ಬಹುತೇಕ ಬೆತ್ತಲೆಯಾಗಿ ಬಂದು ಒಂದೇ ಕೈಯಲ್ಲಿ ಮಾನ ಮುಚ್ಚಿಕೊಂಡ ನಟಿ ಉರ್ಫಿ ಜಾವೇದ್​

|

Updated on: Apr 19, 2023 | 10:59 AM

ಯಾರು ಏನೇ ಹೇಳಿದರೂ ಉರ್ಫಿ ಜಾವೇದ್​ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈಗಾಗಲೇ ಅವರ ಮೇಲೆ ಅನೇಕ ಕಡೆಗಳಲ್ಲಿ ಕೇಸ್​ ಕೂಡ ದಾಖಲಾಗಿದೆ.

ಬಹುತೇಕ ಬೆತ್ತಲೆಯಾಗಿ ಬಂದು ಒಂದೇ ಕೈಯಲ್ಲಿ ಮಾನ ಮುಚ್ಚಿಕೊಂಡ ನಟಿ ಉರ್ಫಿ ಜಾವೇದ್​
ಉರ್ಫಿ ಜಾವೇದ್
Follow us on

ನಟಿ ಉರ್ಫಿ ಜಾವೇದ್​ (Urfi Javed) ಅವರು ಬೇರೆ ಯಾವುದೇ ಕಾರಣದಿಂದಲೂ ಸುದ್ದಿ ಆಗುವುದಿಲ್ಲ. ಜನರನ್ನು ಸೆಳೆಯಲು ಅವರು ಬಳಸುವ ಏಕೈಕ ತಂತ್ರ ಎಂದರೆ ಅದು ಅರೆಬರೆ ಬಟ್ಟೆ. ಪ್ರತಿ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಅವರು ಅರೆಬೆತ್ತಲಾಗಿ ಪೋಸ್​ ನೀಡುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರ ಫೋಟೋ ಮತ್ತು ವಿಡಿಯೋಗಳು (Urfi Javed Video) ವೈರಲ್​ ಆಗುತ್ತಲೇ ಇರುತ್ತವೆ. ಎಷ್ಟೇ ಟ್ರೋಲ್​ ಆದರೂ ಕೂಡ ಉರ್ಫಿ ಜಾವೇದ್​ ಅವರು ತಮ್ಮ ಚಾಳಿ ಬಿಟ್ಟಿಲ್ಲ. ದಿನದಿಂದ ದಿನಕ್ಕೆ ಅವರ ಮಾದಕತೆ ಹೆಚ್ಚುತ್ತಲೇ ಇದೆ. ಈಗ ಅವರು ಬಹುತೇಕ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಒಂದೇ ಕೈಯಲ್ಲಿ ತಮ್ಮ ಎದೆ ಭಾಗವನ್ನು ಮುಚ್ಚಿಕೊಂಡಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ (Urfi Javed Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಕಟುವಾಗಿ ಕಮೆಂಟ್​ ಮಾಡುತ್ತಿದ್ದಾರೆ.

ಕೆಲವೇ ಗಂಟೆಗಳಲ್ಲಿ ಈ ವಿಡಿಯೋಗೆ 1.5 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿವೆ. ಸಾವಿರಾರು ಜನರು ಕಮೆಂಟ್​ ಮಾಡಿದ್ದಾರೆ. ಬಹುತೇಕ ಎಲ್ಲರೂ ಉರ್ಫಿ ಜಾವೇದ್​ಗೆ ಛೀಮಾರಿ ಹಾಕಿದ್ದಾರೆ. ‘ಈಕೆ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುತ್ತಿದ್ದಾಳೆ. ಮಹಿಳೆಯರು ಸುರಕ್ಷಿತವಾಗಿಲ್ಲ. ಈಕೆ ವಿರುದ್ಧ ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ? ಭಾರತ ಕಾನೂನು ಎಲ್ಲಿದೆ?’ ಎಂದೆಲ್ಲ ಜನರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ
ಅಶ್ಲೀಲ​ ವೆಬ್​ಸೈಟ್​ನಲ್ಲಿ ಉರ್ಫಿ ಜಾವೇದ್​ ಫೋಟೋ; ಪ್ರತಿ ದಿನ ರೇಪ್​ ಬೆದರಿಕೆ: ಶಾಕಿಂಗ್​ ವಿಚಾರ ತೆರೆದಿಟ್ಟ ನಟಿ
ಪ್ಯಾಂಟ್​ ಮೇಲೆ ಪ್ಯಾಂಟ್​ ಅಂಟಿಸಿಕೊಂಡು ಬಂದ ಉರ್ಫಿ ಜಾವೇದ್​; ಇಲ್ಲಿದೆ ವಿಚಿತ್ರ ಅವತಾರದ ವಿಡಿಯೋ
‘ನಂಗೆ ಮರ್ಯಾದೆ ಕೊಡಲ್ಲ, ಸೆಲೆಬ್ರಿಟಿಗಳೇ ಕೆಟ್ಟ ಕಮೆಂಟ್​​ ಮಾಡ್ತಾರೆ’: ಎಲ್ಲವನ್ನೂ ಹೇಳಿಕೊಂಡ ಉರ್ಫಿ ಜಾವೇದ್​
‘ಮುಸ್ಲಿಂ ಹುಡುಗನನ್ನು ಮದುವೆ ಆಗಲ್ಲ’: ಬಲವಾದ ಕಾರಣ ನೀಡಿದ ಮುಸ್ಲಿಂ ನಟಿ ಉರ್ಫಿ ಜಾವೇದ್​

ಯಾರು ಏನೇ ಹೇಳಿದರೂ ಉರ್ಫಿ ಜಾವೇದ್​ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈಗಾಗಲೇ ಅವರ ಮೇಲೆ ಅನೇಕ ಕಡೆಗಳಲ್ಲಿ ಕೇಸ್​ ಕೂಡ ದಾಖಲಾಗಿದೆ. ಆದರೂ ಕೂಡ ಅವರು ಜಗ್ಗಿಲ್ಲ. ತಮಗೆ ಸರಿ ಎನಿಸಿದ್ದನ್ನು ಅವರು ಮಾಡುತ್ತಲೇ ಇದ್ದಾರೆ. ಚಿತ್ರ-ವಿಚಿತ್ರ ವೇಷ ಧರಿಸಿ ಜನರ ಮುಂದೆ ಬರುತ್ತಿದ್ದಾರೆ. ಉರ್ಫಿ ಜಾವೇದ್​ ಅವರನ್ನು ನೆಟ್ಟಿಗರು ಟ್ರೋಲ್​ ಮಾಡುತ್ತಾರಾದರೂ ಫಾಲೋ ಮಾಡೋದನ್ನು ನಿಲ್ಲಿಸಿಲ್ಲ. ಇನ್​ಸ್ಟಾಗ್ರಾಮ್​ನಲ್ಲಿ ಪ್ರಸ್ತುತ ಅವರನ್ನು 41 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಲ್ಲಿಗೆ ಹೂವಿನಿಂದ ಡ್ರೆಸ್ ಮಾಡಿಕೊಂಡ ನಟಿ ಉರ್ಫಿ ಜಾವೇದ್​; ಬಂತು ಅಶ್ಲೀಲ ಕಮೆಂಟ್

ಉರ್ಫಿ ಜಾವೇದ್​ ಬದುಕಿನಲ್ಲಿ ಅನೇಕ ಕಹಿ ಘಟನೆಗಳು ಕೂಡ ನಡೆದಿವೆ. ಆ ಬಗ್ಗೆ ‘ಹೂಮನ್ಸ್​ ಆಫ್​ ಬಾಂಬೆ’ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದರು. 15 ವರ್ಷದ ಬಾಲಕಿ ಆಗಿದ್ದಾಗಲೇ ಉರ್ಫಿ ಜಾವೇದ್​ ಅವರ ಫೋಟೋವನ್ನು ಯಾರೋ ಕಿಡಿಗೇಡಿಗಳು ಅಶ್ಲೀಲ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಮಾಡಿದ್ದರು. ಇದರಿಂದ ಉರ್ಫಿ ಜಾವೇದ್​ ಅನೇಕ ತೊಂದರೆ ಅನುಭವಿಸಬೇಕಾಯಿತು.

ಇದನ್ನೂ ಓದಿ: Urfi Javed: ಕುತ್ತಿಗೆ ತನಕ ಪ್ಯಾಂಟ್​ ಧರಿಸಿ ಬಂದ ಉರ್ಫಿ ಜಾವೇದ್​; ವಿಚಿತ್ರ ಅವತಾರದ ಫೋಟೋ ವೈರಲ್​

‘ನನಗೆ 15 ವರ್ಷ ಆಗಿದ್ದಾಗ ಯಾರೋ ನನ್ನ ಫೋಟೋವನ್ನು ಅಶ್ಲೀಲ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದರು. ಅದು ತುಂಬ ಸರಳವಾದ ಫೋಟೋ ಆಗಿತ್ತು. ನನ್ನ ಫೇಸ್​ಬುಕ್​ ಖಾತೆಯಿಂದ ಅದನ್ನು ತೆಗೆದುಕೊಳ್ಳಲಾಗಿತ್ತು. ನಿಧಾನವಾಗಿ ಆ ಫೋಟೋ ಎಲ್ಲರಿಗೂ ಕಾಣಿಸಲು ಆರಂಭ ಆಯಿತು. ಎಲ್ಲರೂ ನನ್ನನ್ನು ಅಶ್ಲೀಲ ಸಿನಿಮಾ ನಟಿ ಎಂದು ಕರೆಯಲು ಶುರುಮಾಡಿದರು. ನನ್ನ ವಿಡಿಯೋ ಎಲ್ಲಿದೆ ಅಂತ ನಾನು ಪ್ರಶ್ನಿಸಿದೆ. ಆದರೂ ಕೂಡ ನೀನು ನೀಲಿಚಿತ್ರದ ನಟಿ ಅಂತಲೇ ಜನರು ವಾದಿಸಿದರು’ ಎಂದಿದ್ದರು ಉರ್ಫಿ ಜಾವೇದ್​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.