
‘ಪ್ರೇಮಿಗಳ ದಿನ’ ಆರಂಭಕ್ಕೆ ಉಳಿದಿರೋದು ಇನ್ನು ಕೆಲವೇ ದಿನಗಳು ಮಾತ್ರ. ಫೆಬ್ರವರಿ 14ರಂದು ಎಲ್ಲ ಕಡೆಗಳಲ್ಲಿ ಪ್ರೇಮಿಗಳ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ತಮ್ಮಿಷ್ಟದ ಹುಡುಗಿ/ಹುಡಗನಿಗೆ ಪ್ರಪೋಸ್ ಮಾಡುವ ಕೆಲಸ ಆಗಲಿದೆ. ವಿಶೇಷ ಎಂದರೆ ಪ್ರೇಮ ಕಥೆಯನ್ನು ಹೊಂದಿರೋ ಸಿನಿಮಾಗಳು ಕೂಡ ಈ ಸಮಯದಲ್ಲಿ ರೀ ರಿಲೀಸ್ ಕಾಣುತ್ತಿವೆ. ಈ ಮೂಲಕ ಈ ವರ್ಷದ ಪ್ರೇಮಿಗಳ ದಿನಾಚರಣೆ ಸಾಕಷ್ಟು ವಿಶೇಷವಾಗಿರಲಿದೆ.
ಅಮಿತಾಭ್ ಬಚ್ಚನ್ ನಟನೆಯ ‘ಸಿಲ್ಸಿಲಾ’ ಸಿನಿಮಾ 1981ರಲ್ಲಿ ರಿಲೀಸ್ ಆಗಿತ್ತು. ಇದು ತ್ರಿಕೋನ ಪ್ರೇಮಕಥೆಯನ್ನು ಹೊಂದಿತ್ತು. ಅಮಿತಾಭ್ ಜೊತೆ ಜಯಾ ಬಚ್ಚನ್, ರೇಖಾ, ಶಶಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಫೆಬ್ರವರಿ 7ರಂದು ಮರಳಿ ತೆರೆಗೆ ಬರುತ್ತಿದೆ.
ಶ್ರೀದೇವಿ ನಟನೆಯ ‘ಚಾಂದಿನಿ’ ಸಿನಿಮಾ ವ್ಯಾಲೆಂಟೈನ್ಸ್ ಡೇ ದಿನ ತೆರೆಗೆ ಬರುತ್ತಿದೆ. ಫೆಬ್ರವರಿ 14ರಂದು ಈ ಚಿತ್ರ ಬಿಡುಗಡೆ ಕಾಣುತ್ತಿದೆ. ಯಶ್ ಚೋಪ್ರಾ ನಿರ್ದೇಶನದ ಈ ಚಿತ್ರದಲ್ಲಿ ರಿಷಿ ಕಪೂರ್, ವಿನೋದ್ ಖನ್ನಾ, ಶ್ರೀದೇವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಪ್ರೇಮ ಕಥೆಯನ್ನು ಹೊಂದಿತ್ತು.
ಕರೀನಾ ಕಪೂರ್ ಹಾಗೂ ಶಾಹಿದ್ ಕಪೂರ್ ನಟನೆಯ ‘ಜಬ್ ವಿ ಮೆಟ್’ ಸಿನಿಮಾ ಒಂದು ಕ್ಯೂಟ್ ಲವ್ಸ್ಟೋರಿಗಳಲ್ಲಿ ಒಂದು. ಈ ಸಿನಿಮಾ ದೊಡ್ಡ ಹೆಸರು ಮಾಡಿತ್ತು. ಈ ಸಿನಿಮಾ ಫೆಬ್ರವರಿ 14ರಂದು ರೀ-ರಿಲೀಸ್ ಆಗುತ್ತಿದೆ. ಈ ಚಿತ್ರ ಪ್ರೇಮಿಗಳ ದಿನ ರೀ-ರಿಲೀಸ್ ಆಗುತ್ತಿರೋದು ಇದು ಸತತ ಮೂರನೇ ಬಾರಿಗೆ ಅನ್ನೋದು ವಿಶೇಷ.
ರಣಬೀರ್ ಕಪೂರ್, ದೀಪಿಕಾ ಪಡುಕೋಣೆ, ಬಿಪಾಶಾ ಬಸ್ಸು ಮೊದಲಾದವರು ನಟಿಸಿರೋ ‘ಬಚ್ನಾ ಏ ಹಸಿನೋ’ ಸಿನಿಮಾ ಕೂಡ ಫೆಬ್ರವರಿ 14ರಂದು ಮತ್ತೆ ರಿಲೀಸ್ ಆಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಶಾರುಖ್ ಖಾನ್ ಮನೆಯ ಪಕ್ಕದಲ್ಲೇ ಮನೆ ಖರೀದಿಸಿದ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ನಟನೆಯ, ‘ಪದ್ಮಾವತ್’, ‘ದಿಲ್ ತೋ ಪಾಗಲ್ ಹೇ’, ‘ಬರೇಲಿ ಕಿ ಬರ್ಫಿ’, ರೀತಿಯ ಚಿತ್ರಗಳು ತೆರೆಗೆ ಬರೋಕೆ ರೆಡಿ ಆಗಿವೆ. ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಸಿನಿಮಾಗಳು ಬಿಡುಗಡೆ ಕಾಣುತ್ತಿವೆ. ಈ ಮೂಲಕ ಪ್ರೇಮಿಗಳ ದಿನವನ್ನು ಮತ್ತಷ್ಟು ವಿಶೇಷವಾಗಿ ಮಾಡಲು ಈ ಚಿತ್ರಗಳು ರೆಡಿ ಆಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:04 pm, Wed, 5 February 25