ಖ್ಯಾತ ನಿರ್ದೇಶಕನ ಕಚೇರಿಯಿಂದ ಕೊಲೆ ಬೆದರಿಕೆ: ಉರ್ಫಿ ಜಾವೇದ್ ಆರೋಪ

|

Updated on: Apr 16, 2023 | 6:33 PM

Uorfi Javed: ತಮ್ಮ ಚಿತ್ರ, ವಿಚಿತ್ರ ಫ್ಯಾಷನ್​ನಿಂದಾಗಿ ಜನಪ್ರಿಯತೆಗಳಿಸಿಕೊಂಡಿರುವ ನಟಿ ಉರ್ಫಿ ಜಾವೇದ್​ಗೆ ಖ್ಯಾತ ನಿರ್ದೇಶಕನ ಸಹಾಯಕ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ್ದಾನೆ.

ಖ್ಯಾತ ನಿರ್ದೇಶಕನ ಕಚೇರಿಯಿಂದ ಕೊಲೆ ಬೆದರಿಕೆ: ಉರ್ಫಿ ಜಾವೇದ್ ಆರೋಪ
ಉರ್ಫಿ ಜಾವೇದ್
Follow us on

ಚಿತ್ರ ವಿಚಿತ್ರ ಫ್ಯಾಷನ್ (Fashion) ಬಟ್ಟೆಗಳಿಂದ ಜನಪ್ರಿಯತೆ ಗಳಿಸಿರುವ ಉರ್ಫಿ ಜಾವೇದ್ (Uorfi Javed), ಫ್ಯಾಷನ್ ಹೊರತಾಗಿ ಕೆಲವು ವಿವಾದಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ಇದೀಗ ಬಾಲಿವುಡ್​ನ ಖ್ಯಾತ ನಿರ್ದೇಶಕನ ಕಚೇರಿಯಿಂದ ತಮಗೆ ಕೊಲೆ ಬೆದರಿಕೆ ಬಂದಿದೆ ಎಂದು ಉರ್ಫಿ ಜಾವೇದ್ ಆರೋಪಿಸಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಉರ್ಫಿ ಜಾವೇದ್, ಇದೆಲ್ಲವೂ ನನಗೆ ಮಾಮೂಲು, ಪ್ರತಿದಿನದಂತೆ ಇದು ನನ್ನ ಜೀವನದ ಮತ್ತೊಂದು ದಿನವಷ್ಟೆ ಇಂಥಹುದಕ್ಕೆಲ್ಲ ತಲೆ ಕಡೆಸಿಕೊಳ್ಳುವುದಿಲ್ಲ ಎಂದಿದ್ದಾರೆ ನಟಿ.

ಇನ್​ಸ್ಟಾಗ್ರಾಂನಲ್ಲಿ ಉರ್ಫಿ ಜಾವೇದ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಜನಪ್ರಿಯ ನಿರ್ದೇಶಕ ಹಾಗೂ ನಿರ್ಮಾಪಕ ನೀರಜ್ ಪಾಂಡೆಯ ಅಸಿಸ್ಟೆಂಟ್ ಅವರ ಕಚೇರಿಯಿಂದಲೇ ಕರೆ ಮಾಡುತ್ತಿರುವುದಾಗಿ ಹೇಳಿ ಉರ್ಫಿಗೆ ವ್ಯಕ್ತಿಯೊಬ್ಬ ಕರೆ ಮಾಡಿದ್ದು, ಪಾತ್ರವೊಂದಕ್ಕೆ ನೀರಜ್ ಪಾಂಡೆಯವರು ನಿಮ್ಮನ್ನು ಆಡಿಷನ್​ಗೆ ಕರೆದಿದ್ದಾರೆ ಕಚೇರಿಗೆ ಬನ್ನಿ ಎಂದು ಹೇಳಿದ, ಆತನ ಬಗ್ಗೆ ಅನುಮಾನ ಬಂದ ಕಾರಣ, ಆಡಿಷನ್​ಗೆ ಬರುವ ಮುಂಚೆ ಸಿನಿಮಾದ ಚಿತ್ರಕತೆ, ಕತೆ ನೊಂದಣಿ ದಾಖಲೆ ಇನ್ನಿತರೆ ದಾಖಲೆಗಳನ್ನು ಕಳಿಸುವಂತೆ ಉರ್ಫಿ ಕೇಳಿದ್ದಾರೆ.

ಆಗ ಕರೆಮಾಡಿದಾತನು ಸಿಟ್ಟಿಗೆದ್ದು, ನನಗೆ ನಿನ್ನ ಕಾರಿನ ಸಂಖ್ಯೆ ನನಗೆ ಗೊತ್ತಿದೆ. ನಿನ್ನ ಮೊಬೈಲ್ ಸಂಖ್ಯೆ ಗೊತ್ತಿದೆ, ಎಲ್ಲೆಲ್ಲಿ ಓಡಾಡುತ್ತೀಯ ಎಂಬುದು ಗೊತ್ತಿದೆ. ನೀನು ಹಾಕುವ ಬಟ್ಟೆಗಳಿಗೆ ನೀನನ್ನು ಹೊಡೆದು ಕೊಲ್ಲುವುದು ಸೂಕ್ತ. ನೀನು ಸಾಯಲು ಯೋಗ್ಯಳಾದ ವ್ಯಕ್ತಿ ಎಂದಿದ್ದಾರೆ. ಅಂಥಹಾ ಬಟ್ಟೆಗಳನ್ನು ಹಾಕುವುದನ್ನು ನಿಲ್ಲಿಸಲಿಲ್ಲವಾದರೆ ನೀನು ಸಾಯುತ್ತೀಯ ಎಂದಿದ್ದಾರೆ. ನಾನು ಆತನನ್ನು ಮೀಟ್ ಮಾಡಲು ನಿರಾಕರಿಸಿದ್ದಕ್ಕೆ ನನಗೆ ಬೆದರಿಕೆ ಹಾಕಲಾಗಿದೆ ಎಂದಿದ್ದಾರೆ ಉರ್ಫಿ ಜಾವೇದ್.

ನಿಜವಾಗಿಯೂ ನಿರ್ದೇಶಕ ನೀರಜ್ ಪಾಂಡೆಯ ಕಚೇರಿಯಿಂದ ಉರ್ಫಿ ಜಾವೇದ್​ಗೆ ಕರೆ ಬಂದಿತ್ತ ಅಥವಾ ಬೇರೆ ಯಾರಾದರೂ ನೀರಜ್ ಹೆಸರು ಹೇಳಿ ಉರ್ಫಿಯನ್ನು ತಾವಿದ್ದಲ್ಲಿಗೆ ಕರೆಸಿಕೊಂಡು ಹಲ್ಲೆ ಮಾಡುವ ಯೋಜನೆಯಲ್ಲದ್ದರಾ ಎಂಬ ಅನುಮಾನಗಳಿವೆ. ಘಟನೆ ಕುರಿತಂತೆ ನಟಿ ಉರ್ಫಿ ದೂರು ನೀಡಿದಂತಿಲ್ಲ. ಘಟನೆಯನ್ನು ಬಹಳ ಲಘುವಾಗಿ ಉರ್ಫಿ ಪರಿಗಣಿಸಿದಂತಿದ್ದಾರೆ. ಹಾಗಾಗಿಯೇ ಇನ್​ಸ್ಟಾಗ್ರಾಂನಲ್ಲಿ ನನ್ನ ದೈನಂದಿನ ಜೀವನದಲ್ಲಿ ಇದೆಲ್ಲ ಮಾಮೂಲು ಎಂದಿದ್ದಾರೆ.

ಇದನ್ನೂ ಓದಿ: 15ರ ಬಾಲಕಿ ಆಗಿದ್ದಾಗಲೇ ಅಶ್ಲೀಲ ಜಾಲತಾಣದಲ್ಲಿ ಬಂದಿತ್ತು ಉರ್ಫಿ ಜಾವೇದ್​ ಫೋಟೋ; ಎದುರಿಸಿದ ಕಷ್ಟ ಒಂದೆರಡಲ್ಲ

ಉರ್ಫಿ ಜಾವೇದ್, ಬಹಳ ಚಿತ್ರ ವಿಚಿತ್ರ ಉಡುಗೆಗಳನ್ನು ಹಾಕಿಕೊಳ್ಳುತ್ತಾರೆ. ತಮ್ಮ ವಿಚಿತ್ರ ಉಡುಗೆಗಳಿಂದಲೇ ಬಹಳ ಖ್ಯಾತಿಯನ್ನು ಜೊತೆಗೆ ವಿರೋಧಿಗಳನ್ನು ಸಹ ಗಳಿಸಿಕೊಂಡಿದ್ದಾರೆ. ಬಹು ಗ್ಲಾಮರಸ್ ಆದ ಉಡುಗೆಗಳನ್ನು ಹಾಕಿಕೊಂಡು ಸಾರ್ವಜನಿಕವಾಗಿ ಫೋಟೊಶೂಟ್ ಮಾಡಿಸಿಕೊಳ್ಳುವ ಉರ್ಫಿ ಮೇಲೆ ಹಲವು ಸಂಪ್ರದಾಯವಾದಿಗಳ ಕಣ್ಣು ಈಗಾಗಲೇ ಬಿದ್ದಿದೆ. ಈಗಾಗಲೇ ಕೆಲವು ಹಿಂದುಪರ ಸಂಘಟನೆಗಳ ಸದಸ್ಯರು ಉರ್ಫಿ ವಿರುದ್ಧ ದೂರು ಸಹ ದಾಖಲಿಸಿದ್ದಾರೆ. ಉರ್ಫಿಗೆ ಈ ಮೊದಲೂ ಸಹ ಅವರ ಫ್ಯಾಷನ್ ಕಾರಣದಿಂದಲೇ ಬೆದರಿಕೆಗಳು ಬಂದಿದ್ದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ