ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲು; ಹೇಗಿದೆ ಅವರ ಆರೋಗ್ಯ ಪರಿಸ್ಥಿತಿ?

| Updated By: ರಾಜೇಶ್ ದುಗ್ಗುಮನೆ

Updated on: May 01, 2022 | 9:55 PM

ಧರ್ಮೇಂದ್ರ ಅವರಿಗೆ ಕೆಲ ದಿನಗಳ ಹಿಂದೆ ಅನಾರೋಗ್ಯ ಉಂಟಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದೆವು. ಮುಂದಿನ ಕೆಲವು ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್​ ಮಾಡಲಾಗುವುದು.

 ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲು; ಹೇಗಿದೆ ಅವರ ಆರೋಗ್ಯ ಪರಿಸ್ಥಿತಿ?
ಧರ್ಮೇಂದ್ರ
Follow us on

ಬಾಲಿವುಡ್​ನಲ್ಲಿ (Bollywood) ಹಲವು ದಶಕಗಳ ಶ್ರಮಿಸಿರುವ ಹಿರಿಯ ನಟ ಧರ್ಮೇಂದ್ರ ಅವರು (Dharmendra) ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವಾರವೇ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರಿಗೆ ನುರಿತ ವೈದ್ಯರ ತಂಡ ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದು, ಆರೋಗ್ಯದಲ್ಲಿ ಈಗ ಕೊಂಚ ಚೇತರಿಕೆ ಕಂಡಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

‘ಧರ್ಮೇಂದ್ರ ಅವರಿಗೆ ಕೆಲ ದಿನಗಳ ಹಿಂದೆ ಅನಾರೋಗ್ಯ ಉಂಟಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದೆವು. ಮುಂದಿನ ಕೆಲವು ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್​ ಮಾಡಲಾಗುವುದು. ಮಂಗಳವಾರ ಅವರನ್ನು ಆಸ್ಪತ್ರೆಯಿಂದ ಕರೆದೊಯ್ಯುವ ಸಾಧ್ಯತೆ ಇದೆ. ಅಭಿಮಾನಿಗಳು ಚಿಂತಿಸುವ ಅಗತ್ಯವಿಲ್ಲ’ ಎಂದು ಅವರ ಕುಟುಂಬದ ಆಪ್ತರು ಹೇಳಿರುವುದಾಗಿ ಇಂಡಿಯ್​ ಎಕ್ಸ್​ಪ್ರೆಸ್ ವರದಿ ಮಾಡಿದೆ. ಧರ್ಮೇಂದ್ರ ಅವರು ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಅವರ ವಯಸ್ಸು 85 ವರ್ಷ ದಾಟಿದೆ. ಈ ಕಾರಣಕ್ಕೆ ಅವರಿಗೆ ವಯೋ ಸಹಜ ಕಾಯಿಲೆಗಳು ಸುತ್ತಿಕೊಳ್ಳುತ್ತಿವೆ ಎನ್ನಲಾಗಿದೆ.

ಧರ್ಮೇಂದ್ರ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 1960ರಲ್ಲಿ. ‘ದಿಲ್​ ಬಿ ತೇರಾ ಹಮ್ ಭಿ ತೆರೆ’ ಸಿನಿಮಾ ಅವರ ಮೊದಲ ಚಿತ್ರ. ಈ ಸಿನಿಮಾ 1960ರಲ್ಲಿ ತೆರೆಗೆ ಬಂತು. ನಂತರ 2009ರವರೆಗೂ ಅವರು ಹಲವು ಚಿತ್ರಗಳಲ್ಲಿ ನಟಿಸಿದರು. 2010ರಿಂದ ಈಚೆಗೆ ನಟನೆಯಲ್ಲಿ ಅವರು ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. 2018ರಲ್ಲಿ ತೆರೆಗೆ ಬಂದ ‘ಯಮ್ಲಾ ಪಗ್ಲಾ ದಿವಾನಾ: ಫಿರ್​ ಸೆ’ ಸಿನಿಮಾದ ಬಳಿಕ ಅವರು ನಟನೆಯಿಂದ ಬ್ರೇಕ್ ತೆಗೆದುಕೊಂಡರು.

ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್ ಅವರು ನಟಿಸುತ್ತಿರುವ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಮೂಲಕ ಧರ್ಮೇಂದ್ರ ಅವರು ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕರಣ್ ಜೋಹರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶನಕ್ಕೆ ಕರಣ್ ಅವರ ಮರಳುತ್ತಿದ್ದಾರೆ. ಜಯಾ ಬಚ್ಚನ್ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸನ್ನಿ ಡಿಯೋಲ್ ಹಾಗೂ ಬಾಬಿ ಡಿಯೋಲ್ ಧರ್ಮೇಂದ್ರ ಅವರ ಮಕ್ಕಳು.

ಇದನ್ನೂ ಓದಿ: ಅಕ್ಷಯ್​​ ಬಳಿಕ ಯಶ್​ಗೆ ಪಾನ್​ ಮಸಾಲ ಆಫರ್; ಎಷ್ಟು ಕೋಟಿ ಕೊಟ್ರೂ ಈ ಕೆಲಸ ಮಾಡಲ್ಲ ಎಂದ ನಟ​

ಮದುವೆ ಬಳಿಕ ಕೆಲಸಕ್ಕೆ ಹೊರಟ ಆಲಿಯಾ ಭಟ್​; ವಿಮಾನ ನಿಲ್ದಾಣದ ಎದುರು ಕಾಣಿಸಿಕೊಂಡ ಸುಂದರಿ