ಭಾರಿ ಹೈಪ್ ಸೃಷ್ಟಿ ಮಾಡಿರುವ ‘ಪಠಾಣ್’ ಸಿನಿಮಾವನ್ನು (Pathaan Movie) ಮೊದಲ ದಿನವೇ ನೋಡಲು ಶಾರುಖ್ ಖಾನ್ ಅಭಿಮಾನಿಗಳು ಕಾದಿದ್ದಾರೆ. ಈ ಸಿನಿಮಾ ಹೇಗಿದೆ ಎಂಬುದನ್ನು ತಿಳಿಯುವ ಕೌತುಕ ಸಿನಿಪ್ರಿಯರಲ್ಲಿದೆ. ಈ ಚಿತ್ರಕ್ಕೆ ಒಳ್ಳೆಯ ವಿಮರ್ಶೆ ಸಿಕ್ಕರೆ ಬಾಕ್ಸ್ ಆಫೀಸ್ ಗಳಿಕೆಗೆ ಸಹಕಾರಿ ಆಗಲಿದೆ. ಮೊದಲ ದಿನವೇ ಕೆಟ್ಟ ವಿಮರ್ಶೆ ಕೇಳಿಬಂದರೆ ಸಿನಿಮಾ ನೋಡುವವರ ಸಂಖ್ಯೆ ಇಳಿಮುಖ ಆಗುತ್ತದೆ. ಆ ದೃಷ್ಟಿಯಿಂದ ಮೊದಲ ವಿಮರ್ಶೆ ತುಂಬ ಮುಖ್ಯವಾಗುತ್ತದೆ. ಹೀಗಿರುವಾಗ ಉಮೈರ್ ಸಂಧು (Umair Sandhu) ಅವರು ಫೇಕ್ ವಿಮರ್ಶೆ ಹಂಚಿಕೊಂಡಿದ್ದಾರೆ. ಅವರು ಟ್ವಿಟರ್ನಲ್ಲಿ ಬರೆದುಕೊಂಡಿರುವ ‘ಪಠಾಣ್’ ಸಿನಿಮಾದ ವಿಮರ್ಶೆ ಸಂಪೂರ್ಣ ಕಾಪಿ ಪೇಸ್ಟ್ ಎಂಬುದನ್ನು ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ (Taran Adarsh) ಅವರು ಬಯಲು ಮಾಡಿದ್ದಾರೆ.
ಉಮೈರ್ ಸಂಧು ಅವರು ವಿದೇಶಿ ಸೆನ್ಸಾರ್ ಮಂಡಳಿಯ ಸದಸ್ಯ ಎಂದು ತಮ್ಮನ್ನು ತಾವು ಕರೆದುಕೊಂಡಿದ್ದಾರೆ. ವಿಮರ್ಶಕ ಎಂಬುದಾಗಿಯೂ ಹೇಳಿಕೊಂಡಿದ್ದಾರೆ. ಈ ಹಿಂದೆ ಅನೇಕ ಸಿನಿಮಾಗಳ ವಿಮರ್ಶೆಯನ್ನು ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದುಂಟು. ಭಾರತದಲ್ಲಿ ಸಿನಿಮಾಗಳು ಬಿಡುಗಡೆ ಆಗುವುದಕ್ಕೂ ಮುನ್ನವೇ ಅವರು ಅವುಗಳ ವಿಮರ್ಶೆ ತಿಳಿಸಿದ್ದರು. ಆದರೆ ಈ ಬಾರಿ ಅವರು ನಗೆಪಾಟಲಿಗೆ ಒಳಗಾಗುವಂತೆ ಆಗಿದೆ.
Shah Rukh Khan: ಭಾರತದಲ್ಲಿ ‘ಪಠಾಣ್’ ಚಿತ್ರಕ್ಕೆ ವಿರೋಧ; ದುಬೈಗೆ ಹೋಗಿ ಸಿನಿಮಾ ಪ್ರಚಾರ ಮಾಡಿದ ಶಾರುಖ್ ಖಾನ್
‘ಪಠಾಣ್’ ಸಿನಿಮಾ ಹಾಗಿದೆ.. ಹೀಗಿದೆ.. ಎಂದು ಪುಂಕಾನುಪುಂಕವಾಗಿ ಉಮೈರ್ ಸಂಧು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಆ ಸಾಲುಗಳ ಮೂಲವನ್ನು ತರಣ್ ಆದರ್ಶ್ ಅವರು ಪತ್ತೆ ಹಚ್ಚಿದ್ದಾರೆ. ಈ ಹಿಂದೆ ‘ಏಕ್ ಥಾ ಟೈಗರ್’ ಚಿತ್ರಕ್ಕೆ ತರಣ್ ಆದರ್ಶ್ ಬರೆದ ವಿಮರ್ಶೆಯನ್ನೇ ಈಗ ಉಮೈರ್ ಸಂಧು ಕಾಪಿ ಪೇಸ್ಟ್ ಮಾಡಿದ್ದಾರೆ. ಸಲ್ಮಾನ್ ಖಾನ್ ಹೆಸರಿನ ಬದಲು ಶಾರುಖ್ ಖಾನ್ ಹೆಸರನ್ನು ಸೇರಿಸಿದ್ದಾರೆ ಅಷ್ಟೇ!
STOP THIS NONSENSE… You have copy pasted my review of #EkThaTiger [2012] as it is and used it for your ‘review’ of #Pathaan… Here’s the link to my #EkThaTiger review: https://t.co/PEurR2k3BQ@Bollyhungama, please look into it. https://t.co/WLKVEIRH2l
— taran adarsh (@taran_adarsh) January 21, 2023
ಇದನ್ನು ಪತ್ತೆ ಹಚ್ಚಿರುವ ತರಣ್ ಆದರ್ಶ್ ಅವರು ಟ್ವಿಟರ್ನಲ್ಲಿಯೇ ತಿರುಗೇಟು ಕೊಟ್ಟಿದ್ದಾರೆ. ‘ಇಂಥ ನಾನ್ಸೆನ್ಸ್ ನಿಲ್ಲಿಸಿ’ ಎಂದು ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಒಟ್ಟಿನಲ್ಲಿ ಉಮೈರ್ ಸಂಧು ಬರೆಯುವ ವಿಮರ್ಶೆಯಲ್ಲಿ ಅಸಲಿತನ ಇರುವುದಿಲ್ಲ ಎಂಬುದು ಈ ಮೂಲಕ ಸಾಬೀತಾದಂತೆ ಆಗಿದೆ. ಈಗ ಅವರು ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.