ಹಾರಾಡುತ್ತಿರುವ ವಿಮಾನದಲ್ಲಿ ‘ಯೋಧ’ ಟ್ರೇಲರ್ ರಿಲೀಸ್; ಹೈಜಾಕ್ ಕಥೆ ಹೇಳಲು ಬಂದ ಸಿದ್ದಾರ್ಥ್

Yodha Trailer: ‘ಯೋಧ’ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಎಂಬುದನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಈ ಸಿನಿಮಾಗೆ ರಾಶಿ ಖನ್ನಾ ನಾಯಕಿ. ದಕ್ಷಿಣದಲ್ಲಿ ಮಿಂಚಿರುವ ಅವರು ಈಗ ಬಾಲಿವುಡ್​ನಲ್ಲಿ ಗಮನ ಸೆಳೆಯುತ್ತಿದ್ದಾರೆ. ದಿಶಾ ಪಟಾಣಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಟ್ರೇಲರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ಹಾರಾಡುತ್ತಿರುವ ವಿಮಾನದಲ್ಲಿ ‘ಯೋಧ’ ಟ್ರೇಲರ್ ರಿಲೀಸ್; ಹೈಜಾಕ್ ಕಥೆ ಹೇಳಲು ಬಂದ ಸಿದ್ದಾರ್ಥ್
ಸಿದ್ದಾರ್ಥ್
Follow us
ರಾಜೇಶ್ ದುಗ್ಗುಮನೆ
|

Updated on: Mar 01, 2024 | 7:30 AM

ಸಿದ್ದಾರ್ಥ್ ಮಲ್ಹೋತ್ರಾ ಅವರು ‘ಶೇರ್ಷಾ’ (Shersha Movie) ಸಿನಿಮಾದಲ್ಲಿ ಸೈನಿಕನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರ ಅವರಿಗೆ ಹೆಚ್ಚು ಹೊಂದಿಕೆ ಆಗಿತ್ತು. ಇದಾದ ಬಳಿಕ ಅವರು ‘ದಿ ಇಂಡಿಯನ್ ಪೊಲೀಸ್ ಫೋರ್ಸ್’ ಸರಣಿಯಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಈಗ ‘ಯೋಧ’ ಚಿತ್ರಕ್ಕಾಗಿ ಅವರು ಮತ್ತೆ ಸೈನಿಕನ ಗೆಟಪ್ ತಾಳಿದ್ದಾರೆ. ಸಿನಿಮಾ ಉದ್ದಕ್ಕೂ ಟ್ವಿಸ್ಟ್​ಗಳನ್ನು ನಾವು ನಿರೀಕ್ಷಿಸಬಹುದು ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷ್ಯ ಸಿಕ್ಕಿದೆ. ಈ ಟ್ರೇಲರ್​ನ ಆಗಸದ ಮಧ್ಯದಲ್ಲಿ ರಿಲೀಸ್ ಮಾಡಲಾಗಿದೆ ಅನ್ನೋದು ವಿಶೇಷ.

ಅರುಣ್ (ಸಿದ್ದಾರ್ಥ್​) ತಂದೆಯಂತೆ ಸೈನಿಕನಗಾಬೇಕು ಎಂದು ಕನಸು ಕಾಣುತ್ತಾನೆ. ಆಗುತ್ತಾನೆ ಕೂಡ. ಆದರೆ ಅವನ ಮೇಲೆ ದೇಶದ್ರೋಹದ ಆರೋಪ ಬರುತ್ತದೆ. ಹೀಗಾಗಿ ಆತನನ್ನು ಸಸ್ಪೆಂಡ್ ಮಾಡಲಾಗುತ್ತದೆ. ಒಂದು ದಿನ ವಿಮಾನ ಹೈಜಾಕ್ ಆಗುತ್ತದೆ. ಇದರಲ್ಲಿ ಅರುಣ್ ಕೈವಾಡ ಇದೆ ಎಂದು ಮಾಧ್ಯಮಗಳಲ್ಲಿ ವರದಿ ಆಗುತ್ತದೆ. ಅಸಲಿಗೆ ವಿಮಾನದಲ್ಲಿ ಏನಾಗುತ್ತದೆ? ಅರುಣ್ ಎಲ್ಲರನ್ನೂ ರಕ್ಷಿಸುತ್ತಾನಾ ಅಥವಾ ಅವನೇ ಹೈಜಾಕರ್ ಅನ್ನೋದು ಸಿನಿಮಾದ ಕಥೆ.

‘ಯೋಧ’ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಎಂಬುದನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಈ ಚಿತ್ರಕ್ಕೆ ರಾಶಿ ಖನ್ನಾ ನಾಯಕಿ. ದಕ್ಷಿಣದಲ್ಲಿ ಮಿಂಚಿರುವ ಅವರು ಈಗ ಬಾಲಿವುಡ್​ನಲ್ಲಿ ಗಮನ ಸೆಳೆಯುತ್ತಿದ್ದಾರೆ. ದಿಶಾ ಪಟಾಣಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಟ್ರೇಲರ್ ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ. ಯೋಧನ ಅವತಾರದಲ್ಲಿ ಸಿದ್ದಾರ್ಥ್​ನ ನೋಡಲು ಫ್ಯಾನ್ಸ್ ಕಾದಿದ್ದಾರೆ.

ಯೋಧ ಟ್ರೇಲರ್..

‘ಯೋಧ’ ಸಿನಿಮಾದಲ್ಲಿ ಹೈಜಾಕ್ ಕಥೆಯೇ ಪ್ರಮುಖವಾಗಿ ಇರಲಿದೆ ಎಂಬುದು ಟ್ರೇಲರ್​ನಲ್ಲಿ ಗೊತ್ತಾಗಿದೆ. ಈ ಕಾರಣದಿಂದಲೇ ಹಾರಾಡುತ್ತಿರುವ ವಿಮಾನದಲ್ಲೇ ಟ್ರೇಲರ್ ಲಾಂಚ್ ಮಾಡಲಾಗಿದೆ. ಸಾಗರ್ ಅಂಬ್ರೆ ಹಾಗೂ ಪುಷ್ಕರ್ ಓಜಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ಕರಣ್ ಜೋಹರ್​ ಅವರ ಪಾಲೂ ಇದೆ.

ಇದನ್ನೂ ಓದಿ: ‘ಅನಿಮಲ್ ಪಾರ್ಕ್’ ಸಿನಿಮಾಗೆ ವಿಲನ್ ಫೈನಲ್? ಬಾಲಿವುಡ್​ ಹೀರೋಗೆ ನೆಗೆಟಿವ್ ಶೇಡ್​

ಮಾರ್ಚ್ 15ರಂದು ‘ಯೋಧ’ ಸಿನಿಮಾ ರಿಲೀಸ್ ಆಗಲಿದೆ. ಇತ್ತೀಚೆಗೆ ದೇಶಪ್ರೇಮದ ಸಿನಿಮಾಗಳು ಗಮನ ಸೆಳೆಯುತ್ತಿವೆ. ‘ಜವಾನ್’, ‘ಫೈಟರ್’ ಮೊದಲಾದ ಚಿತ್ರಗಳು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿವೆ. ಅದೇ ರೀತಿ ‘ಯೋಧ’ ಸಿನಿಮಾ ಕೂಡ ಗಮನ ಸೆಳೆಯಲಿದೆಯೇ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ