48 ನೇ ವಯಸ್ಸಿಗೆ ಸ್ನಾತಕೋತ್ತರ ಪದವಿ: ಓದಿಗೆ ವಯಸ್ಸಿನ ಮಿತಿಯಿಲ್ಲ ಎಂದ ನಟಿ

| Updated By: ಮಂಜುನಾಥ ಸಿ.

Updated on: Sep 03, 2023 | 8:33 PM

ಯಾವುದೇ ಒಂದು ಕ್ಷೇತ್ರದಲ್ಲಿ ಗುರುತಿಸಿಕೊಂಡ ನಂತರ ಓದಿಗೆ ವಿರಾಮ ಹಾಕಿಬಿಡುತ್ತಾರೆ. ಶಿಕ್ಷಣ ಎಂದರೆ ಮಾರು ದೂರ ಓಡುತ್ತಾರೆ. ಸಿನಿಮಾ ಕ್ಷೇತ್ರದಲ್ಲಿ ಭರ್ಜರಿ ಹೆಸರು ಮಾಡಿರುವ ನಟಿಯೊಬ್ಬರು ತನ್ನ 48ನೇ ವಯಸ್ಸಿಗೆ ಕಾಲೇಜು ಪದವಿ ಪಡೆದು, ಓದಿಗೆ ಮಿತಿಯಿಲ್ಲ ಎಂದು ಸಾರಿ ಹೇಳಿದ್ದಾರೆ.

48 ನೇ ವಯಸ್ಸಿಗೆ ಸ್ನಾತಕೋತ್ತರ ಪದವಿ: ಓದಿಗೆ ವಯಸ್ಸಿನ ಮಿತಿಯಿಲ್ಲ ಎಂದ ನಟಿ
ಅಕ್ಷಯ್ ಕುಮಾರ್-ಟ್ವಿಂಕಲ್ ಖನ್ನ
Follow us on

ಒಮ್ಮೆ ಈ ಓದು ಮುಗಿದ್ರೆ ಸಾಕಪ್ಪ ಎನ್ನುವವರೇ ಹೆಚ್ಚು. ಜೀವನದಲ್ಲಿ ಸೆಟಲ್ ಆದ ನಂತರ ಮತ್ತೆ ಕಾಲೇಜು ಕಡೆ ಮುಖ ಮಾಡುವುದಿಲ್ಲ. ಆದರಲ್ಲಿಯೂ ಹೆಣ್ಣು ಮಕ್ಕಳಂತೂ ಒಂದು ವಯಸ್ಸಿನ ನಂತರ ಮತ್ತೆ ಓದಿನೆಡೆಗೆ ತಲೆ ಹಾಕುವುದು ಅಪರೂಪವೇ. ಆದರೆ ಈಗ ಕಾಲ ಬದಲಾಗುತ್ತಿದೆ. ಇತ್ತೀಚಿಗೆ ಬಹುಭಾಷಾ ಕಲಾವಿದೆ ಪವಿತ್ರಾ ಲೋಕೆಶ್ (Pavitra Lokesh) ಹಂಪಿ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ವಿಷಯದಲ್ಲಿ ಪಿಹೆಚ್.ಡಿ ಪದವಿಗೆ ಆಯ್ಕೆಯಾಗಿದ್ದರು. ಹಾಗೆ ಇಲ್ಲೊಬ್ಬ ನಟಿ, ತನ್ನ 48ನೇ ವಯಸ್ಸಿಗೆ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ವಿದೇಶದಲ್ಲಿ ಪದವಿ ಪಡೆದುಕೊಂಡ ಇವರು ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಯಾರು ನಟಿ? ಯಾವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಅಂತ ತಿಳ್ಕೋಬೇಕಾ? ಹಾಗಿದ್ದರೆ ಈ ಪೂರ್ಣ ಓದಿ.

ಬಾಲಿವುಡ್ ನಟಿ, ನಿರ್ಮಾಪಕಿ, ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ತಮ್ಮ 48ನೇ ವಯಸ್ಸಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ರಿಯೇಟಿವ್ ಹಾಗೂ ಲೈಫ್ ರೈಟಿಂಗ್ ವಿಷಯದಲ್ಲಿ ಮಾಸ್ಟರ್ ಡಿಗ್ರಿ ಮಾಡಿಕೊಂಡಿದ್ದಾರೆ. ಲಂಡನ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಸಂಶೋಧನಾ ಪ್ರಬಂಧವನ್ನು ಸಲ್ಲಿಸಿ ಸ್ನಾತಕೋತ್ತರ ಪದವಿ ಪಡೆದಿದ್ದು, ನಂತರ ಇನ್ ಸ್ಟಾಗ್ರಾಂ ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಸುದೀರ್ಘ ಬರಹ ಬರೆದುಕೊಂಡಿರುವ ಇವರು, ತಮ್ಮ ಒಂದು ವರ್ಷದ ಸ್ನಾತಕೋತ್ತರ ಪದವಿ ಹಾದಿಯನ್ನು ಮೆಲಕು ಹಾಕಿದ್ದಾರೆ. ಕಳೆದ ಒಂದು ವರ್ಷದಿಂದ ಸತತ ಓದುವುದು, ವಿಶ್ಲೇಷಿಸುವುದು, ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು, ಅಸೈನ್ಮೆಂಟ್ಸ್ ಹೀಗೆ ಕಳೆದುಹೋಗಿದೆ. ಈ ಒಂದು ವರ್ಷವನ್ನು ಮುಗಿಸಿ ಹೊರನಡೆಯುವಾಗ ಸಂಭ್ರಮಕ್ಕಿಂತ, ಮುಗಿದು ಹೋಯಿತಲ್ಲ ಎಂದು ಬೇಸರವಾಗುತ್ತಿದೆ. ಈ ಒಂದು ವರ್ಷ ನನ್ನ ಜೀವನದ ದೊಡ್ಡ ಭಾಗವಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ:‘ನೀನು ಅಕ್ಷಯ್​ ಕುಮಾರ್​​ನ ಮದ್ವೆ ಆಗ್ತೀಯಾ’; ಟ್ವಿಂಕಲ್​ ಖನ್ನಾ ಕೈ ನೋಡಿ ಭವಿಷ್ಯ ನುಡಿದಿದ್ದ ಜ್ಯೋತಿಷಿ

ಈ ಮೊದಲು ಸ್ನಾತಕೋತ್ತರ ಪದವಿ ಪಡೆಯಲು 5 ವಿಶ್ವವಿದ್ಯಾನಿಲಯಕ್ಕೆ ಅರ್ಜಿ ಸಲ್ಲಿಸಿದ್ದರು ಟ್ವಿಂಕಲ್ ಖನ್ನ, ಅವುಗಳಲ್ಲಿ ನಾಲ್ಕು ಕಾಲೇಜುಗಳಲ್ಲಿ ಅವಕಾಶ ದೊರೆತಿತ್ತು. ತಮ್ಮ ಸ್ನಾತಕೊತ್ತರ ಪದವಿಯ ಆರಂಭಿಕ ದಿನಗಳಲ್ಲಿ ಎದುರಿಸಿದ ಕಷ್ಟಗಳ ಬಗ್ಗೆಯೂ ಟ್ವಿಂಕಲ್ ಬರೆದುಕೊಂಡಿದ್ದಾರೆ. ಟ್ವಿಂಕಲ್ ವಯಸ್ಸಿನವರೆಲ್ಲಾ ಮಕ್ಕಳನ್ನು ಕಾಲೇಜಿಗೆ ಬಿಡಲು ಬರುತ್ತಿದ್ದರು, ಅದಷ್ಟೇ ಅಲ್ಲದೇ ಬೇರೆ ದೇಶಕ್ಕೆ ಹೊಂದಿಕೊಳ್ಳುವುದು, ಅಲ್ಲಿನ ಜನರನ್ನು ಸ್ನೇಹಿತರನ್ನಾಗಿಸಿಕೊಳ್ಳುವುದು ಮೊದ ಮೊದಲು ತುಂಬಾ ಕಷ್ಟ ಎನಿಸಿತ್ತು. ವಯಸ್ಸು ಕೇವಲ ಲೆಕ್ಕವಲ್ಲ, ನಾವು ಏನನ್ನು ಸಾಧಿಸಿದ್ದೇವೆ ಎಂಬುದು ಮಾತ್ರ ಲೆಕ್ಕ ಎಂದಿದ್ದಾರೆ.

ವಯಸ್ಸಿಗೆ ಅಂಜದೆ ಓದು ಮುಂದುವರೆಸಿದ್ದಕ್ಕೆ ಹಲವರು ಟ್ವಿಂಕಲ್​ರನ್ನು ಅಭಿನಂದಿಸಿದ್ದಾರೆ. ಪತ್ನಿಯ ಈ ಸಾಧನೆಯ ಬಗ್ಗೆ ಅಕ್ಷಯ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ ಮನೆಗೆ ಯಾವಾಗ ಬರುತ್ತಿಯಾ? ಎಂದು ತಮಾಷೆ ಮಾಡಿದ್ದಾರೆ. ಈ ಮೊದಲು ಹಲವರು ಓದುವುದನ್ನು ಬಿಟ್ಟು ಹಲವರು ನಟನಾ ಕ್ಷೇತ್ರ ಆಯ್ದುಕೊಂಡವರಿದ್ದಾರೆ. ಆದರೆ ಕಲೆಯ ಕ್ಷೇತ್ರಕ್ಕೆ ಬಂದ ನಂತರವೂ ತಮ್ಮ ವೃತ್ತಿಯನ್ನು ಮಂದುವರೆಸಿ, ವಯಸ್ಸಿಗೆ ಕಲಿಕೆಗೆ ಯಾವುದೇ ಮಿತಿಯಿಲ್ಲ ಎಂಬುದನ್ನು ಸಾಬೀತುಪಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ