ನಟಿ ಊರ್ವಶಿ ರೌಟೇಲಾ ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ವಿವಾದಗಳು ಇದ್ದರೆ ಹೋಗಿ ಅದನ್ನು ಬಿಗಿದಪ್ಪುತ್ತಾರೆ. ಈಗ ಊರ್ವಶಿ ಅವರು ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಬಾಲಯ್ಯ ಅವರ 109ನೇ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಕಾಲಿಗೆ ಪೆಟ್ಟಾಗಿದೆ. ಹೀಗಾಗಿ, ಶೂಟಿಂಗ್ನ ಅರ್ಧಕ್ಕೆ ಬಿಟ್ಟು ಅವರು ಆಸ್ಪತ್ರೆ ಸೇರಿದ್ದಾರೆ. ಅವರ ಪ್ರಾಣಕ್ಕೆ ಯಾವುದೇ ತೊಂದರೆ ಆಗಿಲ್ಲ ಎಂದು ವರದಿ ಆಗಿದೆ.
ಬಾಲಯ್ಯ ಅವರ ಸಿನಿಮಾದಲ್ಲಿ ಊರ್ವಶಿ ನಟಿಸುತ್ತಿದ್ದಾರೆ. ಆ್ಯಕ್ಷನ್ ದೃಶ್ಯ ಮಾಡುವಾಗ ಅವರ ಕಾಲಿಗೆ ಪೆಟ್ಟಾಗಿದೆ. ಕಾಲು ಮುರಿದಿರುವುದರಿಂದ ಅವರಿಗೆ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಅವರು ಕಾಲಿನ ಫೋಟೋ ಹಂಚಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಬಾಲಯ್ಯ ಅವರು ಇಷ್ಟು ದಿನ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಇದ್ದರು. ಅವರು ಶಾಸಕ ಕೂಡ ಆಗಿದ್ದಾರೆ. ಬಾಲಯ್ಯ ಅವರು ‘NBK 109’ ಚಿತ್ರದ ಶೂಟಿಂಗ್ನ ಇನ್ನೂ ಆರಂಭ ಮಾಡಿಲ್ಲ ಎಂದು ಹೇಳಿದ್ದರು. ಚುನಾವಣೆ ಮುಗಿದು ಫಲಿತಾಂಶ ಬಂದ ಬಳಿಕ ಅವರು ಶೂಟಿಂಗ್ ಆರಂಭಿಸಿದ್ದಾರೆ. ಬಾಬಿ ಕೊಲ್ಲಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ಅವರು ಪ್ರಮುಖ ಪಾತ್ರ ಮಾಡಿದರೆ ಬಾಬಿ ಡಿಯೋಲ್, ಊರ್ವಶಿ ರೌಟೇಲಾ ಮೊದಲಾದವರು ನಟಿಸಿದ್ದಾರೆ. ಎಸ್ ಥಮನ್ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ ಸಿನಿಮಾದ ಟೈಟಲ್ ಹಾಗೂ ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಪಡೆದ ಊರ್ವಶಿ ರೌಟೇಲಾ
ಊರ್ವಶಿ ರೌಟೇಲಾ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಆ್ಯಕ್ಷನ್ ಸಿನಿಮಾ ‘ಬಾಪ್’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸನ್ನಿ ಡಿಯೋಲ್, ಮಿತುನ್ ಚಕ್ರವರ್ತಿ, ಸಂಜಯ್ ದತ್ ನಟಿಸುತ್ತಿದ್ದಾರೆ. ‘ಇನ್ಸ್ಪೆಕ್ಟರ್ ಅವಿನಾಶ್ 2’ ಚಿತ್ರದಲ್ಲಿ ರಣದೀಪ್ ಹೂಡಾ ಜೊತೆ ತೆರೆ ಹಂಚಿಕೊಂಡಿದ್ದಾರೆ. ದುಲ್ಖರ್ ಸಲ್ಮಾನ್ ಜೊತೆಗೂ ಅವರು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ಈ ಮೊದಲು ಅವರು ರಿಷಬ್ ಶೆಟ್ಟಿ ಜೊತೆ ಫೋಟೋ ಹಂಚಿಕೊಂಡು ‘ಕಾಂತಾರ 2’ ಎನ್ನುವ ಹ್ಯಾಶ್ಟ್ಯಾಗ್ ನೀಡಿದ್ದರು. ಈ ಮೂಲಕ ಅವರು ಕೂಡ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರನ್ನು ಆಯ್ಕೆ ಮಾಡಿಕೊಂಡಿಲ್ಲ ಎಂದು ರಿಷಬ್ ಅವರು ಸ್ಪಷ್ಟನೆ ನೀಡದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.