದ ಹೀರೋ ಅಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಶಾರುಖ್ ಖಾನ್ ಹಾಗೂ ಸಮೀರ್ ಅವರ ಚಾಟ್ ಲೀಕ್ ಆಗಿತ್ತು. ಇದರಲ್ಲಿ ‘ತಂದೆಯಾಗಿ ಬೇಡಿಕೊಳ್ಳುತ್ತಿದ್ದೇನೆ. ನನ್ನ ಮಗನನ್ನು ಜೈಲಿನಲ್ಲಿರುವಂತೆ ಮಾಡಬೇಡ’ ಎಂದು ಶಾರುಖ್ ಖಾನ್ ಕೋರಿದ್ದರು ಎನ್ನುವು ಚಾಟ್ ವೈರಲ್ ಆಗಿತ್ತು. ಈ ಬಗ್ಗೆಯೂ ಅವರಿಗೆ ಕೇಳಲಾಗಿದೆ. ‘ನನಗೆ ಆ ವ್ಯಕ್ತಿ ಬಗ್ಗೆ ಮಾತನಾಡಲು ಇಷ್ಟ ಇಲ್ಲ. ಈ ರೀತಿ ಪ್ರಕರಣದಲ್ಲಿ ಆ್ಯಕ್ಷನ್ ತೆಗೆದುಕೊಂಡಾಗ ಪಾಲಕರು ನಮ್ಮನ್ನು ಸಂಪರ್ಕಿಸುತ್ತಾರೆ. ಡ್ರಗ್ ಸೇವಿಸುವ ಮಕ್ಕಳ ಪಾಲಕರ ಬಗ್ಗೆ ಬೇಸರ ಇದೆ’ ಎಂದಿದ್ದಾರೆ ಅವರು.
‘ನಾವು ಒಮ್ಮೆ ಲೇಡಿ ಡ್ರಗ್ ಪೆಡ್ಲರ್ನ ಅರೆಸ್ಟ್ ಮಾಡಿದ್ದೆವು. ಅವಳಿಗೆ ಸಣ್ಣ ಮಕ್ಕಳಿದ್ದರು. ಮಕ್ಕಳಿಗೆ ಹಾಲು ತರಲು ಅವಳ ಬಳಿ ಹಣ ಇರಲಿಲ್ಲ. ಈ ರೀತಿ ಆದಾಗ ಬೇಸರ ಆಗುತ್ತದೆ. ಆದರೆ, ಅವಳ ಬಳಿ ಇರುವ ಡ್ರಗ್ನ ವಶ ಪಡಿಸಿಕೊಳ್ಳುವುದು ನನ್ನ ಕರ್ತವ್ಯ’ ಎಂದಿದ್ದಾರೆ ಸಮೀರ್. ಈ ಮೂಲಕ ವ್ಯಕ್ತಿ ಯಾರೇ ಆಗಿದ್ದರೂ ಡ್ಯೂಟಿ ಮುಖ್ಯ ಎಂದಿದ್ದಾರೆ.
ಇದನ್ನೂ ಓದಿ: ‘ಡಂಕಿ’ ಸಿನಿಮಾ ಹಾಡಿದ ಅಲ್ಲು ಅರ್ಜುನ್ ಮಗ; ಸ್ವೀಟ್ ಆಗಿ ಉತ್ತರಿಸಿದ ಶಾರುಖ್ ಖಾನ್
‘ನನಗೆ ನನ್ನದೇ ಆದ ಆಲೋಚನೆಗಳಿವೆ. ಪ್ರತಿಯೊಂದು ಉದ್ದೇಶವೂ ಹಣ ಮತ್ತು ಕೊಳಕು ಕೆಲಸವಲ್ಲ. ಇಂದಿಗೂ ಕೆಲವು ಅಧಿಕಾರಿಗಳು ಒಳ್ಳೆಯವರಾಗಿದ್ದಾರೆ. ಇಂದು ಕೆಲವು ಜನರಿದ್ದಾರೆ ಅವರ ಗುರಿ ಕೇವಲ ಹಣ ಗಳಿಸುವುದು ಅಲ್ಲ. ಜನರು ದೇಶ ಸೇವೆಗಾಗಿ ದುಡಿಯುತ್ತಾರೆ. ಎಲ್ಲವನ್ನೂ ಹಣದೊಂದಿಗೆ ಜೋಡಿಸುವುದು ತಪ್ಪು’ ಎಂದರು ಸಮೀರ್ ವಾಂಖೆಡೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ